ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1 ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2 ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ ಸಾರ ತ್ಯಜಿಸುವುದ್ಯಾಕೊ ಪ ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ ಜಡಭವತೊಡರನು ಕಡಿದುರುಳಿಸುತ ದೃಢದೆ ಬಿಡದೆ ಕಡುಸತ್ಯ ನುಡಿಯುತ ಅಡಿಗಡಿಗೊಡಲೊಳು ಜಡಜನಾಭ ಜಗ ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ 1 ಮೋಸ ಠಕ್ಕು ಕ್ಲೇಶಗುಣ ಕಳೆದು ಭವ ಮೋಸದ ಫಾಸಿಯ ಮೂಲವ ತುಳಿದು ಆಸೆನೀಗಿ ಮನ ಬೆರಿಯದೆ ಜಗ ದೀಶನ ಸಾಸಿರನಾಮ ಧ್ಯಾಸದಿರೆ 2 ಶುನಕನ ಕನಸಿನ ಪರಿಭವನೆನುತ ತನುಮನಧನವೀಡ್ಯಾಡುತ ಅನುದಿನ ಮನಸಿಜನ ಶ್ರೀರಾಮನ ಚರಣವ ಘನತರಭಕುತಿಲಿ ನೆನೆಯುತ ಕುಣಿಯಲು 3
--------------
ರಾಮದಾಸರು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು