ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ರಾಮಾನುಜರು ಬೇಡಿಕೊಂಬುವೆನು ನಿಮ್ಮ ರಾಮಾನುಜರೆ ಬೇಡಿಕೊಂಬುವೆನು ನಿಮ್ಮಾ ಪ ಪಾಡಿ ಹಿಗ್ಗುವ ಸುಖವ ಸಂತತ ಕಮಲ ಮಧ್ಯದೊ ಳಾಡುತೆನ್ನನು ರಕ್ಷಿಸೆನುತಲಿ ಅ.ಪ ಚರಮ ಶ್ಲೋಕವ ಬೋಧಿಸಿ ಅಷ್ಟಾಕ್ಷರಿಯೊ ಳಿರುವ ಗೋಪ್ಯವ ತೋರಿಸಿ ಗೈವುತ ಪ್ರಣವ ಶಬ್ದದಿ ಬೆರಸಿ ನಿನ್ನನೆ ಭಜಿಸಿ ಸ್ಮರಿಸುತ ಪರಮನಾಗುವ ಮತಿಯ ತ್ವರಿತದಿ 1 ಅಷ್ಟಮದಗಳು ಎನ್ನನೂ ಬಂಧಿಸಿ ಮಾಯಾ ಅಷ್ಟಪಾಶದಿ ನೊಂದೆನೊ ದುಷ್ಟಕಾಮಾದಿಗಳ ಭ್ರಾಂತಿಯು ಕಟ್ಟ ನರಕದಿ ಕೆಡಹಿ ಸುಡುತಿದೆ ಭ್ರಷ್ಟಗುಣಗಳ ದೂರಸೇರಿಸಿ ಶ್ರೇಷ್ಠಮುಕ್ತಿಯ ಪಡೆವ ವಿರತಿಯ 2 ಜ್ಯೋತಿ ಜ್ಯೋತಿಯ ನಿಲ್ಲಿಸಿ ಹೂಬಳ್ಳಿಯೊಳ್ ಜ್ಯೋತಿನೋಡು ಪೂಜಿಸಿ ಮಾತೆ ಮಾತುಳ ಪಾಲಕಾನುಜ- ಸತಿ ಸುತ ಬಂಧು ಮಿತ್ರ ವ್ರಾತ ಸಂಗಡಬಂಧಬಿಟ್ಟು ಪು ನೀತನಾಗಲಿಬೇಕು ಎನುತಲಿ 3 ಯಾದವಾದ್ರಿಯ ವಾಸನೆ ಭಕ್ತರನೆಲ್ಲ- ಮೋದದಿಂದಲಿಯಾಳ್ವನೇ ಮೇದಿನೀಮಹದೇವಪುರವರ ನಾದಶ್ರೀಗುರುರಂಗ ನಿನ್ನ ಸು- ಪಾದನಂಬಿದ ರಂಗದಾಸನ ಪರಮಯೋಗಿಯು ಎನ್ನಿಸೆನುತಲಿ 4 ಅಷ್ಟಾಕ್ಷರದ್ವಯದರ್ಥದಿ ನಿಷ್ಠಾಪರನಾಗಿ ಮನದಿ ನಿರುತಂ ಜಪಿಸಲ್ ಇಷ್ಟಾರ್ಥವು ಸಿದ್ಧಿಸುತಂ ಅಷ್ಟಮನೋಳ್ಬೆರದುನಿಲ್ವನಿದು ಸಿದ್ಧಾಂತಂ ಕಂದ
--------------
ರಂಗದಾಸರು
(ಈ) ಲೋಕನೀತಿ-ತಾತ್ವಿಕ ಕೃತಿಗಳು ಕರ್ಮತ್ಯಾಜ್ಯವ ಮಾಡಿರೊ ಸನ್ಮಾರ್ಗದೋಳ್ ಕರ್ಮತ್ಯಾಜ್ಯವ ಮಾಡಿರೊ ಪ ನಿರ್ಮಲ ಮನಮೂಡಿ ಮರ್ಮಜ್ಯೋತಿಯ ಕೂಡಿ ಅ.ಪ ಕಾಮಕ್ರೋಧಗಳ ಸುಟ್ಟು ಸಂಸೃತಿಯಳಿದು ತಾಮಸಮತಿಯ ಬಿಟ್ಟು ಹೇಮದಾಸೆಗೆಮನ ಪ್ರೇಮಮಾಡದೆ ಭಿನ್ನ ನಾಮರೂಪವ ನೂಂಕಿ ರಾಮನೊಳ್ಮನ ನೆಟ್ಟು 1 ಪರಮಪಾವನಮಾದ ಶ್ರೀಹರಿಯಲ್ಲಿ ಬೆರೆಯುತಾನಂದದಿಂದ ಅರಿಗಳಾರರಸಂಗ ಕರಿಗಳೆಂಟರ ಭಂಗ ಕಿರಿದುಎಂಟರ ಅಂಗ ಭರದಿ ತರಿದು ಈಗ 2 ಧರೆಯೊಳ್ದುಷ್ಟರ ಮರದು ಮಹನೀಯರ ಚರಣಸೇವೆಯೊಳ್ಬೆರದು ವರಮಹದೇವನಪುರದ ಶ್ರೀರಂಗನ ನಿರುತ ನಂಬಿಯೆ ಸದ್ಗುರುವ ಸೇವಿಸಿ ದುಷ್ಟ 3
--------------
ರಂಗದಾಸರು
ಘನತರ ದೂರದೊಳು ಸಮಮತದೊಳು ವನಜನಾಭನತಿ ಮನಸಿಜಾನ್ವಿತನಾದ ವನಿತೆ ನೀ ದಾರೆಂದಾ ನಿನ್ನೊಳು ಮನಸೋತೆ ಕೇಳೆಂದಾ ಪ ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ 1 ಕೂರ್ಮ ಕಠೋರದ ಹೆರಳು ಭಂಗಾರವು ಕೂರ್ಮಾವತಾರದ ಮರ್ಮವ ತೋರುವಿ2 ಸರಸ ಮೌಕ್ತಿಕದ ಮುರವು ನಾಸದೊಳು ವರಹವತಾರದ ಕುರುಹು ತೋರುವಿ 3 ಹರಿಯ ಹಿಡಿಯ ತಂತಿ ಭರದಿ ಬಳುಕುತೆ ನರಸಿಂಹರೂಪದೆ ಸ್ಮರಣೆ ತೋರುವಿ 4 ವಾಮನ ಬಾಲೆ ನೀ ಸಾಮಜೆ ಗಮನೆ ವಾಮನ ರೂಪದ ಸೀಮಾ ತೋರುವಿ 5 ತಾಮಸಗಿಡಗಳ ಕಾಮಿಸಿ ತವಿಸುವಿ ರಾಮನ ಕಾಲದ ನೇಮವ ತೋರುವಿ 6 ಸ್ಮರಶರದಂದದಿ ಕರದಿ ಕೇತಕಿ ಪುಷ್ಪ ಪರಶುರಾಮನ ಅರುಹ ತೋರುವಿ 7 ಎದೆಯೊಳಚಲಸ್ತನ ಮುದದಿ ಧರಿಸಿರುವೆ ಮಾಧವ ತಾರದ ಸದವು ತೋರುವಿ 8 ಅಂಗಜ ಬಾಣದಿಂದಂಗದ ಪರವಿಲ್ಲ ಮಂಗಲ ಬೌದ್ಧನ ರಂಗವ ತೋರುವಿ 9 ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ ಪರಿ ವನಪು ತೋರುವಿ 10 ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ ನರಸಿಂಹವಿಠಲನರಸಿ ಬಂದಿರುವೇ 11
--------------
ನರಸಿಂಹವಿಠಲರು
ಧುಮ್ಮಸಾಲೆನ್ನಿರ್ಯೋ ಶ್ರೀ ಗುರುವಿನ ಬಳಗವೆ ಧುಮ್ಮಸಾಲೆನ್ನಿ ಸದ್ಗುರುವಿನ ಬಳಗವೆ ಧ್ರುವ ಗುರುವಿನ ಬಳಗವೆಂದು ಗುರುತುವಿಟ್ಟು ನೋಡಿರ್ಯೋ ಅರುಹಿನೊಳು ಮುಣಗಿ ಪರಮಸುಖ ಸೂರ್ಯಾಡಿರ್ಯೋ ಗರ್ವಿನಾಹರಿಗೆ ಬಿಟ್ಟು ಹರಿದುಹೋಗ ಬ್ಯಾಡಿರ್ಯೋ ಪರ್ವಣಿದೆ ಗುರುಕರುಣ ಪಡೆದು ಪೂರ್ಣಕೂಡಿರ್ಯೋ 1 ಧುಮ್ಮಸಾಲೆನ್ನಿರ್ಯೋ ಬೆರದು ಬ್ರಹ್ಮ ಸುಖವ ಸಮ್ಯಙÁ್ಞನದಿಂದ ದೂರಮಾಡಿ ಭವದು:ಖವ ನಿಮ್ಮ ನಿಮ್ಮೊಳು ನೋಡಿ ಘನ ಕೌತುಕವ ಹ್ಯಮ್ಮಿಯೊಳಗಾಗಿ ನೀವು ಹೋಗಬ್ಯಾಡಿ ಹೋಕುವ 2 ಕಣ್ಣದ್ಯರದು ನೋಡಿರ್ಯೊ ಚಿನ್ನುಮಯ ರೂಪವ ಭಿನ್ನವೆಲ್ಲದ್ಯದೆ ತನ್ನೊಳು ಸಮೀಪವ ಪುಣ್ಯ ಹಾನಿ ಮಾಡಿಕೊಂಡು ಹಿಡಯಬ್ಯಾಡಿ ಕೋಪವ ಕಣ್ಣ ದ್ಯರಸಿಕುಡುವ ಹಚ್ಚಿ ಗುರು ತಾನ ದೀಪವ 3 ನಮ್ಮ ನಿಮ್ಮ ದ್ಯಾವರೆಂದು ಹೊಯಿದಾಡಬ್ಯಾಡಿರ್ಯೋ ಬೊಮ್ಮನ ಪಡದ ಪರಬ್ರಹ್ಮನೊಬ್ಬ ನೋಡಿರ್ಯೋ ಇಮ್ಮನಕ ಹೋಗದೆ ಒಮ್ಮನವ ಮಾಡಿರ್ಯೋ ಸುಮ್ಮನೆ ಸುವಿದ್ಯದೊಳು ಬೆರದು ನಿಜಗೂಡಿರ್ಯೋ 4 ಸುಗ್ಗಿಯೋ ಸುಗ್ಗಿಯೋ ಸುಙÁ್ಞನದ ಲಗ್ಗಿಯೋ ಭಾಗ್ಯವಿದೆ ನೋಡಿ ಭಕ್ತಿ ಙÁ್ಞನ ವೈರಾಗ್ಯಯೋ ಬಗ್ಗಿ ನಡವ ಸಾಧುಸಂತ ಜನರಿಗಿದು ಯೋಗ್ಯಯೋ ಹಿಗ್ಗಿ ಹರುಷಪಡುವ ಮಹಿಪತಿಯ ನಿಜ ಸ್ರಾಘ್ಯಯೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ ನಿನ್ನ ಹೊರತು ಅನ್ಯನರಿಯೆನೂ ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ 1 ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ ನಿತ್ಯ ನಿಜದೊಳಿಟ್ಟ ದೇವಾ 2 ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ ಭೇದಾತೀತ ನಿರ್ವಿಕಾರದಿ ಸುಬೋಧದಿ ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು 3
--------------
ಶಾಂತಿಬಾಯಿ
ಬಲ್ಲೆ ಬಲ್ಲೆನು ಕೃಷ್ಣ ನಿನ್ನ ಮಹಿಮೇ ಪ ಗುಲ್ಲು ಮಾಡದೆ ಬೇಗ ನಿಲ್ಲೈಯ ಮನದಲಿ ಅ.ಪ ತಿರುಪೆ ಬೇಡಿದೆ ಯಾಕೆ ಪರಮ ಪುರುಷನು ಎನಿಸಿ ತುರುವ ಕಾಯ್ದೇಕೆ ಪರಿವಾರ ಸುರರಿರಲು ಕರಡಿಕಪಿಗಳ ಸೈನ್ಯ ನೆರವು ಯಾತಕೆ ನಿನಗೆ ಚರಿತೆ ಸೋಜಿಗವಯ್ಯಾ 1 ಅಷ್ಟಕರ್ತನಿಗೇಕೆ ಸಂತತವು ಜಪತಪವು ಪಟ್ಟ ಮಹಿಷಿಯರಿರಲು ಕುಬ್ಜೆಕೂಡಿದೆ ಯಾಕೆ ಉಟ್ಟು ಸೀರೆಯ ಖಳರ ವಂಚಿಸಿದ ಬಹು ಶೂರ ನಿಷ್ಟೆಯಿಂದಲಿ ಬಲಿಯ ಬಾಗಿಲನು ಕಾಯುವನೆ 2 ಬೆಣ್ಣೆ ಕಳ್ಳರ ಗುರುವೆ ಹೆಣ್ಣು ಕದ್ದವ ನೀನು ಮಣ್ಣು ಮಾಡಿದೆ ಕುಲವ ಯೆಂಜಲುಂಡವ ದೊರೆಯೆ ಅಣ್ಣ ತಮ್ಮಂದಿರಲಿ ಕಲಹವನು ವÀಡ್ಡುತಲಿ ನುಣ್ಣ ಗೆಲ್ಲರ ಮಾಡಿ ನಿಷ್ಕಪಟಿಯೆನಿಸಿದೆಯೊ 3 ಅನ್ಯರಿಗೆ ಉಪಕಾರಿ ಅನನ್ಯರಾ ಶತ್ರುವು ಭವ ಭ್ರಷ್ಟತ್ವ ನೀಡುವೆಯೊ ನಿನ್ನಾಳ ನಿಖಿಳರಿಗು ತೊರ್ಗೊಡದ ಬಹುಗೂಢ ಕಣ್ಣು ಕೈ ಕಾಲೆಲ್ಲ ಸಮವೇನೆ ನಿನಗಯ್ಯ 4 ದೊಡ್ಡ ದೇವನು ಎನಿಸಿ ಗುಡ್ಡವೇತಕೆ ಹೊಕ್ಕೆ ಗಿಡ್ಡರೂಪವ ತೋರಿ ದೊಡ್ಡದಾಗುತ ಎಂದು ಅಡ್ಡಿಯಿಲ್ಲದೆ ಬಲಿಯ ಹೆಡ್ಡನೆನಿಸಲು ಬಹುದೆ ಗುಡ್ಡೆಯಿಲ್ಲದೆ ಚರಿಪ ವಡಲು ಬಗೆದಾ ಘೋರ 5 ಪೂಡವಿಗೊಡೆಯನು ಎನಿಸಿ ಹಡೆದ ಮಾತೆಯ ಕಡಿದೆ ಅಡವಿ ಬೇರನು ತಿಂದೆ ಕಡಲೊಳಗೆ ಸಂಚರಿಪೆ ಮಡದಿಯನು ಕಳಕೊಂಡು ಹುಡುಕುತಲಿ ತಿರುಗಿದೆಯೋ ಸಡಗರದಿ ಹಯವೇರಿ ಕೆಡುಕು ಕಡಿಯುವೆಯಂತೆ 6 ನಾಮಕುಲಗೋತ್ರಗಳ ನೆಲೆಯಕಂಡವರಿಲ್ಲ ಸಾಮಸರಿ ನಿರ್ಗುಣವು ಪೂರ್ಣಗುಣ ನೀನಂತೆ ವಾಮನೀನಾವರಿಸಿ ವಳ ಹೊರಗೆ ಲೋಕಗಳ ನೇಮದಿಂ ಕಾಯುವನು ಪುಡುಕಿದರು ಸಿಗೆಯೇಕೇ 7 ಮಂಗಳಾಂಗನು ಅಂತೆ ಲಿಂಗವರ್ಜಿತನಂತೆ ಶೃಂಗಾರರಸನಂತೆ ಭಂಗರಹಿತನು ಅಂತೆ ಲಿಂಗವೆರಡೂ ಅಂತೆ ಸಿಸ್ಸಂಗ ನೀನಾಗಿ ಅಂಗದಲಿ ಅಂಗನೆಯ ಧರಿಸಿ ಮೆರೆಯುವೆಯೇಕೆ 8 ವೇದ ಬೋಧೆಯನಿತ್ತಗಾಧ ವರ್ಜಿತ ಮಹಿಮ ಮೋದ ಮಯ ನೀ ನಿನ್ನ ನಾದಿನಿಯ ಬೆರೆದೇಕೆ ಸಾಧುಗುಣಪೂರ್ಣ ಭಾನುವನು ಮರೆ ಮಾಡಿ ಮೈದುನನ ಸಲಹಿದ್ದು ಬಹುನ್ಯಾಯ ವೇನೈಯ್ಯ 9 ಹಾಲು ಕೊಟ್ಟವಳನ್ನು ಲೀಲೆಯಿಂದಲಿ ಕೊಂದೆ ಶೀಲಸತಿಯಳ ಬೆರದು ವ್ರತವಳಿದು ಪರವಿತ್ತೆ ಕಾಲನಾಮಕನಾಗಿ ಜಗವೆಲ್ಲ ನುಂಗುವನೆ ಹೇಳುವರು ಕೇಳುವರು ನಿನಗಿಲ್ಲವೇನೈಯ್ಯಾ 10 ಏನೆಂದು ವರ್ಣಿಸಲಿ ನಿನ್ನಯ ವಗತನವ ಸತಿ ಚಂಚಲೆಯು ಮಗಳ ಮಾರ್ಗವುಡೊಂಕು ಮಾನಾಭಿಮಾನಗಳ ಬಿಟ್ಟವರೆ ಪರಿವಾರ ನೀನಿರದಠಾವಿಲ್ಲ ನಿನಗಿಲ್ಲ ತುದಿಮೊದಲು 11 ಸರ್ವಜ್ಞನಾದವಗೆ ಸಾಂದೀಪ ಗುರುವೇಕೆ ಸರ್ವ ನಾಮವು ಕೂಡೆ ನಾಮಕರಣವು ಏಕೆ ಸರ್ವಸ್ವಾಮಿಯು ಎನಿಸಿ ಸಾರಥಿಯು ಆದೇಕೆ ಸರ್ವ ತೋಮುಖ ನೀನು ಜಗವಿಲಕ್ಷಣ ನೈಯ್ಯಾ12 ಒಬ್ಬರಲಿ ನೀಜನಿಸಿ ಮತ್ತೊಬ್ಬರಲಿ ನೀ ಬೆಳೆದೆ ತಬ್ಬಲಿಯೆ ವಾಸ್ತವದಿ ಉಬ್ಬಿಳಿತವರ್ಜಿತವೆ ಅಬ್ಬಬ್ಬ ಬ್ರಹ್ಮಾಂಡ ಹಬ್ಬಿ ನಡೆಸುವ ಧೀರ ಕೊಬ್ಬಿದಾ ಖಳಗಂಜಿ ಮಧುರೆಯನು ತೊರೆದೇಕೊ 13 ಮೇದಿನಿಗೆ ನೀ ಸ್ವಾಮಿ ಮದುವಾದೆ ಮಗಳನ್ನು ಬೈದವಗೆ ಗತಿಯಿತ್ತೆ ಭಕ್ತರಿಗೆ ಕೂಳಿಲ್ಲ ಮೋದ ಮಯ ನುಂಡುಣಿಸಿ ನಿರ್ಲೇಪನೀ ನಿರ್ಪೆ ವಿದುರ ನೌತಣ ಕೊಂಡೆ ಕನ್ಯೆಯಲಿ ನೀ ಬಂದೆ 14 ಜಯ ಮುನಿ ಹೃದಯದಲಿ ವಾಯುವಿನಂತರ ದಿರ್ಪ ಶ್ರೀಯರಸ ತಾಂಡವ ಕೃಷ್ಣವಿಠಲನೆ ನೀನು ಮಾಯಾವಿ ತೋರಗೊಡೆ ನಿಜಮರ್ಮಖಳಜನಕೆ ಜೀಯನೆ ಮೊರೆಹೊಕ್ಕೆ ನಿನ್ನಿರವ ತೋರೈಯ್ಯಾ 15
--------------
ಕೃಷ್ಣವಿಠಲದಾಸರು
ಮಾಯಾ ಕಾರ್ಯವಾಕೆಯೆ ಮಿಥ್ಯವೂಈ ರೀತಿುಂದಲಾತ್ಮನಿಛ್ಛೆಯಲಿದುಸೇರಿದಂತಿಹುದಾಗಿ ಭ್ರಾಂತಿಯು ಜಾರುವನ್ನೆಗ ಪೊಳೆಯಲು1ಮುನ್ನ ನೀ ಬಂದೆನೆಂಬಲ್ಲಿ ಪರವiನುಭಿನ್ನವಿಲ್ಲದೆ ಪೂರ್ಣವಾಗಿರಲಿನ್ನು ನಿನಗೆಡೆಯಾವದೂಅನ್ಯ ವಿಲ್ಲದನನ್ಯನೀಶನೆ ನಾನುನಿನ್ನ ಕಾರ್ಯದ ನೇತ್ರಮಾತ್ರಕ್ಕುನ್ನತ ಕೃತಿಯಾಗಿರೇ 2ಮರುಭೂಮಿಯೊಳು ಮುಸುಕೆ ಮಿತ್ರನ ಕಾಂತಿಕೆರೆಯ ನೀರಿನ ಹಾಗೆ ಕಾಣುತಲಿರಲು ನೋಡಿದರುದಕವೆಬರಿಯ ಚೌಳೆಂತಾ ಪರಿಯು ನಿನ್ನಯ ತೋರ್ಕೆನಿರತ ಉಂಟೆಂಬಂತೆ ನಿನ್ನಯ ಮರುಳಿನಿಂ ಮುಂದಿರುತಿರೆ 3ಹೊಳೆಯಲಿಲ್ಲವು ಹುಸಿಯಾಗಿ ನೀ ಮುನ್ನಬಳಿಕ ನಿನ್ನೊಳು ಬದ್ದನೆಂಬೀ ಬಗೆಯು ತನಗೆಂತಪ್ಪುದೂತಿಳಿದು ನೋಡಲು ತಾನೊಬ್ಬನಾತ್ಮನುಕಳೆದು ಕೂಡುವ ಮಾತು ಮಾತ್ರವೆಯಳವಿಗೊಂಡಿರವಿಷ್ಟಕೆ 4ಅರಿವಿನಾ ಘಟ್ಟಿಯಾಗಿಹೆ ನಾ ನಿತ್ಯವರಿವು ಮರವೆಗಳೆಂದು ತೋರ್ದರು ಕರಣಧರ್ಮಗಳಲ್ಲದೆಬೆರದು ಬೇರಾಹ ಬಗೆಯಂದಿಗಿಲ್ಲವುತಿರುಪತಿಯ ಶ್ರೀ ವೆಂಕಟೇಶನೆ ತರುಬಿಕೊಂಡಿರೆ ವಿಶ್ವವಾ 5ಕಂ||ನುಡಿಯಲು ಜೀವನು ಕೋಪದಿಕಿಡಿಗೆದರುವ ಕಂಗಳಿಂದಭಿಮಾನನ ಬಲದಿಂತಡೆಯದೆ ತನು ಜೀವನನಾರ್ಭಟಿಸುತ ವಾದಿಸಿದುದ ಪುಸಿತನ ಬಂತೆಂಬುದರಿಂ
--------------
ತಿಮ್ಮಪ್ಪದಾಸರು