ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಕಾದನಾ ವತ್ಸವ ಹರಿ ಕಾದನಾ | ಮಾಧವ ಪ ವೇದವೇದ್ಯ ಸಾಧುವಿನುತÀರಾದಿಕಾ ರಮಣ ಕೃಷ್ಣ ಅ.ಪ. ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ || ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ 1 ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ | ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ 2 ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು || ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು3 ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು | ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು 4 ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ | ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ5 ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ | ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ6 ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು | ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | 7
--------------
ವಿಜಯದಾಸ
ಬಂದ ಗೋವಿಂದ ವಾರಣೇಂದ್ರನ ಬಳಿಗಾಗ ಸಿಂಧು ವೈಕುಂಠದಿಂದ ಪ ಇಂದಿರೆಯೊಡನೇನೊಂದನೂ ನುಡಿಯದೆ ನಿಂದು ಕಾದಿಹ ವಿಹಗೇಂದ್ರನ ನೋಡದೆ ಒಂದೇ ಸಡಗರದಿಂದೋಡುತೆ ನಾ ಗೇಂದ್ರಶಯನ ನಾಗೇಂದ್ರನ ಪೊರೆಯಲು 1 ಬಂಗಾರ ಮಕುಟೋತ್ತಮಾಂಗದಿ ಶೋಭಿಸೆ ಶೃಂಗಾರ ಫಣಿಯೊಳು ಮಂಗಳಕರ ತಿಲಕ ಕಂಗಳ ಕಾಂತಿ ತ್ರಿಜಗಂಗಳ ಬೆಳಗಲು ಹಿಂಗದೆ ಶಂಖ ಚಕ್ರಾಬ್ಜಂಗಳು ಕರದಲ್ಲಿ 2 ಅಂಗಜನಯ್ಯ ಶುಭಾಂಗ ಅಮರ ತ ಭವ ಭಂಗ ಸುರಕುಲೋ ತ್ತುಂಗ ರಂಗ ಉತ್ತುಂಗ ಮಹಿಮ ಮಾ ತಂಗ ಗಿರಿಯ ನರಸಿಂಗನು ಬೇಗದಿ 3
--------------
ವರಾವಾಣಿರಾಮರಾಯದಾಸರು
ಬರುತಲಿಹರು ನೋಡಿ ಗುರುವರೇಣ್ಯ ಸುಖತೀರ್ಥ ಯತಿವರರು ಪ ಹರಿದು ಬರುವ ಸುರನದಿಯ ಪ್ರವಾಹದ ತೆರದಲಿ ಪರಿಪರಿ ಪರಿವಾರ ಸಹಿತ ಅ.ಪ ಕರದಲಿ ಪಿಡಿದಿಹ ದಂಡ ಕಮಂಡಲ ಕೊರಳೊಳು ತುಳಸಿಯ ಚಿಗುರಿನ ಮಾಲೆಯು ಅರಿವಾರಿಜ ಲಾಂಛನಗಳಿಂದೊಪ್ಪುವ ವರ ದ್ವಾದಶ ನಾಮಗಳನು ಧರಿಸುತ 1 ಯತಿಗಳು ಗೃಹಿಗಳು ಬ್ರಹ್ಮಚಾರಿಗಳು ಶತಶತ ಸಂಖ್ಯೆಗಳಲಿ ಸೇರಿಹರು ಅತಿ ಸಂಭ್ರಮದಲಿ ನೋಡಲು ಪುರುಷ ರತುನವು ಮಾರ್ಗದ ಖತಿಪರಿಹರಿಸುತ 2 ಅವನಿಸುರರು ಮುಂಬದಿಯಲಿ ತಮ್ಮಯ ಕವಿತೆಗಳಲಿ ಗೋವಿಂದನ ಗುಣಗಳ ನವ ನವ ಸ್ವರದಲಿ ಪಾಡುತ ಕುಣಿಯಲು ಶ್ರವಣ ನಯನಕಾನಂದವ ಬೀರುತ 3 ತ್ವರೆಯಲಿ ಸರಿದು ತಾ ಬರುತಿರೆ ಯುವ ಕೇ- ಸರಿಯ ಧಿಕ್ಕರಿಸುವ ಸಂಭ್ರಮ ಗಮನ ಚರಣಯುಗಳ ಕಾಂತಿಯ ಪಸರಿಸುತಲಿ ಧರಣಿಯ ಪಾವನ ಮಾಡುವ ಬಗೆಯಲಿ 4 ಏನಿರಬಹುದೆಂದು ನೋಡುವರಿಗೆ ಕಾಣಿಸುವುದು ತೇಜದ ಪುಂಜ ಭೂನಿಲಯವ ಬೆಳಗಲು ಅತಿ ನೂತನ ಭಾನು ಉದಯಿಸಿದ ತೆರದಲಿ ಪೊಳೆಯುತ 5 ಪದುಮರಾಗ ಕಾಂತಿಯ ಮೀರಿದ ನಖ ಕೂರ್ಮ ಪ್ರಪದಗಳು ವಿಧಿಭವಮುಖ ಸುರಸೇವಿತ ಜಂಘವು ಮದಗಜ ಕರವನು ಪೋಲುವ ತೊಡೆಗಳು 6 ಪುಷ್ಪ ನಿತಂಬಗಳಲಿ ಪೊಳೆಯುತಲಿಹ ರೇಷ್ಮೆಯ ವಸ್ತ್ರವ ಧರಿಸಿಹರು ಕುಕ್ಷಿಲಲಾಟ ಶಿರೋಧರಗಳಲತಿ ಶ್ರೇಷ್ಠದ ತ್ರಿವಳಿಗಳಿಂದ ರಾಜಿಸುತ7 ಕೆಚ್ಚಿನ ವಕ್ಷಸ್ಥಳವತಿ ಸುಂದರ ಉಚ್ಚ ಪೀವರದ ಸ್ಕಂಧಯುಗಳವು ಸ್ವಚ್ಛದ ಕೆಂಬಣ್ಣದ ಕರತಲದಲಿ ಬಿಚ್ಚಿ ಹಾರುತಿಹ ಧ್ವಜಲಾಂಛನದಿ 8 ಚಂದಿರ ಬಿಂಬವಿದೋ ಪ್ರೇಕ್ಷಕರಾ ನಂದತರಂಗವ ಉಕ್ಕಿಸುತಿಹುದು ಒಂದು ಕಳಂಕವು ಕಾಣದಿರುವ ಅತಿ ಸುಂದರ ಪುರುಷವರೇಣ್ಯರು ಸೊಗಸಿಲಿ 9 ಸುಂದರ ಮಂದಸ್ಮಿತದಿಂ ಶೋಭಿಪ ಕುಸುಮ ತೆರದಲಿ ದಂತಗಳು ಮಂದಿಗಳಿಗೆ ಬಲು ಹರುಷವಿತ್ತು ಅರ ವಿಂದ ನಯನ ಆನಂದತೀರ್ಥ ಮುನಿ 10 ಕಿವಿಯಲಿ ಪೊಳೆಯುವ ತುಳಸಿಯದಳಗಳು ಅವಿರಳ ತೇಜದಿ ಹೊಳೆಯುವ ಕಪೋಲ ಭುವನತ್ರಯಗಳಭೀಷ್ಟವ ನೀಡುವ ಸುವಿಮಲ ಸುಂದರ ಭ್ರಕುಟಿ ವಿಲಾಸದಿ 11 ಅಕಲಂಕ ಶರೀರರು ಬರುತಿಹುದನು ಸಕಲ ಕಲಾಕುಶಲರು ನೋಡಿ ಶಕುತಿಗೆ ಮೀರಿದ ಮಾದರಿಯೆಂದರು ಪ್ರಕೃತಿ ಮಧುರ ಸರ್ವಾಂಗ ಸುಂದರರು 12 ಕಾಂತಿ ಸುಧೆಯ ಪಾನವ ಮಾಡಿರಿ ಸುಖ ಶಾಂತಿ ನಿಲಯರಾಶ್ರಯದಲಿ ಬಾಳಿರಿ ಚಿಂತೆ ಸಂತಾಪಗಳೆಲ್ಲವ ತೊಳೆಯಿರಿ ಸಂತತ ಹರಿದಾಸ್ಯದಲಿ ಪ್ರಸನ್ನರು 13
--------------
ವಿದ್ಯಾಪ್ರಸನ್ನತೀರ್ಥರು
ಬೆಳುದಿಂಗಳ ಪ್ರಭೆ ಬಲು ಕಾಂತಿಯಿರಲುಬಲವನು ದುರ್ಗುಣಕೆ ಹತ್ತಬಹುದೇಬೆಳಗುತ್ತ ಜ್ಞಾನದ ಚಂದ್ರನು ಹೊಳೆದಿರೆಬಳಿಕ ಜನನ ಮರಣ ಮುತ್ತಬಹುದೆ ಪ ಬಹು ಬೆಳಕು ಬೆಳಗಲು ಮನದ ಮರ್ಕಟವದುಮರವ ನೇರದೆ ಕೆಳಗೆ ನಿಲ ಬಲ್ಲುದೆಬಹು ಕಾಮವೆಂಬ ಕಾಗೆ ಕಣ್ಣುಡುಗಲುಗೂಡಿನಿಂದಾ ಹೊರಗೆ ಬರಬಲ್ಲದೆ1 ಚೆಲ್ಲಿರೆ ಕಾಂತಿಯು ಕಳ್ಳರಾರ್ವರ ತಲೆಚೆಂಡಾಡದೆ ತಾನು ಸುಮ್ಮನಿಹುದೆಫುಲ್ಲ ತಿಂಗಳ ಬೆಳಕು ಎಲ್ಲೆಡಗೆ ಹರಡಿರೆಪಂಚ ವಂಚಕರು ಓಡದಿಹರೆ2 ಒಲಿದರೆ ತೇಜವು ಅವಿದ್ಯದ ಕತ್ತಲೆಯುತಾನೋಡದೆ ಅಲ್ಲಿ ನಿಲಬಲ್ಲುದೆಬಲು ಕಳೆ ಚಿದಾನಂದಗುರು ತಾನು ಬೆಳಗುತಿರೆಬಹಳ ಜನ್ಮದ ಪಾಪ ಹರಿಯದಿಹುದೇ3
--------------
ಚಿದಾನಂದ ಅವಧೂತರು
ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ ಧೀರ ಪಾಂಡವರ ಕೋರಿಕೆ ಸಲ್ಲಿಸಲು ಸಾರಸ ನಯನನು ಅ.ಪ. ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ ಹೇಮ ಮಕುಟೋತ್ತಮಾಂಗದಿ ಧರಿಸಿ ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ ರುತಿ ಬೆಳಗಲು ತಾ ಸುಮುಹೂರ್ತದಿ 1 ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ ಮಾರ್ತಾಂಡನಂತೆ ಮೆರೆಸಿ ಹಿಂಡುಬಳಗಗಳ ಕಂಡಾದರಿಸುತ ಪಾಂಡುಸುತರ ಬೀಳ್ಕೊಂಡು ಭರದಲಿ 2 ಸುಖದಿ ಪ್ರಯಾಣ ಬೆಳಸಿ ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3
--------------
ವರಾವಾಣಿರಾಮರಾಯದಾಸರು
ಹಸೆಗೆ ಬಾರೆ ಸುಂದರಿ ಓ ಪ ಬಿಸಜಾಲಯೆ ಜನಕ ಕುಮಾರಿ ಅ.ಪ ಮುತ್ತು ಮಾಣಿಕದ ಪೀಠವಂ ಭಕ್ತಿಯಿಂದ ಅಲಂಕರಿಸಿ ಮಿತ್ರೆಯರೆಲ್ಲರು ಕರೆವರು 1 ಸುತ್ತ ಜ್ಯೋತಿಯು ಬೆಳಗಲು ಮತ್ತೆ ಮೆಲ್ಲಡಿಯಿಡುತಲಿ ಓ ಬಿಸಜಾಲಯೆ 2 ಭೂಮಿಜೆ ಲೋಕಮಾತೆಯೆ ಕಾಮಿತಪ್ರದೆ ಶ್ರೀ ಗುರುರಾಮ ವಿಠಲನರಸಿಯೆ 3
--------------
ಗುರುರಾಮವಿಠಲ
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು