ಒಟ್ಟು 7 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3 ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5 ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6 ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7 ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8 ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9 ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10 ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11 ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12 ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13 ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14 ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15 ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16 ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17 ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18 ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19 ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20 ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21 ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22 ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23 ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24 ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾನವ ಮೂಢಾ | ಕೇಳದೆ ನೀ ಕೆಡಬ್ಯಾಡಾ | ಶೀಲವರಿತುಕೋ ದೃಢಾ | ಹೇಳುವೆ ನಿಜ ಹಿತ ನೋಡಾ ಪ ಹಾದ್ಯರಿಯದೆ ಪ್ರಚಂಡಾ ಓದಿಕೆ ಯಾಕ ಉದಂಡಾ | ಸಾಧಿಸೋ ಸಾಧನ ಕಾಂಡದ ಬೋಧಿಪ ಮಾರ್ತಾಂಡ | ವಾದ ವಿತ್ತಂಡ ಬಿಡು ಪಾಷಂಡಾ 1 ಹರಿಗುಣ ಕೊಂಡಾಡು ನೀ ಅಖಂಡಾ ಕೇಳು ಕೇಳು ಪ್ರಾಣಿ | ಕರಣ ತ್ರಯಂಗಳ ಬೆರಿಸಿ ಮೊರೆಹೋಗಾಭಾವನೆ ಬಲಿಸಿ | ಗುರುವಿಗೆ ಭಾರೊಪ್ಪಿಸಿ ಇರು ಸಂಶಯವಾ ತ್ಯಜಿಸಿ | ನೆರೆ ಜೌಭಾಗಿಸಿ ತನ ಬಿಡು ಹೇಸಿ ಕುಜನ ದುರಾಶೀ ನದಿಯೊಳು ಸೋಸಿ 2 ಗರುವ ಮುರಿದು ನಿದ್ರ್ವಂದಾ ಚರಿಸಿ ಹಿರಿಯರ ವೃಂದಾ | ಪರಿಯಲಿ ನಡಿನೀ ನೆಂದಾ ಗುರುವರ ಮಹಿಪತಿ ಕಂದಾ | ಪಡದರ ಬಂದಾ | ಜನ್ಮಕ ಛಂದಾ ನೋಡಿದರಿಂದಾ ಕೇಳು ಪ್ರಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಗುರುರಾಯ ನಿಮ್ಮ ಕರುಣಲೆನ್ನ ಹೊರೆವುದು ಧ್ರುವ ಒಂದು ಅರಸಿ ದ್ವಂದ್ವಹರಿಸಿ ಮೂರು ಹುರಿಸಿ ಮೀರಿ ನಿಲಿಸಿ ನಾಲ್ಕು ಮರೆಸಿ ಐದು ಜರೆಸಿ ಆರು ತೋರಿಸಿ ಎನ್ನಹೊರೆವುದು 1 ಏಳು ಅರಸಿ ಎಂಟು ಜರಿಸಿ ಒಂಬತ್ತು ಬಲಿಸಿ ಹತ್ತು ಹರಿಸಿ ಅರಿಸಿ ಬೆರಿಸಿ ಇರಿಸಿ ನಿಮ್ಮ ಕರುಣಕೃಪೆಯಲೆನ್ನ ಹೊರೆವುದು 2 ಐದು ಅರಿಸಿ ಐದು ಬೆರಿಸಿ ಐದು ನಿಮ್ಮ ಚರಣಲಿರಿಸಿ ಸುರಿಸಿ ಕರುಣ ಮಳೆಯಗರಿಸಿ ಮಹಿಪತಿ ಜನ್ಮಹರಿಸಿ ಹೊರೆವುದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1 ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2 ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು