ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾತ ಎಂಥಾತನೋ ನಮ್ಮಯ ರಂಗ ಎಂಥಾತ ಎಂಥಾತನೋ ಪ ಎಂಥಾತ ಎಂಥಾತ ಚಿಂತಾಯಕ ಭಕ್ತ ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ ದಿವನಿಶಿಯಾಗಿಹ್ಯನೋ ತಾನೆ ತ್ರಿ ಭುವನವ ಬೆಳಗುವನೋ ಸವಿಯದ ಮಹಿಮರಲವಬಿಡದ್ವೇದ ಒಂದೇ ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ 1 ತಿಥಿ ವಾರ ಪಕ್ಷ ತಾನೇ ತಾನೆ ಮಾಸ ನಿತ್ಯ ತಾನೇ ಶ್ರುತಿತತಿ ಯತಿಗಳು ಸತತ ಪೊಗಳುತಿರೆ ಮತಿಗೆ ನಿಲುಕದಂಥ ಅತಿ ಚರಿತ್ರನಿವ 2 ನಗುವಳುವರಲಿ ಈತನೇ ನಿಂತುಕೊಂಡು ಸಿಗಿವ ಬಗಿವರಲೀತನೇ ನಿಗಮಾತೀತನ ಮಹಿಮದ್ಹಗರಣ ತಿಳಿಯದು ಸುಗುಣ ಸಂತರೊಶ ಜಗದಯ್ಯ ಶ್ರೀರಾಮ 3
--------------
ರಾಮದಾಸರು
ಎಂದು ಕಾಂಬೆನು ಪಾಂಡುರಂಗ ಮೂರುತಿಯಾ ಇಂದು ಭಾಗನಿವಾಸ ನರನ ಸಾರಥಿಯ ಪ ಚಾರು ಚರಣಾಂಗುಲಿ ನಖರ ತರುಣೀಂದುಚ್ಛವಿ ತಿರಸ್ಕರಿಸುವ ಪ್ರಖರ ಕಿರುಗೆಜ್ಜೆ ಕಡಗ ನೂಪುರ ಪೆಂಡೆ ಶಫರ ತೆರಜಾನು ಜಂಘೆ ಭಾಸ್ಕರ ರತ್ನ ಮುಕುರ1 ರಂಭಾ ಪೋಲುವ ಊರು ಪೊಂಬಣ್ಣಾಂಬರವ ಕುಂಭೀ ಮಸ್ತಕದೊಲ್ ನಿತಂಬದಿ ಪೊಳೆವ ಕಂಬು ಮೇಖಳಕಂಜ ಗಂಭೀರ ನಾಭೀ ವಿಧಿ ಶಂಭು ಪೂಜಿತನ 2 ಲವಕುಕ್ಷಿತ್ರವಳಿ ಬಾರ್ಗವಿ ವಕ್ಷ ಉರವು ಕೌಸ್ತುಭ ವೈಜಯಂತಿಯ ಸುವಿಶಾಲ ವಕ್ಷದೊಳ್ ವಿವಿಧ ಹಾರಗಳು ನವನೀತ ಚೋರ ಶ್ರೀ ಪವಮಾನಾರ್ಚಿತನ 3 ಪದಕ ಸರಿಗೆಯ ಜಾಂಬೂನದ ಕಂಬುಕಂಠ ರದನೀಕರ ಬಾಹು ಚದುರ ಭುಜಕೀರ್ತಿ ಬದರ ಸಂಕಾಶಾ ಅಂಗದ ರತ್ನ ಕಟಕಾ ಪದಮಾರುಣ ಕರಯುಗ್ಮ ಕಟಿಯಲ್ಲಿಟ್ಟವನಾ4 ವಿಧುಬಿಂಬೋಪಮ ಚಲ್ವವದನ ಕೆಂದುಟಿಯಾ ಬಿದುರಾಭಾದಶನಾಲಿಂಗದನೊಳ್ ಕಿರುನಗೆಯಾ ಕದಪು ಕನ್ನಡಿ ನಾಸಾ ತುದಿ ಚಂಪಕ ತೆನೆಯಾ ಉದಕೇಜಾಯತ ನೇತ್ರಯದುವಂಶೋದ್ಭವನಾ 5 ಕುಂಡಲ ಕರ್ಣ ಸುಲಲಿತ ಭ್ರೂಯುಗಳ ಪೊಳೆವ ಬಾಲ ಶಶಾಂಕ ತಿಲಕಾಂಕಿತ ಫಾಲ ಅಳಿಬಾಲವೆನಿಪ ಕುಂತಳ ರತ್ನ ಚಕಿತ ಕಲಧೌತ ಮಕುಟ ದಿಗ್ವಲಯ ಬೆಳಗುವನ 6 ಮಾನವ ಹರಿಯಾ ವಟುಭಾರ್ಗವ ಕಾಕುಸ್ಥ ಶಠ ಕಂಸದ್ವಿಷನ ನಿಟೆಲಾಂಬಕ ಸಹಾಯ ಖಳಕಟಕಾರಿ ಭೀಮಾ ತಟವಾಸ ಜಗನ್ನಾಥವಿಠಲ ಮೂರುತಿಯ 7
--------------
ಜಗನ್ನಾಥದಾಸರು
ಎಷ್ಟು ಸುಸ್ವರ ಊದುತಿಹನಮ್ಮ ಶ್ರೀಕೃಷ್ಣ ಕೊಳಲನ ಪ ಎಷ್ಟು ಸುಸ್ವರ ಊದುತಿಹನೋ ಗೋಷ್ಠಿಯೊಳು ಗೋವುಗಳಕಿವಿಗಳು ನೆಟ್ಟನಿಲ್ಲಿಗೆ ಕೇಳಿ ಮೋದದಿ ಕಟ್ಟಿದೆಲೆ ಕಣ್ಣಿಗಳಹರಿವವೊಅ.ಪ ತರಣಿ ತನುಜನ ತೀರದಲ್ಲಿಹನೆ ಕೊರಳೊಳಗೆ ಕೌಸ್ತುಭಹರಳಿನಿಂದ ಜಗವ ಬೆಳಗುವನೆ ಕುರುಳು ಕುಣಿಸುತಬಾಲಬಿಂಬದಿಕರ್ಣಕುಂಡಲ ಗಂಡ ಸುಪ್ರಭ ಮರುಳು ಮಾಡುತಮೂರು ಲೋಕವಸಿರಿಯ ಮೋಹಿಪ ಪರಮ ಪುರುಷನು1 ನಗ ಮುರಿಗೆ ತೋಡೆ ಸುಹಾರಭೂಷಿತಉರದಿ ಕುಳಿತಿಹ ಸಿರಿಯ ಮೋಹಿಪ 2 ಅರಗೀಮನೆ ಬಾಂಧವರು ಬೇಕೆ ನಿಜ ಪತಿಗಳೆಮ್ಮನುಮೀರಿ ಪೋದರು ಅಂದರೆನಲೇಕೆ ಮಾರನಯ್ಯನ ಮುರಲಿಸುಸ್ವರಸಾರಿ ಮನಸಪಹಾರ ಮಾಡಿತು ನಾರಿ ಮಣಿಯರೆ ಕ್ಷಣವುತಡೆಯದೆವಾರಿಜಾಸನ ವನಕೆ ತೆರಳಿರೆ 3 ಎಷ್ಟು ಜನ್ಮದ ಪುಣ್ಯವಿರುತಿಹದೆ ಈ ಮುರಲಿ ಬಾಲನಪುಟ್ಟತುಟಿಯಲಿ ಸುಧೆಯ ಸುರಿಸುವದೇಸೃಷ್ಟಿರವ ಬಳ್ಳಿಮನದಲಿ ವೃಷ್ಟಿಹಿಡಿಸದೆ ಕುಸುಮಫಲಗಳುವೃಷ್ಟಿಯಿಂದಲೆ ಹೊರಗೆ ಚೆಲ್ಲುತ ಅಭೀಷ್ಠೆ ಸುರಿಸುತಪೇಳುತಿಹವೊ 4 ಅರುಣನಂದಧಿ ಅದರ ಸೌಭಗವೊ ವನ ನಿಲಯ ಮೃಗಗಳುತೊರೆದು ವೈರವ ಸುತ್ತು ನಿಂತಿಹವೋ ಹರುಷದಲೆ ಮನತೊರೆದು ನಿಲ್ಲಲು ಇಂದಿರೇಶನ ತರುಣಿಯರು ಪೋಗೋಣ ನಡೆಯಿರಿ 5
--------------
ಇಂದಿರೇಶರು
ನೆನೆಯ ಬಾರದೆ ಮನವೆ ಪರಮಪಾವನನ ಪ ಸಾಕಾರದಿಂದ ಸರ್ವವನು ರಕ್ಷಿಪನಜೋಕೆಯಲಿ ತನ್ನ ನೆನೆವವರ ಪಾಲಿಪನ - ಅ-ನೇಕ ಮೂರುತಿ ಸೂರ್ಯನಾರಾಯಣನ 1 ಬ್ರಹ್ಮಾಂಡ ಕೋಟಿ ತಿಮಿರವ ಗೆಲುವವನಒಮ್ಮೆ ನೆನೆಯಲು ಪ್ರಸನ್ನನಾದವನಧರ್ಮಕ್ಕೆ ಸಾಕ್ಷಾತ್ ರೂಪಾಗಿ ತೋರುವನನಿರ್ಮಲಾತ್ಮಕವಾಗಿ ಥಳಥಳಿಸುವವನ 2 ಹರಗೆ ನಯನವಾಗಿ ಮಕುಟವ ಬೆಳಗುವನತರುಣಿಯೈವರ ಲಜ್ಜೆ ಕಾಯ್ದವನದುರಿತಕೋಟಿಗಳನುದ್ಧರಿಸುವವನಪರಬ್ರಹ್ಮ ಕಾಗಿನೆಲೆಯಾದಿಕೇಶವನಮರೆಯದೆ ಭಜಿಪರ ಕಾಯುವವನ 3
--------------
ಕನಕದಾಸ
ಪರಮಪ್ರೀಯಾ ದಾಸರಾಯಾ | ಸತ್ಕವಿಜನಗೇಯಾ ಪ ಸುರತರು | ಕರಿಗಿರಿ ನಿಲಯನೆಉರುಗಾಯನ ಸಂದರುಶನ ಕೊಡಿಸಯ್ಯ ಅ.ಪ. ಆರ್ಮೂರೇಳು ನಾಲ್ಕೆಂಟು ಗ್ರಂಥ | ಅವುಗಳ ಸಾರಾರ್ಥಸಾರುತ್ತ ಭಕುತರಿಗೆ ಪುರುಷಾರ್ಥ | ಮಾರ್ಗವ ತೋರುತ್ತ ||ಚಾರು ಚರಿತ ಶ್ರೀರಮಾರಮಣನಗುಣವಾರಿಧಿಯೊಳು ಬಹು ಈಸಿದ ನಿಪುಣ 1 ಪಥ ಪುನರುದ್ಧರಿಸಿದ 2 ಪರತತ್ವ ಸಾರಾಂಬುಧಿ ಬೆಳಗುವನ ಪರಿಪರಿಕಲೆಯವನಶರಣರ ಹೃತ್ತಾಪವ ಹರಿಸುವನ | ನಿರತೈಕರೂಪನನಪರಮಾರ್ಥೇಂದು ವರೋದಯ ಕರುಣಿಸಿಧರಣಿಯ ಸುರರನು ಪೊರದೆಯೊ ಗುರುವೆ 3 ಅಂಕೀತವಿಲ್ಲದ ದೇಹಗಳೊಂದು | ನಿಷಿದ್ಧವೆಂದೂಪಂಕಜಾಕ್ಷನ ನಾಮಗಳೊಂದೊಂದು | ಬಳಸುತ ನೀನಂದೂ ಅಂಕನ ಗೈಧರಿ ಲೆಂಕತನವನಿತ್ತುಬಿಂಕದಿ ಜನ ಹೃತ್ಸಂಕಟ ಕಳೆದೀ 4 ಬಿಂಬೋಪದೇಶವೆ ತಾರಕವೆಂದೂ | ನಿಸ್ಸಂಶಯವೆಂದೂಹಂಬಾಲ ಹಚ್ಚುತ ಶರಣರಿಗೆಂದೆಂದೂ | ಕರುಣಾ ಸಿಂಧೂಬಿಂಬನು ಗುರುಗೋವಿಂದ ವಿಠಲ ಪಾದಾಂಬುಜದಲ್ಯನ ಹಂಬಲವಿರಿಸಿದೆ 5
--------------
ಗುರುಗೋವಿಂದವಿಠಲರು
ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ಮರೆಯದಿರು ಶ್ರೀ ಹರಿಯನು ಪ.ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನಕರೆದವಗೆ ಸಾಯುಜ್ಯವಿತ್ತ ನಾರಾಯಣನಸ್ಮರಣೆಯನು ಮಾಡುವರಚರಣ ಸೇವಕರಿಂಗೆಪರಮಪದವೀವ ಹರಿಯಅಪದೇವಕಿಯ ಬಂಧುವನು ಪರಿದವನ ಪೂತನಿಯಜೀವರಸವೀಂಟಿದನ ಮಾವನನು ಮಡುಹಿದನಪಾವನ ತರಂಗಿಣಿಯ ಪದನಖದಿ ಪಡೆದವನಗೋವರ್ಧನೋದ್ಧಾರನ ||ದಾವಾನಲನ ಪಿಡಿದು ನುಂಗಿದನ ಲೀಲೆಯಲಿಗೋವತ್ಸ ಗೋಪಾಲ ರೂಪವನು ತಾಳ್ದವನದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನುಭಜಿಸು ಮನವೆ 1ಕಂಜಸಂಭವಪಿತನ ಕರುಣಾಪಯೋನಿಧಿಯಕುಂಜರನ ನುಡಿಕೇಳಿ ಒದಗಿದನ ರಣದೊಳು ಧ-ನಂಜಯನ ಜೀವವಂ ಕೃಪೆಯಿಂದ ಕಾಯ್ದವನಆಂಜನೇಯನ ನಾಳ್ದನ ||ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -ರಂಜ್ಯೋತಿಮಯನಾಗಿ ಬೆಳಗುವನಶ್ರೀ ಚರಣಕಂಜವಂ ಭಜಿಸು ಮನವೆ 2ವಾರಿಧಿಯೊಳಾಡಿದನ ವರಗಿರಿಯ ತಾಳಿದನಧಾರಿಣಿಯ ತಂದವನ ದೈತ್ಯನನು ಕೊಂದವನಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯಬಂಧಿಸಿದನ||ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನಚಾರುಹಯವೇರಿದನ ಸಕಲ ಸುಜನರ ಪೊರೆವಧೀರ ಪುರಂದರವಿಠಲನ ಚರಣಕಮಲವನುನಂಬಿ ನೀ ಭಜಿಸು ಮನವೇ 3
--------------
ಪುರಂದರದಾಸರು