ಒಟ್ಟು 23 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಮಾರನಿಗಾರತಿಯ ಬೆಳಗಿರೇ ||ಶೋಭಾನೇ|| 1 ಶರಜನಿಗೆ ಆರತಿಯ ಬೆಳಗಿರೇ ||ಶೋಭಾವೇ|| 2 ಮಸೆಯುತಲೈತರೆ ಕ್ಷಣದೀಮಸೆದಿಹ ಬಾಣದಿಂದಸುರನ ತನುವನು- ಕುಶಲದಾರತಿಯ ಬೆಳಗೀರೆ ||ಶೋಭಾನೇ|| 3 ಸತಿ ಕಾರ್ತಿಕೇಯನಿಗೆ ಆರತಿ ಬೆಳಗಿರೇ ||ಶೋಭಾನೇ|| 4 ರಮೆಪತಿ ಸಖಗಾರತಿಯ ಬೆಳಗೀರೆ ||ಶೋಭಾನೇ|| 5
--------------
ಬೆಳ್ಳೆ ದಾಸಪ್ಪಯ್ಯ
ನಿಧಾನವೆ ಕೇಳಿ ಸಜ್ಜನವೇ ಇಂದು ಜಿನ ಶಕ್ತಿಯಾನಂದದಾರಾಧನ ಪ ಒಂದು ಮನದಲಿ ವದಗಿನ್ನು ಒಂದು ಮನದಲಿ ವದಗಿನ್ನು ನೀವೆಲ್ಲಾ ವಂದದಾರುತಿಯಾ ಬೆಳಗುವಾ 1 ಒಂದು ಮಾರ್ಗವಿಡಿದು ಬಂದು ಗುರುಮುಖದಿಂದ ಒಂದನೆ ಭಕ್ತಿ ತಿಳಿದಿನ್ನು ಒಂದನೆ ಭಕ್ತಿ ತಿಳಿದು ಪರೀಕ್ಷಿತಿಯಂತೆ ವಂದನಾರುತಿಯಾ ಬೆಳಗುವಾ 2 ಎರಡಕ ಮೀರದಾ ಎರಡಕ್ಷರದಿಂದ ಎರಡನೆ ಭಕ್ತಿ ತಿಳಿದಿನ್ನು ಎರಡನೇ ಭಕ್ತಿ ತಿಳಿದು ನಾರದರಂತೆ ಎರಡನಾರತಿಯಾ ಬೆಳಗೀರೇ 3 ಮೂರು ಬಲಿಯನೆದಾಟಿ ಮೂರು ರತ್ನವಗಂಡು ಮೂರನೇ ಭಕ್ತಿ ತಿಳಿದಿನ್ನು ಮೂರನೇ ಭಕ್ತಿ ತಿಳಿದು ಪ್ರಲ್ಲಾದನಂತೆ ಮೂರನಾರತಿಯಾ ಬೆಳಗೀರೇ 4 ನಾಕುಸ್ಥಾನವ ಮುಟ್ಟಿ ನಾಕರಂತವ ನೋಡಿ ನಾಕನೇ ಭಕ್ತಿ ತಿಳಿದಿನ್ನು ನಾಕನೇ ಭಕ್ತಿ ತಿಳಿದು ಜನಕನಂತೆ ನಾಕನಾರತಿಯಾ ಬೆಳಗೀರೇ 5 ಐದುಕ್ಲೇಶಗಳ್ಹಿಂಗಿ ಐದರೊಂದನೆ ಮಾಡಿ ಐದನೇ ಭಕ್ತಿ ತಿಳಿದಿನ್ನು ಐದನೇ ಭಕ್ತಿ ತಿಳಿದು ಗರುಡನಂತೆ ಐದನಾರತೀಯ ಬೆಳಗೀರೆ 6 ಆರನೇ ಭಕ್ತಿ ಆರು ಸಂಗವ ಮೀರಿ ಆರು ಪರಿಯಾಗದೇ ಆರನೇ ಭಕ್ತಿ ತಿಳಿದಿನ್ನು ಆರನೇ ಭಕ್ತಿ ತಿಳಿದು ಪುಂಡಲೀಕನಂತೆ ಆರನಾರತಿಯಾ ಬೆಳಗೀರೆ 7 ಏಳು ವ್ಯಸನವ ಬಿಟ್ಟು ಏಳು ಧಾತುವ ಕಂಡು ಏಳನೇ ಭಕ್ತಿ ತಿಳಿದಿನ್ನು ಏಳನೇ ಭಕ್ತಿ ತಿಳಿದು ಹನುಮಂತನಂತೆ ಏಳನಾರತಿಯಾ ಬೆಳಗೀರೆ 8 ಎಂಟು ಮದಗಳ ಜರಿದು ಎಂಟು ಸಿದ್ಧಿಯ ತೊರೆದು ಎಂಟನೆ ಭಕ್ತಿ ತಿಳಿದಿನ್ನು ಎಂಟನೇ ಭಕ್ತಿ ತಿಳಿದು ಅರ್ಜುನ ನಂತೆ ಎಂಟನೇ ಭಕ್ತಿ ಯಾರತಿಯಾ ಬೆಳಗೀರೆ 9 ಒಂಭತ್ತರನೇ ಬಲಿದು ಒಂಭತ್ತರ ನೆಗೆಲಿದು ಒಂಭತ್ತರನೇ ಭಕ್ತಿ ತಿಳಿದಿನ್ನು ಒಂಭತ್ತರನೇ ಭಕ್ತಿ ತಿಳಿದು ಬಲಿಯಂದದಿ ಒಂಭತ್ತನಾರತಿಯಾ ಬೆಳಗೀರೆ 10 ಗುರು ಮಹಿಪತಿ ಸುತಬ ಹೊರವ ದೇವಿಗೆ ಧರಿಯೊಳೀಪರಿಯಲಿ ನೀವು ಧರಿಯೊಳೀಪರಿ ನೀವು ಮಾಡಲಿಕೀಗ ಪರಮ ಆನಂದಾದೋರುವದು 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾರ್ವತಿಪತಿ ಆರ್ವರಾಭಿಷ್ಟಿಯ ಸರ್ವಪೂರಿಸಿ ತನ್ನಿಜಪದ ಸೇವಕನಿಗೆ ಕರುಣವ ಬೀರ್ವನಿಗೆ ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1 ತಾರ್ಕು ಪದೇಶಿತಾ ಸರ್ಕನೆ ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ ಅಘತಮರ್ಕನಿಗೆ ಸುರಸ ಪರ್ಕನಿಗಾರತಿಯಾ ಬೆಳಗೀರೇ ಸೋ 2 ಅಂಬುಶಶಿಬಿಂಬಾಂಕಿತ ಜಟೆ ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ ಗಜಚರ್ಮಾಂಬರಗೆ ಹರಸಿ ಶ್ವಂಭರಗಾರತಿಯ ಬೆಳಗಿರೇ ಸೋ3 ಕರ್ಪುರ ಗೌರವತನು ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ ಹತ ಕಂರ್ದಪನಿಗೆ ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4 ಕುಂದದಿ ಆನಂದದಿ ಮಹೀಪತಿ ನಂದನ ಸಲಹುವ ಘನ ಅಶಿತ ಕಂದರಿಗೆ ಪೂಜಿತ ಇಂದರಗೆ ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು
ಶ್ರೀ ಗುರು ರಾಜರಿಗೆ ಆರುತಿ ಬೆಳಗಿರೆ ಪ ಸೂರಿ ಪರಾಕು ಪರಾಕು |ಗುರು ವಸುಧೇಂದ್ರರ ಕುವರ ಪರಾಕೆಂದು |ಹರದೇರಾರುತಿಯಾ ಬೆಳಗಿರೆ 1 ಪರಾಕು ಪರಾಕು ಪರಾಕು |ಗಂಡುಗಲಿ ಹರಿಯಾ ಪರಾಕೆಂದು |ಪುಂಡಲೀಕದಾರುತಿಯಾ ಬೆಳಗೀರೆ2 ಶ್ರೀಶ ಪ್ರಾಣೇಶ ವಿಠಲದೂತ ಪರಾಕೂ |ಶ್ರೀಶನ ಗುಣಗಳ ತುತಿಪ ಪರಾಕೂ |ಆಶೇಶು ಹೇಮಂತ ಮೆರೆವ ಪರಾಕೂ |ದೇಶಿಕ ಶ್ರೇಷ್ಠ ನಿರ್ದುಷ್ಟ ಪರಾಕೆಂದು |ಸಾಸಿರ ಆರುತಿಯ ಬೆಳಗಿರೆ3
--------------
ಶ್ರೀಶಪ್ರಾಣೇಶವಿಠಲರು
ಮಾರ್ತಾಂಡಕುಲದೀಶ ದಶರಥನುದರದಿಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜÕವಪಾಲಿಸಿ ತಾಟಕೀ ಮುಖ್ಯಧೂರ್ತದೈತ್ಯರ ಮಥಿಸಿಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ 1ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿಮೃಗರಾಮ ತರಲುಪೋಗಲು ಭರದಿ ಸೀತೆಯ ರಾವಣೇಶನೊಯ್ಯಲುಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿಕಪಿವರರ ಸ್ನೇಹದಿಜಲಧಿಬಂಧಿಸಿ ರಾವಣಾದ್ಯರಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ 2ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವಕೇಳಿಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆರಾಮಸೀತೆಗೆ ಕುಂದಣದಾರತೀಂiÀi್ಞ ಬೆಳಗೀರೆ ಶೋಭಾನೆ 3
--------------
ಗೋವಿಂದದಾಸ
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||ಮೀಸಲಾರುತಿಯಾ ಬೆಳಗೀರೆ ಪವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||ಸಿಂಧುರವರದ ಗೋಪಾಲ ಪರಾಕೂ ||ಸಿಂಧುಶಯನಪದ್ಮನಾಭಪರಾಕೆಂದು ||ಛಂದದಲಾರುತಿಯಾ ಬೆಳಗೀರೆ1ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪಹೃಷಿಕೇಶ ಪರಾಕೆಂದು ||ಮುತ್ತಿನಾರುತಿಯಾ ಬೆಳಗೀರೆ 2ಮಾಧವಖರ ದೂಷಣಾರಿ ಪರಾಕೂ |ಬಾದರಾಯಣಪುರುಷೋತ್ತಮ ಪರಾಕೂ ||ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||ಮೋದದಲಾರುತಿಯಾ ಬೆಳಗೀರೆ3ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||ನಂದನಂದನಶೌರಿಪರಾಕೂ |ಮಂದರಪರ್ವತ ಧರನೆ ಪರಾಕೆಂದು ||ಕುಂದಣದಾರುತಿಯಾ ಬೆಳಗೀರೆ 4ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||ತಟ್ಟಿಯೊಳಾರುತಿಯಾ ಬೆಳಗೀರೆ5ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||ದ್ವಾರಕಿನಿಲಯಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||ನಾರಿಯರಾರುತಿಯಾ ಬೆಳಗೀರೆ 6
--------------
ಪ್ರಾಣೇಶದಾಸರು