ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿದು ಕೊಳ್ಳಿರಿ ಜಾಣರೆಲ್ಲಾ ಅಹಂ ಅಳಿದು ನಿಂತಿರುವಂತ ಸತ್ಯಾತ್ಮ ಬಲ್ಲಾ ಪ ಆದ್ಯಂತ ವಿಸ್ತಾರಮೆಲ್ಲಾ ಇದನು ಕೇ ಳೀದರ್ಜುನÀಗೇಳಿದ ಕಳ್ಳಗೊಲ್ಲ ಅ.ಪ ಎಂಟಾರುಗಳ ನೀನು ಕಂಡೂ ಅಲ್ಲಿ ಟಂಟಣಿಸುವದೇನನುಭವದಿ ನೀನುಂಡೂ ತುಂಟರೈವರಕಡೆಗೊಂಡು ಜ್ಞಾನ ಮಂಟಪದೊಳಗೆ ಆಡುವ ಬಾರೊ ಚೆಂಡೂ 1 ನಾರದಾದಿಗಳೆಲ್ಲ ಬಂದೂ ಆಹ ಮೀರಿದ ಶ್ರೀರಂಗಧಾಮನೊಳು ನಿಂದೂ ಸಾರಿದರು ನಿಜನಾಮವೆಂದೂ ಇದನು ಯಾರಾದರು ಭಜಿಸಿ ಗೋಪ್ಯದೊಳಗೆಂದು 2 ಪರದೊಳಗೆ ನೀ ಬೆರೆದಾಡೊ ಸತ್ಯ ಶರಣರಿಗೊಲಿವ ಹರಿಯಹುದಿದು ನೋಡೋ ನರಹರಿ ಭಜನೆಯ ಮಾಡು ನನ್ನ ಗುರುವೆ ತುಲಸಿ ನಿನ್ನೊಳಿಹುದೈನೆ ನೋಡೋ 3
--------------
ಚನ್ನಪಟ್ಟಣದ ಅಹೋಬಲದಾಸರು
ನಿನ್ನ ನೀ ತಿಳಿಯೋ ಮೂಢ ಭೇದಿಸಿ ಗೂಢ ಧನ್ಯಗೈಸುವ ಪ್ರೌಢ ಸದ್ಗುರು ದೃಢ ಧ್ರುವ ಬಂದು ಬಂದು ಹೋಪಾದೇನ ಸಾಧಿಸಿದಲ್ಲದೆ ಖೂನ ಸಂಧಿಸಿ ಬೀಳುವುದು ಹೀನ ಜನ್ಮಕೆ ನಾನಾ ಹೊಂದು ಮನವೆ ನೀ ಪೂರ್ಣ ಸದ್ಗತಿ ಸುಖ ಸಾಧನ ಎಂದೆಂದಿಗಾದ ನಿಧಾನ ಸಾಂದ್ರ ಸದ್ಘನ 1 ಮುತ್ತಿನಂಥ ಸುಜನ್ಮ ವ್ಯರ್ಥಗಳೆವುದಧರ್ಮ ಹತ್ತಿಲ್ಯಾದಾನಂದೋ ಬ್ರಹ್ಮ ತಿಳಿಯೋ ನೀವರ್ಮ ಚೆನ್ನೊಬ್ಬಳೆ ಮಾಡೊಮ್ಮ ಕಿತ್ತಿಬಿಸ್ಯಾಡೊ ದುಷ್ಕರ್ಮ ಎತ್ತ ನೋಡಲು ಸಂಭ್ರಮ ಸದ್ಗುರು ಧರ್ಮ 2 ತನ್ನ ತಿಳಿದು ನೋಡೊ ಭಿನ್ನ ಭೇದವೆಂಬುದೀಡ್ಯಾಡೊ ಸನ್ಮತ ಸುಖ ಸೂರ್ಯಾಡೊ ಅನುಮಾನ ಬಿಡೊ ನಿನ್ನೊಳೂ ಮಹಿಪತಿ ನೋಡೊ ಅನುಭವನೇ ಕೊಂಡಾಡೊ ಉನ್ಮತವಾಗಿ ನೀ ಕೂಡೊ ಘನ ಬೆರೆದಾಡೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು