ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ನೀನೆ ವೇಲಾಪುರಿ ಶ್ರೀ ಚನ್ನರಾಯಾ ಪ ಪೊಳೆವ ನಂದನವನದಲಲರ್ದ ಮಾವಿನ ನೆಳಲ ಲಲರುವಾ ಸಿರಿತೋಳ ತಲೆಗಿಂಬನೊರಗೀ ಅಳಿಯ ಮೃದುಗಾನಕ್ಕೆ ತಲೆದೂಗುತಲೆ ನುಡಿದ ವಿಲಸಿತದ ಸರಸ ವಚನವ ಚೆನ್ನರಾಯಾ 1 ಬೆಳದಿಂಗಳೆರಕದಂದದ ಸಾರದ್ಹಂದರದಿ ಪೊಳೆವಿಂದುಕಾಂತದ ಜಗುಲಿಯೊಳೆನ್ನ ತಲೆಯ ಮಗ್ಗಲನೊರಗಿ ಸುಳಿವೆಲರಗಾಳಿಗಂಜಿಸುತ ಕಲೆಯರಿತು ಮೈಮರಸಿದುದ ಚನ್ನರಾಯಾ 2 ತನುಮಿಸುಕೆ ಬಹುವಿಧದಿ ಧ್ವನಿಗೈವ ಶಕುನಿ ಪೆಸ- ರಿನ ಮಂಚದಲಿ ಹಂಸತೂಲ ತಲ್ಪದಲಿ ಮನಸಿಜಾಗಮವರಿತು ಮನವ ಮೆಚ್ಚಿಸಿದೆ ಎ- ನ್ನಿನಿಯ ಶ್ರೀ ವೈಕುಂಠಪತಿ ಚೆನ್ನರಾಯಾ 3
--------------
ಬೇಲೂರು ವೈಕುಂಠದಾಸರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಹರಿ ಪುಟ್ಟಿಸಿದಾ ವೃಕ್ಷದಿ ಪುಟ್ಟಿದ ಎಳೆಸಸಿಯೆ ಬಾಳೆನ್ನ ಕುಲದಾ ಬೆಳದಿಂಗಳೆ ಪ. ತಂದೆ ತಾಯಿಯ ಮಾತು ಮರೆಯದಿರು ಎಲೆಸಸಿಯೆ ಇಂದಿರಾಪತಿ ಕರುಣಕ್ಕೆ ಪಾತ್ರನೆಂದೆನಿಸಿ ಇಂದು ನೀನಖಿಳಜನ ಸಂದಣಿಯೊಳು ಬೆಳಗು ಚಂದ್ರ ಬಾನೊಳಗೆಸೆವ ತೆರನಂತೆ ಪೊಳೆದು1 ಬಾ ಹಿರಿಮೆ ಬೇಡವು ನಿನಗೆ ಹಿರಿಯರಾಜ್ಞೆಲಿರಿರಲು ಕರೆಕರೆಯುಬಾರದೊ ತರಳ ಶಿಶುವೆ ಹಿರಿಮೆಗೆ ಕೊರತೆಯುಂಟೆ ಗುರುಹಿರಿಯರಾಜ್ಞೆಯಲಿರಲು ದುರುಳರನು ಸರಸದೊಳು ಕೆಣಕದಿರು ಎಲೆಸಸಿಯೆ 2 ದಧಿ ಮಧುರಾಕಿಂತ ಅಧಿಕದ ಚೊಕ್ಕ ಮಾತುಗಳಾಡು ನಿನ್ನ ದಿಟ್ಟ ಬಾಯೊಳಗೆ ಚಿಕ್ಕವನಲ್ಲವೇ ಭಕ್ತಪ್ರಲ್ಹಾದ ಧ್ರುವ ಕೇಳೊ ಅವರಂತೆ ಚಿಕ್ಕ ಶ್ರೀ ಶ್ರೀನಿವಾಸನ ಹರಕೆಯಲಿ ಬಾಳೊ 3
--------------
ಸರಸ್ವತಿ ಬಾಯಿ
ಎಂದು ಬಹನಮ್ಮ ಯಾದವರರಸನುಎಂದು ಬಹನಮ್ಮ ಪ.ತಂದು ತೋರೆಲೆ ಗಜಗಾಮಿನಿ ಯದುಕುಲ ತಿಲಕನಕಂದುಗೊರಳಗೊಲ್ಲ ಚಂದದಿಎಂದಿಗೆ ಅವ ನಮ್ಮ ಕಾಡುವಇಂದುವದನೆಪೋಗೆ ಬ್ಯಾಗೆ1ಯಾಕೆ ಗೋಕುಲ ನಮಗ್ಯಾಕೆ ವೃಂದಾವನಸಾಕುವರ್ಯಾರಮ್ಮ ನಮ್ಮನುಶ್ರೀಕಾಂತನಿಲ್ಲದೆ ನಿಮಿಷ ಯುಗವಾಯಿತುಪೋಕನಲ್ಲವೆ ಕ್ರೂರ ಅಕ್ರೂರ 2ಮುಡಿಗೆ ಮಲ್ಲಿಗೆಭಾರಕಣ್ಣಿಗೆ ಅಂಜನಭಾರನಡುಮಧ್ಯಕೆ ನಿರಿಭಾರವೆಅಡಿಗೆಅಂದುಗೆಭಾರನುಡಿವ ಕೀರವಉರಜಡಿವಸಮೀರಸಖಿಯೆ ಸಖಿಯೆ3ಬೆಳದಿಂಗಳೆನಗೆ ಬಿಸಿಲಾಗಿ ತೋರುತಲಿದೆ ಬಗೆ ಬಗೆ ಪುಣ್ಯದ ಮಾಲಿಕೆಯುಅಲ್ಲೆ ಪಿಕಗಾನವು ಕಿವಿಗತಿಕಠಿಣವುಒಲ್ಲೆಅಗರುಚಂದನಲೇಪತಾಪ4ಯಾಕೆ ಕಸ್ತೂರಿ ಗಂಧ ನಮಗ್ಯಾಕೆ ಚಂಪಕಮಾಲೆಲೋಕನಾಯಕ ತಾನಿಲ್ಲದೆಶ್ರೀಕಾಂತನಿಲ್ಲದೆ ನಿಮಿಷ್ಯುಗವಾಯಿತು ಕಂಡಿದ ಪ್ರಸನ್ವೆಂಕಟ 5
--------------
ಪ್ರಸನ್ನವೆಂಕಟದಾಸರು