ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ಧ್ರುವ ಹಿಂದೆ ಗೋವಿಂದನು ಮುಂದೆ ಮುಕುಂದನು ಅಂದಿಗಿಂದಿಗೆ ಅನಿರುದ್ಧ ತಂದೆ ತಾಯಿಯ ವೃಂದಾವನ ಪತಿಯು ಮಂದರಧರ ಬಂಧು ಬಳಗ 1 ಕುಂದ ನೋಡದೆ ಸಲಹುವ ಸಂಕರುಷಣಾ ನಂದ ಮೂರುತಿ ತ್ರಿ ವಿಕ್ರಮನ ದುರಿತ ದೂರಮಾಡಿ ದಾಮೋದರ ಚಂದ ಮಾಡುವ ಜನಾರ್ದನನು 2 ಎಡಕ ಯಾದವ ನಾರಾಯಣ ಕೃಷ್ಣನು ಬಲಕ ಬಾಲಮುಕುಂದ ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ ಚಿತ್ತ ಮನದೊಳು ಅಚ್ಯುತನು 3 ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ ಆಭಯನಿತ್ತಿಹ ಪದ್ಮನಾಭ ಮಾಧವ ಮಧುಸೂದನ ಯದು ಕುಲೋತ್ತಮ ಶ್ರೀಧರನು 4 ತುಂಬಿ ಹೃಷಿಕೇಶ ದೃಷ್ಟಿಮೂರುತಿ ನರಸಿಂಹ ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ ಸೃಷ್ಟೇಶ ಗುರು ಕೇಶವನು 5 ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು ರಕ್ಷಿಸುವ ಅಭೋಕ್ಷಜನು ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು ಮೂರ್ತಿ ವಾಮನನು 6 ತುಂಬಿದ ಬಳಗವು ಕಂಡ ಮೇದಿನಿಯೊಳು ಕಂದ ಮಹಿಪತಿ ಸ್ತುತಿಸಿದನು ಬಂದ ಜನ್ಮವು ಕಡೆ ಆಯಿತೆಂದು ಮನದೊಳು ತ್ರಾಹಿ ತ್ರಾಹಿ ಎಂದ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೃಷ್ಟಿ ಇರಬೇಕಯ್ಯ ಬ್ರಹ್ಮದಿ ದೃಷ್ಟಿಯಿರಬೇಕುದೃಷ್ಟಿಯಿಲ್ಲದಿರಲು ಅನುಭವ ಪಟು ದೊರಕದು ಪ ಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯ ರೆಪ್ಪೆಯು ಬಡಿಯದಲಿರಬೇಕು 1 ಅನಿಮಿಷ ದೃಷ್ಟಿಯಂದದಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು2 ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ಸರಿಯದೆ ದೃಷ್ಟಿಯು ಇರಬೇಕು 3 ಕುಳಿತಾ ಸ್ಥಳವು ತಪ್ಪಲು ಮತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುವ ಬೆಳಗದ ಪಸರಿಸಿ ತರನಾಗಿರಬೇಕು 4 ಉದಯಾಸ್ತಮಾನವು ದಿವರಾತ್ರಿಯುಡುಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು 5
--------------
ಚಿದಾನಂದ ಅವಧೂತರು
ನಾ ನಿನ್ನ ಮರೆತರೆ ನೀ ಯನ್ನ ಮರೆವರೆ ದೀನ ವತ್ಸಲ ರಂಗ ದಾನವಾಂತಕ ಕೃಷ್ಣ ಪ ಜ್ಞಾನಗಮ್ಯನೆ ನಿನ್ನ ಧ್ಯಾನ ದೊಳಿಟ್ಟೆನ್ನ ಮಾನದಿಂದಲಿ ಕಾಯೋ ಶ್ರೀನಿವಾಸ ಪ್ರಭುವೆ ಅ.ಪ. ದಿನಕರನ ಜನರು ನೆನೆಯದೆ ಬಿಟ್ಟರೆÉ ಜನರನ್ನು ಬೆಳಗದೆ ದಿನಕರ ಬಿಡುವನೆ ಹೀನವಿಷಯದಿ ಮುಳುಗಿ ತೇಲುವ ಎನ್ನ ನೀನಾಗಿ ಪೊರೆದರೆ ಘನತೆಯಲ್ಲವೆ ದೇವಾ 1 ಪೆತ್ತ ಮಕ್ಕಳು ಬಲು ಕತ್ತೆಗಳಾದರು ಹೆತ್ತ ತಾಯಿಯು ತಾನು ಎತ್ತದೆ ಬಿಡುವಳೆ ಮತ್ತನಾನಾದರು ಉತ್ತಮೋತ್ತಮಸ್ವಾಮಿ ವಾತ್ಸಲ್ಯತೋರಯ್ಯ ಹಸ್ತಿವರದ ಧೊರೆಯೇ 2 ಗೋವತ್ಸಹಾಲಿಗೆ ಗೋವಿನಗುದ್ದಲು ತವಕದಿ ಉಣಿಸದೆ ಗೋವು ಬಿಡುವುದೇ ತವಪಾದ ಕಮಲದಿ ಅವಿನೀತನಾದರೆ ಸುವಿವೇಕ ಜ್ಞಾನವ ಈಯದಿರುವರೇನೋ 3 ಕರಿ ಧೃವ ಭಕ್ತರ ಪೊರೆಯಲಿಲ್ಲವೆ ನೀನು ಘೋರಪಾಪಗಳ ತರಿದೆ ಅಜಾಮಿಳಗೇ ವರವಿತ್ತು ವ್ಯಾಧಗೆ ವರಕವಿಯೆನಿಸಿದೇ ಭಾರವೆ ನಾನಿನಗೆ ಕರುಣಾಸಾಗರ ರಂಗ 4 ಜಯಮುನಿ ಅಂತರ ವಾಯುವಿನೊಳಗಿಪ್ಪ ರಾಯ ಶ್ರೀಕೃಷ್ಣವಿಠಲನೆ ನಂಬಿದೆ ಕಾಯವಚ ಮನದಿ ಜೀಯನೆ ಗತಿಯೆಂಬೆ ನೋಯಿಸದೆ ಭವದಿ ದಯಮಾಡಿ ಸಲಹಯ್ಯ 5
--------------
ಕೃಷ್ಣವಿಠಲದಾಸರು
ಸಂಪ್ರದಾಯದ ಹಾಡುಗಳು ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು 1 ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ 2 ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ 3 ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ 4 ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ 5
--------------
ಚಿದಾನಂದ ಅವಧೂತರು
ಸುಳ್ಳಿನೊಳಗೆ ನಾ ಬಲು ಸುಳ್ಳ ನನ್ನ ಸುಳ್ಳೆ ನನಗೊಳುಪಿಲ್ಲ ಪ ಸುಳ್ಳು ಹೇಳುವೆನು ಅಳತಿಲ್ಲ ಇದು ಎಳ್ಳಷ್ಟಾದರು ಸುಳ್ಳಲ್ಲ ಅ.ಪ ಸೂಜಿಗಡತರ್ಹೊಗೆಯೇಳ್ವುದ ಕಂಡೆ ಅಗ್ನಿ ಮೂಜಗಡರಿ ಸುಡುವುದು ಕಂಡೆ ಸೋಜಿಗ ಕಂಡೆನು ಉರಿಯೊಳು ಮತ್ತೊಂದು ಬೀಜ ಮೊಳೆತು ತೆನೆಯಾದದ್ದ ಕಂಡೆ 1 ಸಾಸಿವೆಕಾಳಷ್ಟು ಬಟ್ಟಲ ಕಂಡೆ ಇಡೀ ದೇಶ ಅದರೊಳಗಿಟ್ಟಿದ್ದ್ದು ಕಂಡೆ ಹಾಸ್ಯದ ಮಾತಲ್ಲ ತಿರುಗಿ ನೋಡಿ ನಾ ದೇಶದೊಳಗೆ ಆ ಬಟ್ಟಲ ಕಂಡೆ 2 ಮೈಯೆಲ್ಲ ತೂತಿನ ತಿದಿಯ ಕಂಡೆ ಅದು ವಾಯುತುಂಬಿ ಬಾತದ್ದು ಕಂಡೆ ದೀವಿಗೆಯಿಲ್ಲದೆ ಬೆಳಗದುಕಂಡೆ ಮತ್ತು ಕಿವುಡ ಮೂಕರ ಏಕಾಂತ ಕಂಡೆ 3 ಉರಿವುದ ಕಂಡೆನು ಬೆಂಕಿಲ್ಲದೆ ಅದು ಆರಿದ್ದಕಂಡೆನು ನೀರಿಲ್ಲದೆ ಹೊರುವುದ ಕಂಡೆನು ಕೂಲಿಲ್ಲದೆ ಮತ್ತು ಇರಿದುಕೊಲ್ವದು ಕಂಡೆ ಕತ್ತಿಲ್ಲದೆ 4 ಮೇಲಕೆ ಬೇರಿಳಿದ್ವøಕ್ಷ ಕಂಡೆನಲ್ಲಿ ಟೊಂಗೆ ನೆಲಕೆ ಬೆಳೆದದ್ದು ಕಂಡೆ ಕಣ್ಣಿಲಿ ಚಲಿಪದು ಕಂಡೆನು ಎಲ್ಲಿಗೆ ಬೇಕಲ್ಲಿ ಇದರ ಕೀಲಿಕಂಡೆ ಶ್ರೀರಾಮನ ಬಲ್ಲಿ 5
--------------
ರಾಮದಾಸರು
ಯೋಗಿಗೆ ಸೃಷ್ಟಿ ಬರುವುದೆಂತು ವಿದ್ಯದಲಲ್ಲದೆಯೋಗ ವಿದ್ಯೆದಲ್ಲಿ ಎಂತು ಅನ್ನಬಹುದೆ ಇಂತುಯೋಗಿಯೆ ಈಶ್ವರ ತಾನೀಗೇಕೆಯೋಗಿಯು ಈಶ್ವರ ಬೇರೆ ಎನೆ ನರಕವುಪಆಲಿಯು ನಿಂತೆ ಆಲಿಯ ಗೊಂಬೆಯು ತಿರುಗದಲಿರಬೇಕುಆಲಿಯು ಮುಚ್ಚದೆ ಆಲಿಯು ರೆಪ್ಪೆಯು ಬಡಿಯದಲಿರಬೇಕು1ಆನಿಮಿಷ ದೃಷ್ಟಿಯಂದಲಿ ಬ್ರಹ್ಮವ ಆಲಿಸುತಿರಬೇಕುಅನಿಮಿಷದಂದದಿ ಕಣ್ಣಿನ ಗುಡ್ಡೆ ತಿರುಗದಲಿರಬೇಕು2ದೃಷ್ಟಿಯು ಕುಳಿತಾ ದೃಷ್ಟಿಯು ಮುಂದಕೆ ಸಾಗಲಿರಬೇಕುದೃಷ್ಟಿಯು ತಾನೆಡಬಲಕೆ ನಲಿಯದೆ ದೃಷ್ಟಿಯು ಇರಬೇಕು3ಕುಳಿತಾ ಸ್ಥಳವು ತಪ್ಪಲು ಮೆತ್ತೆಯು ಕುಳಿತುಕೊಳ್ಳಬೇಕುಥಳಥಳ ಹೊಳೆಯುತ ಬೆಳಗದ ಪಸರಿಸಿ ಗೂಢನಿರಲುಬೇಕು4ಉದಯಾಸ್ತಮಾನವು ದಿವರಾತ್ರಿಯುಡಗಿ ಇರಬೇಕುಚಿದಾನಂದ ಸದ್ಗುರು ತಾನಾಗಿಯೆ ತಾನೆ ಇರಬೇಕು5
--------------
ಚಿದಾನಂದ ಅವಧೂತರು