ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1 ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2 ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4 ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5
--------------
ಶ್ರೀಪಾದರಾಜರು
ದೇವತಾ ಸ್ತುತಿ ರಾಧೆ ತಿಲಕದ ಒಲುಮೆ ಮೇಲು ರಾಧೇ ನಿನ್ನ ತಿಲಕದೊಲುಮೆ ಪ ತಿಲಕದೊಲುಮೆ ಹರಿ ಬಂಧ ಒಲುಮೆ ಘಿÀಲುಘಿÀಲುಕುಲು ಗೆಜ್ಜೆ ಕಾಲು ರಾಧೇ ನಿನ್ನ ಅ.ಪ. ಕುಂಕುಮ ಕರದು ಹಚ್ಚಿ ವಂಕಿ ಬಾಜು ಬಂದಿನಿಟ್ಟು ಪಂಕಜಾಕ್ಷನೆತ್ತಿಕೊಂಬೊ ತೋಳು ರಾಧೆ ನಿನ್ನ 1 ಉಟ್ಟುದು ಪೈಠಣಿ ಸೀರೆ ತೊಟ್ಟುದು ಬುಟ್ಟುದ ಕುಪ್ಪಸ ಮುಟ್ಟಿದರೆ ಮಾಸುವದು ಶಾಲು ರಾಧೇ ನಿನ್ನ 2 ಕೈಗೆ ಬಂಗಾರದ ಬಳೆ ಕಿವಿಗೆ ಪರಿಜನ ವಾಲೆ ರಂಗಯ್ಯ ಕರೆದರೆ ನೀ ಹೋ ಎಂಬೊ ರಾಧೆ ನಿನ್ನ 3 ಮಂಗಳಸೂತ್ರವು ಬೆಳದಿಂಗಳು ಪೊಳೆವಂತೆ ತೆಂಗು ಬ್ಯಾಳೆ ಮಣಿಯೆಣ್ಣೆ ನೂಲು ರಾಧೆ ನಿನ್ನ 4 ಪಿಲ್ಯ ಕಾಲುಂಗುರ ಕಿರು ಬಲ್ಯ ಆಣಿಮೆಂಟು ಧೈರ್ಯದಲಿ ಮೆರೆವ ಗಿಳಿಗೇಲು ರಾಧೆ ನಿನ್ನ 5 ಚೌರಿ ರಾಗಟಿ ಗೊಂಡೆ ಹೆರಳು ಬಂಗಾರವೂ ಚಂದಿರ ಪ್ರಫುಲ್ಲ ಮುತ್ತಿನ ಬಟ್ಟು ರಾಧೆ ನಿನ್ನ6 ದಿಟ್ಟ ಹಗಲೊಳು ಶ್ರೀದವಿಠಲನ್ನ ಯೇರಿಕೊಂಡು ಬಟ್ಟ ಬಯಲೊಳಗೆ ಕೇಳೇ ರಾಧೆ ನಿನ್ನ 7
--------------
ಶ್ರೀದವಿಠಲರು
ಮನವೆ ಎಲೆ ಮನವೆ ನೀನು ಯೋಚಿಸಿ ಕೆಡುವುದು ಅನುಚಿತವಲ್ಲೆ ಪ ನೀ ಮನನಮಾಡಿದ ಸಂಸಾರಿರದು ಕಾನನದ ಬೆಳದಿಂಗಳು ಇದು ಪರಿ ತಿಳಿದು ಹೀನಯೋಚನೆ ಬಿಟ್ಟು ಧ್ಯಾನಕವಚ ತೊಟ್ಟು ಜ್ಞಾನವೆಂಬಾಯುಧಪಾಣಿಯಾಗೆಲೊ ಬೇಗ 1 ಈ ದೇಹವೆಂಬುವ ಕಾಂತಾರ್ಹೊಕ್ಕು ಉಪಾ ಯುದ್ಹುಲಿಗಳ ತರಿದ್ಹಾಕು ಮಹಮಾಯ ಕೋಣಗಳೆಂಟು ನೂಕು ದಾಯಾದ್ಯೈವರ ಕೊಂದು ಜೀವಘಾತಕರಾದ ಮೂವರಂ ಭಂಜಿಸಿ ದ್ವಯಮಾರ್ಗ ಗೆಲಿಯೆಲೊ 2 ಕಂಟಕ ಬದಿಗಿಟ್ಟು ಬಹ ಆರೊಂದು ನದಿಗಳ ದಾಂಟು ಭೋರ್ಗರೆವ ಸರ್ಪನ ಹೆಡೆ ಮೆಟ್ಟು ಮಾರಾರಿ ವಿನಮಿತ ಧೀರ ಶ್ರೀರಾಮಪಾದ ವಾರಿಜಕ್ಕೆರಗಿ ಗಂಭೀರ ಸುಖದಿ ಮೆರಿ 3
--------------
ರಾಮದಾಸರು
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು