ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಗಾರತಿ ಬೆಳಗಿತು ತನ್ನಿಂದ ತಾನೆ |ಮಹಗುರುವಿಗೆ | ತನ್ನಿ | ಅರವೂ ಮರವೂ ಎರಡಾದರುವಿಗೆ ಬೆಳಗುವ ತಾನೇ ಪ ಸಹಸ್ರ ಸೂರ್ಯರ ಪ್ರಭೆಗಳ ಕಲೆತು ಕೋಟಿ ಶಶಿಕಿರಣಾ ಮಹತೇಜ ಫಾಕಿಸಿ ಮುಟ್ಟಿತು ಅಡಗಿತು ಗಗನಾ 1 ನಿರಂಜನ ನಿಃಶಬ್ದ ಮೂಲಕ ಬೆಳಗುವ ತಾನೇ 2 ಪರಮ ಪ್ರಕಾಶ ಪರತರ ಪರಂಜ್ಯೋತಿ ಗುರುನಾಥಾ |ತೆರವಿಲ್ಲದಾರುತಿ ಭೀಮಾಶಂಕರ ಬೆಳಗುತ 3
--------------
ಭೀಮಾಶಂಕರ
ಆವದಾದರು ಏನು ಲಿಂಗವಾದರು ಆಯ್ತು | ಆವ ಕುಲವದು ಏನು ಜ್ಞಾನಿ ಕರ್ಮವು ಹೋಯ್ತು ಪ ಆವ ಅನ್ನವು ಏನು ಉಣಲ್ಹಸಿವು ಹೋಯಿತು | ಆವ ಮುದ್ರೆಯು ಏನು ಧ್ಯಾನಾನಂದವ ತೋರಿತು 1 ಆವ ವಸ್ತ್ರವು ಏನು ಶೀತ ಬಾಧೆ ನೀಗಿತು | ಆವ ಅಗ್ನಿ ಏನು ದಿವ್ಯ ಕಾಂತಿ ಬೆಳಗಿತು 2 ಪಾದ ಸೋಂಕಲಾಯಿತು | ಮುಂದೆ ಭವಕೆ ಬಾರದಂತೆ ಹೊಂದಿಕೊಂಡು ಹೋಯಿತು 3
--------------
ಭಾವತರಕರು
ಬೆಳಗಿತು ಆರತಿ ಗುರುವಿಗೆ ತಾನೆ ತನ್ನಿಂದತೊಳಗುತ ಬೆಳಗುತ ಥಳಥಳಿಸುತ ತಾ ನಿತ್ಯದಿಂದ ಪ ಬ್ರಹ್ಮವಿಷ್ಣು ರುದ್ರೇಶ್ವರ ಶಿವರಾಸ್ಥಾನ ಸ್ಥಾನಗಳಲ್ಲಿಬ್ರಹ್ಮ ಆದಿಶಿವ ಅಂತ್ಯದವರೆಗೆ ಚೇತನಗೂಡುತಲ್ಲಿ 1 ಒಳಹೊರಗೆಲ್ಲವ ವ್ಯಾಪಿಸಿ ತುಂಬಿಯೆ ಪೂರ್ಣವು ತಾನಾಗಿರುತತಿಳಿದೆ ನೋಡಲಿ ರವಿ ಕೋಟೆಯ ಪ್ರಭೆ ಪ್ರಭೆಯನು ಬೀರುತ2 ಅತ್ತ ಮಿಂಚುತ ಇತ್ತ ಮಿಂಚುತ ಎತ್ತೆತ್ತಲು ಝಳಕುಚಿತ್ತ ಜ್ಯೋತಿ ಚಿದಾನಂದ ಗುರುವಿನ ಚಿಜ್ಯೋತಿಯ ಬೆಳಗು 3
--------------
ಚಿದಾನಂದ ಅವಧೂತರು
ಮುರಳಿಯಧರ ಶ್ರೀ ಕೃಷ್ಣನ ನೋಡಲು ಏನೋ ಸಂತೋಷ ಏನೋ ವಿನೋದ ಪ ಹರಿವಳು ಯಮುನೆಯು ಮೆಲ್ಲನೆ ನೋಡಲು ಗೋವಿಂದನನು ಪರಮಾನಂದದಿ ಅ.ಪ ಕೊಳಲೂದಲು ಶ್ರೀಕೃಷ್ಣನು ನಾದದ ಸುಳಿ ಬಾಡುವುದೆಂಬುವ ಭೀತಿಯಲಿ ಜಲ ಮೂಲನು ಬೆಳದಿಂಗಳ ಕರಗಳ ತಳಿರುಗಳಿಂದಲಿ ತಳ ಸೇರಿಸುವ 1 ಶರಧಿ ತರಂಗಗಳೆದ್ದವು ರಂಗನ್ನ ವದನ ಶಕಾಂಕನ್ನ ನೋಡಿ ಅಂಗನೆಯರು ತಮ್ಮಂಗಗಳಲಿ ಭಂಗವ ಪಡೆದರನಂಗನ ಶರದಿ 2 ಭುವನವ ತುಂಬಿತು ಗಗನವು ತುಂಬಿತು ದಿವಿಜರ ಲೋಕಗಳೆಲ್ಲವು ತುಂಬಿತು ಕವಿಗಳು ಬೆರಗಾದರು ವರ್ಣಿಸಲೀ ಸವಿ ಮುರುಳಿಯು ನಾದದ ಪ್ರವಹನನು 3 ತುರುಗಳ ಪಯಧರ ಸ್ರವಿಸಿತು ಕ್ಷೀರವ ಕರೆದರು ಮೋದದ ಕಂಬನಿಯೆಲ್ಲರು ಮರೆತರು ನರಲೋಕದ ಮಂದಿಗಳು ಅರಿತು ಮೋಕ್ಷದ ಸುಖವೆಂತೆಂಬುದ 4 ಈಶನು ಕೈಲಾಸದಲಿ ಕುಣಿದನು ಶೇಷನು ಸಾಸಿರ ಫಣಿಗಳನಾಡಿದ ದೋಷರಹಿತ ವಾಣೀಶನ ವದನ ವಿ ಕಾಸವು ಬೆಳಗಿತು ನಾಕು ದಿಕ್ಕುಗಳ 5 ಆ ಸಮಯವ ಇತಿಹಾಸಗಳಲಿ ಕವಿ ವ್ಯಾಸರಿಗಲ್ಲದೆ ವರ್ಣಿಸಲಳವೆ ಭಾಸುರ ಸುಂದರ ವದನ ಪ್ರಸನ್ನನು ರಾಸಕ್ರೀಡೆಯ ರಸವನು ಹರಿಸುತ 6
--------------
ವಿದ್ಯಾಪ್ರಸನ್ನತೀರ್ಥರು