ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ 1 ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ2 ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು 3 ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು 4 ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ 5 ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ 6 ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ವೀರನಾರಾಯಣ 7
--------------
ವೀರನಾರಾಯಣ
ನಮಿಸುವೇಂ ಜಗದಂಬೆ ನಿನ್ನಂ ಮುದದಿಂ ದೃಢದಿಂ ಮನವಾರೆ ನಾಂ ಪ ಉದಯಾದ್ರಿಯೊಳುದಿಸಿದ ನಾರೈ ಮನಿದೆ ಬಂದೇಂ ಬಳಿಸಂದೇಂ ಪದುಳದಿ ನಿಂದೇಂ ಅ.ಪ ಮೂಡಿದ ಕತ್ತಲೆಯೋಡಿÉಸಿ ಭರದಿಂ ನೋಡೆಚಿರಂ, ನಾಡೆಜಗಂ ಬೆಳಗಲಿ ಬೆಳಕಿಂ 1 ಭಾಮಿನಿಯರು ಸದ್ಭಾವನೆಯಿಂದಲಿ ದೇವಿಯ ಸಂಸೇವಿಸಿವೊಲ್ ತಾ ವರವಂ2 ಶೇಷಗಿರೀಶನ ದಾಸರು ನಾವೆನೆ ಭಾಷಾನಿಧಿಯಂ ಬಲಗೊಂಡಾಂ ಬೇಡುತ ನಲವಿಂ3
--------------
ನಂಜನಗೂಡು ತಿರುಮಲಾಂಬಾ
ಶ್ರೀ ಕಮಲನೇತುರ | ಪುಣ್ಯಗಾತುರ | ಸಾಕಾರ ಕ್ಷಣ ಮಾತುರ | ನೀ ಕರುಣದಿಂದ | ವಾಕು ಲಾಲಿಸು | ಬೇಕು ವೇಗದಲಿ | ಗೋಕುಲಾಂಬುಧಿ ರಾಕಾಂಬುಜ ಲಾ | ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ ನಿತ್ಯ ಅಜಾತಾ | ಕುಂಭ ಮಕುಟನೀತಾ | ಮಾವ ಮರ್ದನ ನಿರ್ಭೀತಾ || ದೇವಮರರ ಕಾ | ವ ಭಕ್ತರ | ಜೀವನೆ ವರ | ವೀವನನುದಿನ | ಆವು ಕಾವುತ ಪೋಗಿ | ದಾ ವಿಷ ಬಿಡಿಸದೆ || ಶ್ರೀ ವಲ್ಲಭ ನಿನಗಾವವನೆಣೆ ತ್ರಿ | ಭುವನದೊಳಗತಿ | ಸೇವಕ ಜನರಿಗೆ ಕೈವಲ್ಯವನು ಕೊಡುವಾ 1 ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ | ಪರಿಹಾರಾ | ಮರಣಜರ ವಿದೂರಾ | ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು | ವ್ರಾತ ಯಮುನೆಯ | ಭ್ರಾತನ್ನ ನಗರಿಯ | ಯಾತನಿಗಟ್ಟಿದೆ | ಪೂತುರೆ ನಿನ್ನ ಮಾ | ಯಾತನಕೇನೆಂಬೆ | ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ | ಜಾತವ ತಂದ | ಮಿತ ಮಹಿಮ ಜಗ | ತಾತಾ ಬೊಮ್ಮಾದಿ ವಿನುತಾ 2 ತೋಷ ಗೋಪಾಲ ಮಾನಿಸಾ ವೇಷ | ಆ ಪಾರ ರತುನ ಭೂಷಾ | ನಂತಪ್ರಕಾಳಾ | ತಾಪಸಿಗಳ ವಿಲಾಸಾ || ಕೋಪ ಮೊದಲಾದ ತಾಪತ್ರಯಗಳ | ನೀ ಪೋಗಾಡು ಉ | ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ | ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ | ರೂಪವ ತೋರಿಸು ಯದುಪಾ ಎನ್ನ ಸಮೀಪಾ 3
--------------
ವಿಜಯದಾಸ
ಶ್ರೀಪ್ರಶಾಂತ ನಿಲಯ ನಿನ್ನ ಸುಪ್ರಕಾಶ ಬೆಳಗಲಿ ಪ ಅಪ್ರಮೇಯ ನಮಗೆ ನಿನ್ನ ಸುಪ್ರಸನ್ನತೆ ದೊರೆಯಲಿ ಅ.ಪ ನಿನ್ನ ಮಹಿಮೆ ಲೋಕವಿದಿತ ನಿನ್ನ ಚರಿತೆ ಪುಣ್ಯಭರಿತ ನಿನ್ನ ಭಜನೆ ಪಾಪರಹಿತ ನಿನ್ನದರ್ಶನ ಮೋಕ್ಷಕಲಿತ1 ಇಂದು ಪರ್ತಿಯಲಿ ಜನಿಸಿ ಚಂದ್ರಮೌಳಿ ಎನಿಸಿದೆ 2 ಸತ್ಯಸಾಯಿಬಾಬ ನಿನ್ನ ತತ್ವಬೋಧ ನಿರುಪಮ ಧಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು