ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೋ | ಗುರುವೆ ಜಗದ್ಗುರು ನಿನ್ನ ನಾನೇನೆಂದೆನೋ ಪ ನಿನ್ನ ನಾನೇನೆಂದೆ ನಿಖಿಲ ಜೀವರ ಒಡೆಯಪನ್ನಗ ನಗಧೀಶ ಪತಿತೋದ್ಧಾರನದೂತ ಅ.ಪ. ವಾರಿಧಿಯನೆ ದಾಟಿ | ನಾರಿ ಚೋರನ ಜರೆದುನಾರಿ ಗೋಸುಗ ಕೌರವರ ಸವರೀ ||ಮಾರಮಣನೆ ಸಾರತಮನೆಂಬ ವೇದಾಂತಸಾರ ಪೇಳ್ವಗೆ ಶರಣೆಂದೆನು ಅಲ್ಲದೇ |ಭಾರಿ ಕೋತಿಯು ಎಂದೆನೆ - ಕುಪ್ಪಸ ತೊಟ್ಟುನಾರಿಯಾದವನೆಂದನೆ - ಕಾವಿಯನುಟ್ಟುಪೋರ ಯತಿಯು ಎಂದೆನೆ - ಕುಭಾಷ್ಯಗಳಾರು ಮೂರೆರಡೊಂದರರಿ ಎಂದೆನಲ್ಲದೆ 1 ನೆರಹಿ ಕಪಿಸೈನ್ಯವ ಶರಧಿಯ ಬಂಧಿಸಿದುರುಳ ರಕ್ಕಸರ ಸಂಹರಸೀ ||ಜರೆಯ ಸುತನ ಸೀಳಿ ಬದರೀಗೆತೆರಳೀದವಗೆ ನಮೊ ಎಂದೆನು ಅಲ್ಲದೇ ||ಗಿರಿಯ ಪೊತ್ತವನೆಂದನೆ - ರಕ್ಕಸಿಯಬೆರೆದನೆಂದವ ನೆಂದೆನೆ - ಕೌಪೀನವಧರಿಸಿದವನು ಎಂದೆನೆ - ಸುಜನರ್ಗೆಪರತತ್ವ ಪೇಳ್ದೆವನೆಂದೆನು ಅಲ್ಲದೇ 2 ಕರ್ತು ಹರಿಯೆ ಎಂದುನಿಚೋಚ್ಛ ತರತಮ ಪೇಳ್ದೆ ಎಂದಲ್ಲದೆ ||ಖೇಚರ ನೀನೆಂದನೆ - ವಿರಾಟನೊಳ್‍ಪಾಚಕ ನೀನೆಂದನೆ - ಭವಾಟವಿಮೋಚಕನೇ ಗುರು ಗೋವಿಂದ ವಿಠ್ಠಲಾರ್ಚಕನೆಂದು ಸ್ತುತಿ ಗೈದನಲ್ಲದೆ 3
--------------
ಗುರುಗೋವಿಂದವಿಠಲರು
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14
--------------
ಕಾಖಂಡಕಿ ಶ್ರೀ ಮಹಿಪತಿರಾಯರು