ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ ಜರಿಯಬೇಡ ಹರಿಯ ಮರೆಯಬೇಡೆಂದೆಂದು ತಿರಿಯಬೇಡ ಖಳರ ಮನೆಗೆ ಪೋಗಿ ಬೆರೆಯಬೇಡ ಪರರ ಸತಿಯ ಸ್ವಪ್ನದಲೂ 1 ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ ಶ್ರೀ ಕಾಂತ ಚರಿತೆಯನು ಕೇಳದಿರಬೇಡ ಪಾಕವನು ಮಾಡಿ ಏಕಾಂಗಿಯಾಗುಣಬೇಡ ಭೂಕಾಂತರನುಸರಿಸಿ ಬೆಸಗೊಳ್ಳಬೇಡ 2 ಸಾಲ ಮಾಡಲಿ ಬೇಡ ಸಾಲದೆಂದೆನಬೇಡ ನಾಳೆಗೆ ಹ್ಯಾಗೆಂಬ ಚಿಂತೆ ಬೇಡ ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ ಬಾಳುವರ ಸಂಗದಲಿ ಬಾಳೆಲವೊ ಬಾಲ 3 ಕಂಡವರಿಗೆಲ್ಲ ಕೌತುಕ ತೋರಲಿ ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ 4 ಮಂದಮತಿಗಳ ಕೂಡೆ ಮಾತಾಡಲಿ ಬೇಡ ನಿಂದಕರ ಕಣ್ಣೆತ್ತಿ ನೋಡಬೇಡ ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ ದ್ವಂದ್ವದಲಿ ಮಸ್ತಕವ ನೀಡದಿರಬೇಡ5
--------------
ವಿಜಯದಾಸ
ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ ||ಪ||ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||ಅ|| ||ಪ|| ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ || ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ|| ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||
--------------
ವಿಜಯದಾಸ
ಭಕುತರಿಗಾಶೀರ್ವಾದಗಳು ಕುಶಲಕೆ ಬರೆಯುತಲಿರಿ ಎನಗೆ ಪ ಯುಕುತಿಗಳನು ಬರೆದಿಹೆನಿಲ್ಲ ಅ.ಪ ಬೆರೆಯಬೇಡಿ ಈ ಜಗದ ರಗಳೆಯಲಿ ಮರೆಯಬೇಡಿ ಎನ್ನನು ಕ್ಷಣವು ಬೆರೆಯದೆ ಮರೆಯದೆ ಇರುವ ಧೀರರನು ಪೊರೆಯುವುದೇ ಎನ್ನಯ ಗುರಿಯು 1 ನಾಳೆಗೆ ಅಣಿಮಾಡಲು ಕೈಲಾಗದೆ ಗೋಳೇತಕೆ ನಾನೊದಗಿಸುವೆ ಕಾಲು ಕೈಗಳೊದ್ದಾಡುವತನಕ ಮೇಲೆತ್ತುವುದಳವೇ ಎನಗೆ 2 ಬಿಸಿಲು ಗಾಳಿ ಮಳೆಗಳು ಸಿದ್ಧೌಷಧ ಹಸನ ಮುಖವೆ ನಿಮ್ಮಯ ಪಥ್ಯ ರಸ ಕವಳವು ಬೇಕಾದರೆ ಕೊಳೆಯುವ ರಸವನು ತಿನ್ನಲು ಬಯಸದಿರಿ 3 ಕತ್ತಲಿನಲಿ ಓಡÀುತಲಿರುವಿರಿ ಸತ್ತಿರುವುದೆ ನಿಮ್ಮಯ ಬಲವು ಅತ್ತರೇನು ಫಲ ಎತ್ತಿನೋಡಿ ತಲೆ ಹತ್ತಿರದಿ ನಾನಿಹೆ ಸತತ 4 ಭಯವೇತಕೆ ದಾರಿದ್ರ್ಯದಲಿ ಭಯವೇತಕೆ ಜನರನು ಬಿಡಲು ಭಯವೇತಕೆ ಲೌಕಿಕವಿರದಿರಲು ಅಭಯ ಪ್ರಸನ್ನನಿರೆ ಹೃದಯದಲಿ 5 ಬೊಗಳುವರಿರುವರು ಹೊಗಳುವರಿರುವರು ಹಗರಣವೇತಕೆ ಮಾನಸದಿ ಒಗೆಯಿರಿ ಹಗೆತನ ನಗುತ ನಗುತಲಿರಿ ಜಗವೆ ಹೊಸ ಮೊಗ ತೋರುವುದು6
--------------
ವಿದ್ಯಾಪ್ರಸನ್ನತೀರ್ಥರು