ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾನಂದ ಉದಧಿವರ್ಧನನೆಂದು ಪ ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ ನಾನಾ ಯಾತನೆ ಭಾವ ಬಲೆಯ ಕಟ್ಟಿ ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1 ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ ನಿರ್ವಾಹ ನಿನ್ನಿಂದ ಸರ್ವ ಜಗಕೆ ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2 ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ ಎನ್ನಲಿ ಎಂದೆಂದು ವೇದವೇದ್ಯ ನಿನ್ನ ದರುಶನ ಫಲಕೆ ನಿನ್ನ ಮಹಕರುಣ ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3 ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು ಅನುಮಾನ ಮಾಡಿದೆನೊ ನಿನ್ನ ಅಮೃತ ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4 ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ ಇನ್ನು ಮಾಯವನು ತೆಗೆದೆನ್ನ ಬೆರೆಯೊ ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
--------------
ಜಯೇಶವಿಠಲ
ಕಾಣದೆ ಇರಲಾರೆ ದೇವ ಮುಖ್ಯಪ್ರಾಣ ಮನೋಹರ ದೇವ ನಿನ್ನವಾಣಿಯಲಮೃತವನೂಡೊ ಕಡೆಗಾಣಿಸಿ ಪದದೆಡೆಯಲ್ಲಿಡೊ ಪ.ಹಿಡಿಯಲು ಮರದಾಸೆಯಿಲ್ಲ ಕುಳಿತಡೆ ಪೊಡವಿಲಿ ದೃಢವಿಲ್ಲ ನಿನ್ನೊಡಲೊಳಗಿಡಬಹುದೆನ್ನ ನನ್ನೊಡೆಯ ಕರುಣಾರಸಪೂರ್ಣ 1ನಿಲಗುಡವರಿಯಾರು ವರ್ಗ ಬಲುಬಳಲಿಪ ಮೂರುಪಸರ್ಗ ಇದರೊಳಗೆ ನಿನ್ನಯ ಶುಭನಾಮ ಒಂದೆಬಲಿಕ್ಯಾಗಿರಲಿ ಪೂರ್ಣಕಾಮ 2ಚಿನ್ಮಯ ಸುಗುಣದ ಖಣಿಯೆ ಸಲಹೆನ್ನನಿರ್ಜರಚಿಂತಾಮಣಿಯೆ ಬಿಡದೆನ್ನ ಮನದೊಳಗೆ ಬೆರೆಯೊ ಪ್ರಸನ್ವೆಂಕಟ ಗಿರಿದೊರೆಯೆ 3
--------------
ಪ್ರಸನ್ನವೆಂಕಟದಾಸರು