ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿ ಎನಿಸಿ | ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ | ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ | ಕಾಣೆ ಕರುಣಿಗಳರಸ ಜ್ಞಾನಿ ಜನ ಮನೊವಾಂಛಿತಾ |ಮಾಣದಲೆ ನೀ ನೀವೆ | ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ 1 ವಾತ ವ್ರಾತ ಕಿನ್ನಣೆಯುಂಟೆಮಾತುಳಾರಿಯ ದೂತ ಜಯೆ ಜಾತಾ ||ಸೋತು ಬಲು ಭವದೊಳಗೆ | ಆರ್ತನಾಗುತ ನಿನ್ನ ಕಾತುರೆತಲಿಂ ಪ್ರಾರ್ಥಿಪೇ 2 ವೃಂದಾವನಾರ್ಯರಿಂದ್ವಂದಿತವು ಎಂದೆನಿಪ ವೃಂದಾವನಿಲ್ಲಿ ಇಹುದೂ |ವೃಂದಾರ ಕೇಂದ್ರ ಜನ | ಬಂದಿಲ್ಲಿ ರಾಜರ |ವೃಂದಾವನರ್ಚಿಸುವರೋ |ನಂದನನು ದಶರಥಗೆ | ನಂದನನು ದೇವಕಿಗೆ | ನಂದನನು ಸತ್ಯವತಿಗೇ |ಒಂದೊಂದು ಹಯಶೀರ್ಷ | ಅಂದರೂಪಗಳಿಂದ ನಂದನನು ಭಕ್ತ ಜನಕೇ 3 ಜೀವಾಂತರಂಗದಲಿ | ಜೀವಾಂತರಾತ್ಮನನ ದ್ವೈವಿಧ್ಯ ರೂಪ ಸೇವಾ |ತಾವಕದಿ ನೀ ಮಾತರಿಶ್ವಾಖ್ಯನೆಂದೆನಿಸಿ ಸೇವಿಸುವೆ ಘರ್ಮೋಕ್ತದಿ ||ಜೀವ ಸಕಲೋತ್ತಮನೆ | ದಾವ ಶಿಖಿ ಭವವನಕೆದೇವ ಬಲಿಭುಜ ಮಾರುತೀ |ದೇವಾದಿ ವಂದ್ಯ ಗುರು | ಗೋವಿಂದ ವಿಠ್ಠಲನಭಾವದಲಿ ತೋರಿ ಪೊರೆಯೊ 4
--------------
ಗುರುಗೋವಿಂದವಿಠಲರು
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ
ಶ್ರೀ ಅನಂತಶಯನನ ಸ್ತೋತ್ರ (ಬೆಳಗಾವಿಯ ಶಹಪೂರ ಪೇಟೆಯ ಅನಂತಶಯನನು ಸ್ತುತಿಸುತ್ತ ಅಲ್ಲಿಯ ಕಟ್ಟಿಯ ಆಚಾರ್ಯರನ್ನು ರಕ್ಷಿಸಬೇಕೆಂದು ಪ್ರಾರ್ಥಿಸಿದ್ದು) ನೋಡಿ ನಾನು ಧನ್ಯನಾದೆನು ಅನಂತಶಯನನ |ನೋಡಿ ನಾನು ಧನ್ಯನಾದೆನು ಪ ನೋಡಿ ನಾನು ಧನ್ಯನಾದೆ |ರೂಢಿಯೊಳಗೆ ಮರುತಮಂದಿರ |ರೂಢಿ ಬೆಳಗಾವಿಯೊಳು ನಿಂದು |ಈಡು ಇಲ್ಲದೆ ಮೆರೆವ ದೇವನ ಅ.ಪ. ಮೂಲರೂಪನು ವೈಕುಂಠ ಬಿಟ್ಟು |ಪಾಲ ಸಾಗರ ಶಾಯಿ ಶ್ರೀಲೋಲ |ಕಾಲಕಾಲದಿ ಭಕ್ತರ ಮೌಳಿ |ಪೊರಿಯಬೇಕೆಂದು ನಿಂದನ 1 ಸಂತಾನ ಸಂಪತ್ತು ಜ್ಞಾನ ಸುಬುದ್ಧಿಯ |ನಂತ ಶಯನ ಇವರಿಗಾ |ನೆಂತು ಸುಖವ ನೀವೆನೆಂದು |ಸ್ವಾಂತದೊಳಗೆ ಬಂದು ನಿಂದನ 2 ಶ್ರೀಶ ಪ್ರಾಣೇಶ ವಿಠಲರೇಯ |ಶ್ರೀ ಸಹಿತವಾಸ ವಾಗಿಲ್ಲ |ಭೂಸುರೋತ್ತಮ ಕಟ್ಟಿಯವರನ್ನ |ಪೋಷಿಸಬೇಕೆಂದು ನಿಂದನ 3
--------------
ಶ್ರೀಶಪ್ರಾಣೇಶವಿಠಲರು