ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಲು ನೀನಂತೆ ನೀ ನಿಲ್ಲದಿಹ್ಯ ಜಗವಿಲ್ಲಂತೆ ಪ ಅಲ್ಲಿ ನೋಡಲು ನೀನಂತೆ ಇಲ್ಲಿ ನೋಡಲು ನೀನಂತೆ ತುಂಬಿ ಬೆಳಗುವ ಬಲ್ಲಿದ ಹರಿ ಸರ್ವೋತ್ತಮನಂತೆ 1 ಕ್ಷೇತ್ರ ತೀರ್ಥವೆಲ್ಲ ನೀನಂತೆ ಮಹಾ ಯಾತ್ರೆ ಫಲಂಗಳು ನೀನಂತೆ ಧಾತ್ರಿ ಈರೇಳಕ್ಕೆ ಸೂತ್ರಧಾರಕನಾದ ಸ್ತೋತ್ರಕ್ಕೆ ಸಿಲುಕದ ಮಹಿಮನಂತೆ 2 ಕಲ್ಲು ಮುಳ್ಳು ಎಲ್ಲ ಬಿಡದಂತೆ ದೇವ ಎಲ್ಲದರೊಳು ಬೆರೆತಿರುವ್ಯಂತೆ ಅಲ್ಲಿ ಮಲ್ಲ ಬೀರ ನೀನಂತೆ ಜಗ ವೆಲ್ಲವು ಶ್ರೀರಾಮಮಯವಂತೆ 3
--------------
ರಾಮದಾಸರು
ಗೋವಿಂದ ನಮೋ ಗೋವಿಂದ ಪ ಮಂದ ಮನವೇ ನೀನು ಅಂದು ನೋಡೆಲೊ ಒಮ್ಮೆ ಅ.ಪ ತಂದೆ ಗೋವಿಂದ ಎನ್ನೆಲೊ ಮನವೆ ಬಂದ ಬಂಧನವೆಲ್ಲವ ಕಳೆವ ಕುಂದುನಿಂದೆಗಳಿಲ್ಲದೆ ಕಾಯ್ವ ಹಿಂದೆ ಮುಂದೆ ತಾನೆ ನಿಂತಿರುವ ಆಹ ಸಿಂಧುಶಯನ ತನ್ನನ್ಹೊಂದಿ ಭಜಿಪರನ್ನು ಕಂದರೆನ್ನುತಾನಂದದಿ ಸಲಹುವ 1 ಎಲ್ಲಿ ಕರೆದರಲ್ಲೆಬರುವ ಸೊಲ್ಲು ಸೊಲ್ಲಿನೊಳಗೇ ನಿಂತಿರುವ ಅಲ್ಲಿಇಲ್ಲಿ ಎಂದೆಂಬ ಹೇವ ಇಲ್ಲ ಮಲ್ಲಮರ್ದನ (ಉಂ) ಚಲುವ ಆಹ ಪುಲ್ಲನಯನ ತನ್ನ ನಿಲ್ಲದೆ ಭಜಿಪರ ಲಲ್ಲೆನಿಂತುಕೊಂಡುಲ್ಲಾಸದಿ ಕಾಯುವ 2 ಇವರವರೆಂಬುವ ಭಾವ ದೇವ ಮಾವ ಮರ್ದನಗಿಲ್ಲೆಲವೋ ದಿವ್ಯಭಾವ ಭಕ್ತರ ಪಿಡಿದು ಕರೆವ ಕಾವ ಜೀವದಿ ಬಿಡಿದನುದಿನವು ಆಹ ಜಾವಜಾವಕೆ ಶ್ರೀರಾಮನ ಚರಣವ ಭಾವಿಸಿ ಭಜಿಪರ ಭಾವದೋಳ್ ಬೆರೆತಿರುವ 3
--------------
ರಾಮದಾಸರು
ನಾದದಿ ಬೆರೆತಿರು ಮುಕ್ತಾ ನಿತ್ಯವಿರಕ್ತಾವಾದದಿ ಬೆರೆತಿರುಮುಕ್ತಾ ನಾದದಿ ತಾನಾಗಿ ನಿನ್ನ ವಿಚಾರಿಸುನಾದಂ ಧಿಂಧಿಂಧಿಮಿಕೆ ಎಂಬ ಪ ಸರ್ವರೂಪಕವಿದೆ ನಾದ ಸಕಲ ವಿನೋದಪರ್ವಿಕೊಂಡಿರುತಿಹ ನಾದ ಬಹುಲೋಕ ಮೋದದುರ್ವಿಕಾರದ ಮನವ ಎಲ್ಲೆಡೆ ಹರಿಯಿಸುವ ವೀಣಾನಾದ 1 ಆನಂದಕಾಶ್ರಯನಾದ ಆಗಿದೆ ಭೇದಸ್ವಾನಂದ ತಾನೆಯದೆ ನಾದ ಹೇಳಲಿಕೆ ಭೇದಜ್ಞಾನ ಶುದ್ಧನು ಸುಭಕ್ತಿ ವಿರಕ್ತಿಯುತಾನಹುದಹುದೆಂದು ಭೇರಿಯ ನುಡಿಸುವ2 ಹರಣ ಯೋಗಿಗಳ ಭರಣಪಾಪ ಪುರುಷನ ಸಂಹರಣ ತಾನಿಹುದು ಸದ್ಗುಣಭಾಪು ಚಿದಾನಂದ ಗುರುವನು ಕೂಡಲುಈ ಪಥವಲ್ಲದೆ ಇನ್ನೊಂದು ತಾನಿಲ್ಲ3
--------------
ಚಿದಾನಂದ ಅವಧೂತರು