ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡುವ ಇಂದಿರಾಪತಿ ಶ್ರೀಪಾದವ ಎಂದೆಂದು ಬಿಡದೆ ಮನದಲಿ ತಂದೆ ಮುಕುಂದನ ಹೊಂದಿ ಭಜಿಸುವ ಧ್ರುವ ಭಾವಭಕುತಿಗಳ ವಿಡಿವ ಭವಬಂಧನದ ಪಾಶ ಕಡಿವ ದಿವಾರಾತ್ರಿಯಲಿ ಹರುಷಬಡುವ ಕಾವಕರುಣನ ಕೃಪೆಯ ಪಡೆವ 1 ಮನಕರಗಿ ಮೈಯ್ಯಮರೆವ ಘನಸುಖದ ಸುಸ್ಮರಣಿಯಲಿರುವ ಆನಂದಮಯಸ್ವರೂಪದಿ ಬೆರೆಯುವ ತನುಮನವು ಶ್ರೀಹರಿ ಗೊಪ್ಪಿಸುವ 2 ಎರಗಿ ಏಕವಾಗಿ ನೊಡುವ ಹರಿಚರಣದಿ ಬೆರೆದು ಕೊಡುವ ಪರಮಗತಿ ಸಾಯೋಜ್ಯಪಡುವ ಧರೆಯೊಳು ನಲಿ ನಲಿದಾಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಂತೆ ದ್ರೌಪತಾದೇವಿಗೆಂತು ಮರುಳಾದಿರಿಭ್ರಾಂತಿ ಹಿಡಿತೇನೊ ಏ ಹೀನ ಎಂಥ ನ್ಯಾಯವಯ್ಯಈ ಮಾತಿಗಿನ್ನೆಂತು ನಕುಲರಾಯ ಪ. ಹೆಣ್ಣು ಮಕ್ಕಳು ಹೊಳೆವೋದುತಪ್ತ ಸುಣ್ಣದಂತೆ ತಿಳಿವೋದುಸಣ್ಣವರೆನೀವು ಅಣ್ಣನ ಮಡದಿಗೆ ಕಣ್ಣು ಹಾಕುವರೇನೊ ಏ ಹೀನಾ 1 ಜಾತಿ ಮಾಣಿಕ ಮಾಲೆ ಕೊಡಲು ತಂದು ಕೋತಿ ರಾಜನ ಕೈಲಿಚಾತುರ್ಯದ್ವಸ್ತವು ನೀತಿಲೆ ಹಿಡಕೊಂಡುಆತುರ ಮಾಡಿದಂತೆ ನಿಮ್ಮಂತೆ2 ನಕುಲರಾಯನೆ ಕೇಳೊಸುಂದರಿಯಲ್ಲೆ ಕಕುಲಾತÉ ಭಾಳೊಸುಖಚಂದ್ರವದನಳೆ ಸಕಲರು ಬೆರೆಯಲು ನಕಲಿ ಆಯಿತು ಕಾಣೊನಿನ್ನಾಣೆ 3 ಅದ್ಬುತ ಮಹಿಮಳೊ ಧರ್ಮರಾಯಗೆಮುದದಿಕೊಟ್ಟರು ಕೇಳೊಅದ ತಾಳಲಾರದೆ ಇದು ನಿಮಗೈವರುಸುದತಿಯ ಬೆರೆಯುವರೇನೊ ಏ ಹೀನ4 ಪತಿ ನಗುವನು ಭಾಳೆ ಏ ತಾಳೊ 5
--------------
ಗಲಗಲಿಅವ್ವನವರು
ಬಂದನಿದಕೋ ರಂಗ ಬಂದನಿದಕೋ ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ. ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ ಕಂಬು ಕಂಠಾ ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ ನಗಧರನು ನಮ್ಮ ಮನಸೂರೆಗೊಂಬುದಕೇ 1 ಕರದಲಿ ಕಂಕಣವು ಬೆರಳಲ್ಲಿ ಉಂಗುರವು ಕೊರಳಲ್ಲಿ ನವರತÀ್ನ ಮುತ್ತಿನಹಾರಗಳೂ ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು ವರ ವೇಣು ವಯ್ಯಾರದಿಂದ ಊದುತಲೀ 2 ಸುರರ ವಂಚನೆಗೈದು ವರ ಋಷಿಗಳನೆ ಜರಿದು ಸಿರಿಗಗೋಚರನೆನಿಸಿ ಪರಮ ಪುರುಷಾ ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ ಚರಿಯ ತೋರೀ 3 ಇಂದಿರೇಶನು ನಮ್ಮ ವೃಂದಾವನದೊಳಿಪ್ಪ ಮಂದಿಗಳ ಮನ ಸೆಳೆದು ಮಾರಜನಕಾ ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ 4 ಗೋವರ್ಧನೋದ್ಧಾರ ಗೋವಳರ ವಡಗೂಡಿ ಗೋಪಿ ಬಾಲಾ ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ 5
--------------
ಅಂಬಾಬಾಯಿ
ವೆಂಕಟಾಚಲವಾಸ ಪಂಕಜಪ್ರಿಯಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ ಕಿಂಕರಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿಪರರನನುಸರಿಸುವೆನೆ ಸಿರಿರಮಣನೆ ನಿನ್ನ ಕರುಣೆಯುಳ್ಳೆ ಪರಸಿರಿಯ ಬಯಸುವೆನೆ 1 ಧರಣಿಯನಾಳುವ ದೊರೆಯ ಕುಮಾರನು ತಿರಿಕೆಯ ಬೇಡುವನೆ ಸುರತರುವಿನ ತಂಪುನೆರಳೊಳು ಕುಳಿತು ತಾ ಗರಿಕೆಯನರಸುವನೆ 2 ಸಾರನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪಧೀರನುಕೊಳಚೆಯನೀರಿಗೆಜರಿಯುವನೆ 3 ಕ್ಷೀರಾಬ್ಧಿ ಮಥಿಸಿದ ಶೂರನಿನ್ನವನಿಗೆ ನೀರು ಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದರವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವ ನರನಿಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲು ತಾ ಮಳೆಯೊಳು ನೆನೆಯುವದೆ ಇಳೆಯೊಳು ಪುಲಿಗಿರಿನಿಲಯನ ದಾಸರ ಬಲುಹು ಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶ ನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗಮಗೋಚರ ಕೇಳು ಜಗವ ತೂಗುವನಿಗೆ ಮಗುವತಿ ಘನವಹುದೆ ಜಗದಘಹರಣ ಎನ್ನಘವ ನೀಗಲು ನಿನ್ನ ಬಗೆಗೆ ದುರ್ಘಟವಹುದೆ 8 ಪರಮಾತ್ಮ ಪರಿಪೂರ್ಣ ಪರವಸ್ತು ನೀನೆಂದು ಮರೆಹೊಕ್ಕೆ ಕಾಯೊ ಎನ್ನ ವರಸುಗುಣಾಕರವರದವಿಠಲಪುಲಿಗಿರಿದೊರೆಸುಪ್ರಸನ್ನಾ 9
--------------
ವೆಂಕಟವರದಾರ್ಯರು
ವೆಂಕಟಾಚಲವಾಸ-ಪಂಕಜಪ್ರಿಯ ಭಾಸ ಶಂಕರಾರ್ಚಿತ ಚರಣ ಪಂಕಜಾಸನ ಪಿತ ಪಂಕಜಲೋಚನ-ಕಿಂಕರ ಜನ ಶರಣ ಪ ಪರಮಾತ್ಮ ನಿನ್ನ ಶ್ರೀಪದಸೇವಕನಾಗಿ ಪರರನುಸರಿಸುವನೆ ಪರ ಸಿರಿಯ ಬಯಸುವನೆ 1 ತಿರುಕೆಯಬೇಡುವನೆ ಸುರತರುವಿನತಂಪು ನೆರಳೊಳು ಕುಳಿತುತಾ ಗರಿಕೆಯನರಸುವನೆ 2 ನಿಗಮ ವಿಚಾರವುಳ್ಳವ ನಿಸ್ಸಾರದಿ ಬೆರೆಯುವನೆ ವಾರಿಧಿಲಂಘಿಪ ಧೀರನು ಕೊಳಚೆಯ ನೀರಿಗೆ ಜರಿಯುವನೆ 3 ಕ್ಷೀರಾಬ್ಧಿಮಥಿಸಿದ ಶೂರನಿನ್ನವನಿಗೆ ನೀರುಮಜ್ಜಿಗೆ ಗಣನೆ ನಾರಸಿಂಹನ ಪದ ಸಾರಿದವನು ಮದವಾರಣಕ್ಕಂಜುವನೆ 4 ಗರುಡಗಮನ ನಿನ್ನ ಶರಣನಾದವನಿಗೆ ತರಳನ ಹಾವಳಿಯೆ ನರಕಾಂತಕ ನಿನ್ನ ಸ್ಮರಿಸುವನರಗೆ ದುರಿತಂಗಳಟ್ಟುಳಿಯೆ 5 ಹೊಳೆಯೊಳು ನೆನೆಯದ ಬಲುಗಟ್ಟಿಕಲ್ಲುತಾಮಳೆ ಯೊಳುನೆನೆಯುವುದೆ ಬಲುಹುಕುಂದಕವಹುದೆ 6 ಇಷ್ಟದಿ ಮನೆಯೊಳು ಮೃಷ್ಟಾನ್ನವುಂಡವ ಪಿಷ್ಟವ ಬಯಸುವನೆ ಸೃಷ್ಟೀಶನಿನ್ನೊಳಗಿಟ್ಟು ದುರ್ದೈವದ ದೃಷ್ಟಿಯನರಸುವನೆ 7 ನಿಗೆಮಗುವತಿ ಘನವಹುದೆ ದುರ್ಘಟವಹುದೆ 8 ಮೊರೆಹೊಕ್ಕೆ ಕಾಯೊ ಯನ್ನ ವರಸುಗಣಾಕರ ವರದವಿಠಲ ಪುಲಿಗಿರಿ ದೊರೆ ಸುಪ್ರಸನ್ನಾ 9
--------------
ಸರಗೂರು ವೆಂಕಟವರದಾರ್ಯರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
--------------
ಪುರಂದರದಾಸರು