ಒಟ್ಟು 60 ಕಡೆಗಳಲ್ಲಿ , 22 ದಾಸರು , 41 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿ ನಿತ್ಯ ಕಲ್ಯಾಣಿ ಪರಶಿವೆಗೆ || ಅತ್ಯುತ್ತಮ ನವರತ್ನದಿ ಕೆತ್ತಿದ | ಮುತ್ತಿನ ಆರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 1 ಗಂಧ ಕತ್ತುರಿ ಪರಿಮಳದಿ || ಕುಂದಣದಾರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 2 ಪರಿಪರಿ ಸುಮದಲಿ ಶೃಂಗರಿಸಿ || ವರ ಸುಮದಾರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 3 ಮಂಗಳ ಗೌರಿ ಕೃಪಾಕರಿಗೆ | ಮಂಗಳದಾಯಕಿ ಶಂಕರಿಗೆ || ಮಂಗಳಾರತಿಯ ಬೆಳಗುವೆನು || ದೇವಿಗಾರತಿಯ ಬೆಳಗುವೆನು4
--------------
ವೆಂಕಟ್‍ರಾವ್
(ಏ) ಸಂಪ್ರದಾಯದ ಹಾಡುಗಳು ಆರತಿ ಬೆಳಗುವೆ ನಿನಗೆ ಶ್ರೀರಾಮ ಸಾರಸಾಕ್ಷ ಹರಿ ಮೇಘಶ್ಯಾಮ ಪ ಪೀತಾಂಬರಧರ ತುಲಸೀಮಾಲ ಪಾತಕ ವಿದಳನ ಸೀತಾಲೋಲ 1 ಕುಂಡಲ ಮೃಗಮದತಿಲಕ ನಿರುಪಮ ಸುಂದರ ಮನ್ಮಥ ಜನಕ 2 ಭರತ ಶತ್ರುಘ್ನರ ಚಾಮರ ಸೇವ ಹರುಷದಿ ತೋರುವ ಪರಮಪ್ರಭಾವ 3 ಸೋದರ ಲಕ್ಷ್ಮಣ ಹನುಮ ಸಮೇತ ಮೋದದಿ ಮಾತೆಯರನು ಪೊರೆದಾತ 4 ಶುಕ ಮುನಿನುತ ಶುಭನಾಮ ಪತಿ ಪೂರ್ಣಸುಕಾಮ 5 ಶರಣಾಗತ ಪರಿಪಾಲಕ ಶೌರಿ ಕರುಣಾಕರ ಕಲಿವೈರಿ ಮುರಾರಿ 6 ಜಾಜೀಶ ಚನ್ನಕೇಶವ ಮೂರ್ತಿ ಅಗಣಿತ ಕೀರ್ತಿ 7
--------------
ಶಾಮಶರ್ಮರು
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಆರತಿ ಬೆಳಗುವೆ ನಾ ಸದ್ಗುರುವಿಗೆ ಪ ಭಾವದ ಪೊಂಬ್ಹರಿವಾಣ ಭಕುತಿಯಾ ತೀವಿದ್ಯಾರತಿಜ್ಞಾನ ಜ್ಯೋತಿಯಲಿತ್ತಿ1 ಮುಖದಲಿ ನುಡಿಯುತ ನಾಮಾವಳಿಯೂ ಸಕಲರು ಪ್ರೇಮದಿ ಹಾಕಿ ಚಪ್ಪಾಳಿಯಾ2 ನಯನದಿನೋಡಿ ಶರಣವ ಮಾಡೀ ಭಯವನೀಡಾಡಿ ಸ್ತುತಿಗಳ ಪಾಡಿ3 ಇಂದಿನ ದಿನದಾನಂದವು ನಮಗ ಹಿಂದಿನ ಪುಣ್ಣ್ಯಿದಿರಿಟ್ಟಿತು ಈಗ 4 ಒಡಲ್ಹೊಕ್ಕು ಮಹಿಪತಿನಂದನೊಡಿಯನಾ ಪಡೆಯ ಬನ್ನಿರೀಬ್ಯಾಗ ಮುಕುತಿಯ ಸಾಧನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆ ವಾರಿಧಿಶಯನಗೆ ಮಾರನಪಿತನಿಗೆ ನಾರದಸುತಗೆ ಪ ಸಾರಸನಾಭಗೆ ನೀರಜಗಾತ್ರಗೆ ಶ್ರೀರಮೆಯರಸಗೆ ನಾರಿಯರೊಡನೆ ಅ.ಪ ಮುರಳಿಯನೂದುವ ತರಳ ಶ್ರೀಕೃಷ್ಣಗೆ ಶರಣರ ದುರಿತವ ಪರಹರಿಸುವಗೆ ಕರುಣಜಲಧಿ ಮಾಂಗಿರಿರಂಗಯ್ಯಗೆ ಸರಸತಿ ಪಾರ್ವತಿ ತರುಣಿಯರೊಡನೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆರತಿ ಬೆಳಗುವೆ ಶ್ಯಾಮಸುಂದರ ಶ್ರೀ ಮಾರಜನಕನಿಗೆ ಮುದದಿಂದ ಪ ಮೂರುತಿ ಪರಮನಿಗೆ ಅ.ಪ ಭವ ಶರಣರಿಗೊಲಿಯುವ ಶಾಂತನಿಗೆ ಮೃಗಮದತಿಲಕದ ಮುಖದವಗೇ1 ಒಲೆವ ಮುತ್ತು ರತ್ನದ ಮಾಲೆಗಳ ಒಲಿದುಧರಿಸಿಹ ವೈಜಯಂತಿಯಲಿಲ ನಲಿಯುವ ಪಂಕಜನಾಭನಿಗೆ 2 ಪರತರ ಪದ್ಮವ ಪಿಡಿದಿರುವ ಕಿರು ನಡುಗೊಡ್ಯಾಣವ ನಿಟ್ಟಿಹಗೇ 3 ಶಿರಮಣಿ ಪಚ್ಚೆಯ ಪದಗಳಿಗೆ ಜಾಜೀಶ ಕೇಶವಗೆ4
--------------
ಶಾಮಶರ್ಮರು
ಆರತಿ ಬೆಳಗುವೆನಾ :ಮಹಿಪತಿ ಗುರುವಿನಾ ದೋರುವ ಪಾದುಕಿಗೆ :ಒಪ್ಪಿಸಿ ಜೀವಪ್ರಾಣ ಪ ಜಡಜೀವತಾರಿಸಲಿ :ವಸ್ತುಗುರುರೂಪತಾಳಿ ಪೊಡವಿಲಿನ್ನು ಮಹಿಮೆದೋರಿ ನಿಂತ ವಿಶ್ವಾತ್ಮದಲ್ಲಿ 1 ಇದ್ದಲ್ಲೆ ಭಾವಿಸಲಿ ಗುರುಜ್ಞಾನದಾಕೀಲಿ ಬುದ್ಧಿಪ್ರೇರಕನಾಗಿ ಹೇಳುವನು ಮೌನದಲಿ2 ಉದ್ಧವಗಯದುರಾಯಾ ನೀಡಿದಂತೆ ನಮ್ಮಯ್ಯಾ ಮುದ್ದು ಪಾದುಕೆಯಾಕೊಟ್ಟು ಮಾಡೆಂದು ಪೂಜೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿ ಬೆಳಗುವೆನಾ | ಅಸುರವಂದ್ಯಗೆ ಕಾರುಣ್ಯ ವೇದವ್ಯಾಸ ಮುಕುಂದಗೆ ಪ ಸತ್ಯವತೀ ಸುತನಾಗ್ಯವತರಿಸಿದ | ಸತ್ಯ ಸನಾತನ ಮೂರುತಿಗೆ 1 ಅಖಿಲದೋಳಗೆ ಭಾರತ ಭಾಗವತವ ಸಕಲ ಪುರಾಣವ ರಚಿಸಿದವಗೆ 2 ತಾನಿಜಗತಿ ಪದ ದೋರಿದಗೆ 3 ಶರಣಜನರಿಷ್ಟಾರ್ಥವ ನೀಡುತ ಗುರುಮಹೀಪತಿಸುತ ಸಾರಥಿಗೆ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿಯನು ನಾನು ಬೆಳಗುವೆ ನಮ್ಮಪ್ರೇರಿಪ ಪ್ರಭುವ ಪಡೆವೆನೆಂಬ ಪವಿಷಯಂಗಳಾರತಿ ವಿಸ್ತರಿಸಲು ಬಹುವಿಷಮಮಾರ್ಗವ ಕಾಬ ವೊಡಲಿತ್ತವುವಿಷವಾುತಾ ಸುಖ ವಿವಿಧ ಭೋಗಂಗಳುಮೃಷೆಯೆಂದು ಹರಿಯನ್ನೆ ಮಚ್ಚಿಕೊಂಬ 1ಲೋಕಂಗಳೈದಲು ಲೋಪವಾದವುಯೆಲ್ಲಸಾಕಾುತವರಲ್ಲಿ ಸಂಚರಿಸಿಈ ಕುಹಕವ ನಂಬಲೆಲ್ಲವು ಬಹು ದುಃಖಶ್ರೀಕಾಂತನ ಕೂಡಿ ಸುಖವಿರುವ 2ಹದಿನಾಲ್ಕು ಕರಣದ ಹವಣಿನಾರತಿಯಲ್ಲಿಹುದುಗಿಸಿ ಜ್ಞಾನದ ಹೊಸ ದೀಪವಹೃದಯಕಮಲದಲ್ಲಿ ಹೊಂದಿಹ ತಿರುಪತಿಸದನ ವೆಂಕಟಗೆತ್ತಿ ಸುಖಿಯಾಗುವ 3ಓಂ ಶಿಶುಪಾಲ ಶಿರಶ್ಛೇತ್ರೇ ನಮಃ
--------------
ತಿಮ್ಮಪ್ಪದಾಸರು
ಆರುತಿ ಬೆಳಗುವೆವು ಕೃಷ್ಣಗೆ ರಾಧಾಕೃಷ್ಣಗೆ ಬೆಳಗುವೆವು ಪ ಗೋಕುದಲಿ ಹುಟ್ಟಿ | ಗೋವುಗಳನು | ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು 1 ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ | ರಾಧಾಕೃಷ್ಣಗೆ ಬೆಳಗುವೆವು 2 ಶಾಮಸುಂದರನಿಗೆ ಕಾಮಿತಶೀಲ ಕೃಷ್ಣನಿಗೆ ರಾಧಾಕೃಷ್ಣಗೆ 3
--------------
ಶಾಮಸುಂದರ ವಿಠಲ
ಕಲಶಾಬ್ಧಿಜಾತೆ ಸೀತೆಗಾರತಿಯನು ಬೆಳಗುವೆ ಲಲನಾಮಣಿಯ ಸೇರಿ ಸುಖಿಸಿ ನಲಿದು ಪಾಡುವೆ ಪ ಸರಸಿಜಾಸನಾದಿವಿನುತೆ, ಸುರವರಾರ್ಚಿತೆ ಶರದಿಂದುಹಾಸೆÉ ಧರಣಿಜಾತೆ ಕರುಣಿಸೆನ್ನುತೆ 1 ಕಮಲವದನೆ ಕಮಲನಯನೆ ಕಮಲವಾಸಿನೀ ವಿಮಲಚರಣೆ ರಾಮರಮಣಿ ಮಧುರಭಾಷಿಣಿ 2 ಶೇಷಶೈಲಾವಾಸದಯಿತೆ ವಿಶ್ವಸನ್ನುತೆ ಪೋಷಿಸೆನ್ನ ಜನಕಜಾತೆ ಸೀತೆಯೆನ್ನುತೆ 3
--------------
ನಂಜನಗೂಡು ತಿರುಮಲಾಂಬಾ
ಕೇಶವದಾಸಗೆ ಚರಣವ ನೀಡೋ ವಾಸುದೇವನೇ ನಿನ್ನ ಪಾದವ ನೀಡೋ ಪ ಚರಣವ ಗಂಗಾಮೃತದಿಂದ ತೊಳೆಯುವೇ ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ ಚರಣಕ್ಕೆ ಆರತಿ ಬೆಳಗುವೆ ಹರಿಯೇ 1 ಪಾದದೊಳೆನ್ನಯ ಶಿರವಿತ್ತು ಬೇಡುವೆ ನಿತ್ಯ ಕುಡಿಯುತ್ತಲಿರುವೇ ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ ಪಾದದೊಳೀ ತನುವನ್ನು ನಾ ಬಿಡುವೇ 2 ಅಡಿಯನ್ನು ನೋಡಿ ಸಂತೋಷಗೊಳ್ಳುವೆನು ಅಡಿಯನ್ನು ಸೇವಿಸಿ ಭಕ್ತನಾಗುವೆನು ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು ಅಡಿಯನ್ನು ಸೇರಿ ನಾ ಮುಕ್ತನಾಗುವೆನು 3
--------------
ಕರ್ಕಿ ಕೇಶವದಾಸ
ಜಯ ಕೊಲ್ಹಾಪುರ ನಿಲಯೇಶ್ರೀನಿವಾಸನ ಸತಿಯೇ ಸಾಗರರಾಜನ ಸುತೆಯೇನಾರಿಯರೆಲ್ಲದು ಕೂಡಿ ಆರತಿ ಬೆಳಗುವೆವು ಪ ಬಿಳಿಯ ಪತ್ತಲವುಟ್ಟು ಕಡಗ ಕಂಕಣ ತೊಟ್ಟುಜಡೆಗೆ ಮಲ್ಲೆಯ ಮಾಲೆ ಮುಡಿದಾ ವರಮಹಾಲಕ್ಷ್ಮಿಗೆ 1 ಮರುಗ ಮಲ್ಲಿಗೆ ಜಾಜಿ ಪಾರಿಜಾತದ ಕುಸುಮಸಿರಿಯ ಚರಣಕೆ ಅರ್ಪಿಸಲೆಂದು ಜಯ ಜಯ ಜಯ 2 ಬಡವರಾ ಮನೆತನಕೆ ಅಭಿಮಾನವನ್ನಿಟ್ಟುನಿರುತ ಕಳಶದಿ ಕುಳಿತ ಮಹಾಲಕ್ಷ್ಮೀಗೆ ಹಾಡುತ ಪಾಡುವೆವು 3 ಇಂದು ನಮ್ಮ ಸದನಕ್ಕೆ ಬಾ ಎಂದುಗದುಗಿನ ವೀರನಾರಾಯಣನ ಅರಸಿಗೆ ಹಾಡುತ ಪಾಡುವೆವು 4
--------------
ವೀರನಾರಾಯಣ
ಜಯ ಜಯಾ ದೇವ ದೇವಾ ಮಾರ್ತಾಂಡ ಭೈರವಾ ದಯದಿಂದ ಪಾಲಸೆನ್ನಾ ಭಕ್ತರನುದಿನಕಾವಾ ಪ ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1 ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ ಅವಗುಣ ಬಲಮುರಿದೇ | ಜಗಕಭಯವ ಬೀರಿ 2 ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3 ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ದೇವ ಜಯ ದೇವ ಜಯ ಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ಧ್ರುವ ಖಡ್ಗವ ಕರದಲಿ ಪಿಡಿದು ಖಂಡಿಸಿದಙÁ್ಞನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ 1 ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನಮಾಡುವ ಸಹಕಾರ ಸಲಹುವೆ ಭಕ್ತಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿಶೂರ 2 ಪತಿ ಅಹದು ಶ್ರೀಗುರು ಭೂಪತಿ ಬಾಹ್ಯಾಂತ್ರಿ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೊ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು