ಮಂಗಳ ಸದ್ಗುರುವರಗೆ ಮಂಗಳ ಸದ್ಗುರುವರೆಗೆಮಂಗಳ ದುರ್ಗುಣ ಹರಗೆ ಮಂಗಳ ಬಗಳಾಂಬ ಚಿದಾನಂದ ದೊರೆಗೆ ಪ
ಪೀತದ ಪೀಠದ ಮೇಲೆ ಪೀತಾಂಬರಿಯು ಕುಳ್ಳಿರಲುಪೀತದಾರತಿಯನ್ನು ಕೈಯಲಿ ಪಿಡಿದುಪೀತದಾಭರಣೆ ಪೀತದಾವರಣೆಗೆಪೀತದಾರತಿಯ ಬೆಳಗಿರೆ 1
ಮುತ್ತಿನ ಪೀಠದ ಮೇಲೆ ಮುಕ್ತಾಂಗಿ ಕುಳಿತಿಹಳುಮುತ್ತಿನಾರತಿಯನ್ನು ಕೈಯಲ್ಲಿ ಪಿಡಿದುಮುತ್ತಿನಾಭರಣೆಗೆ ಚಿತ್ತ ಚಿದ್ರೂಪಿಣಿಗೆಮುತ್ತಿನಾರತಿಯ ಬೆಳಗಿರೆ2
ಪದ್ಮಾಸನದ ಪೀಠದ ಮೇಲೆ ಪದ್ಮಾಸನೆ ಕುಳಿತಿಹಳುಪದ್ಮದಾರತಿಯನ್ನು ಕೈಯಲ್ಲಿ ಪಿಡಿದುಪದ್ಮಶ್ರೀ ಚಿದಾನಂದ ಸದ್ಗುರುವಿಗೆಪದ್ಮದಾರತಿಯ ಬೆಳಗಿರೇ 3