ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ ಧ್ರುವ ಖೋಯೆಂದು ಕೂಗುತ ಕಾಯದೊಳಗದೆ ಮಾಯದ ಮರೆಯಲುಪಾಯ ಮುಚ್ಚಿದ ನೋಡಿ 1 ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ ಕಂಜನಾಭನ ಕರುಣಾನಂದನೋಡಿರ್ಯೊ 2 ಘೇಳೆನಿಸುತದÀ ತಾಳಮೃದಂಗವು ಒಳಹೊರಗಿದು ಧಿಮಿಗುಡುತದ 3 ಅನುಹಾತ ಧ್ವನಿಅನುಭವ ನೋಡಿರೋ ಅನುದಿನ ಸಾಧಿಸಿ ಘನ ಬೆರದಾಡಿರೊ 4 ಆನಂದೊಬ್ರಹ್ಮದ ಆಟವಿದುನೋಡಿ ಏನೆಂದ್ಹೇಳಲಿ ಸ್ವಾನುಭವದ ಸುಖ 5 ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ ಕುಂಭಿನಿಯೊಳು ನಿಜ ಗಂಭಗುರುತ ನೋಡಿ 6 ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ ಗಾದಿಯ ಮಾತಲ್ಲ ಭೇದಿಸಿ ನೋಡದು 7 ಶುಕಾದಿ ಮುನಿಗಳ ಸುಖಾಶ್ರಯವಿದು ಏಕಾಕ್ಷರ ಬ್ರಹ್ಮ ಏಕೋಚಿತ್ತದಿ 8 ಮೊತ್ತರಾಗಿ ತನ್ನ ನೆತ್ತಿಯೊಳಗಿದೆ ಉತ್ತಮರ ಸುತ್ತ ಮುತ್ತ ಸೂಸುತದ9 ಗುರು ಕೃಪೆಯಿಲ್ಲದೆ ಗುರುತವಾಗದಿದು ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು 10 ಗುರುತವಿಟ್ಟು ಗುರುವಿನ ಮಹಿಮೆಯ ತರಳ ಮಹಿಪತಿ ನಿನ್ನೊಳು ನೋಡೆಂದು 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ ತನು ಮನವಿಟ್ಟು ತಿಳಿವದೀ ಗುರುಗುಟ್ಟು ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು 1 ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ 2 ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ ನೋಡಿದರೆ ತನ್ನೊಳು ತಾಂ ನಿಜ ಖರೆ ಸಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನವಿಗೊಮ್ಮೆ ಹರಿನಾಮಘೋಷ ಮಾಡಿ ಜನುಮ ಸಾರ್ಥಕಾಗುವುದು ಪೂರ್ಣ ನೋಡಿ ಧ್ರುವ ಜನವನ ದೊಳು ಹರಿಯ ಕೊಂಡಾಡಿ ಅನುಮಾನ ಹಿಡಿದು ಕೆಡಬ್ಯಾಡಿರೊ ನೆನವಿಗೊಮ್ಮೆ ನಾಮಘೋಷವ ಮಾಡಿ ನೆನವಿನೊಳು ನೀವು ಘನ ಬೆರದಾಡಿರೊ 1 ಹರಿಯ ನಾಮ ನೆನವುತಿಕ್ಕಿ ಚಪ್ಪಾಳಿ ದೂರಮಾಡಿ ಮನದ ಚಿಂತೆ ಮುಮ್ಮಳಿ ಸಾರಿ ದೂರುತಿದೆ ವೇದ ಪೂರ್ಣ ಕೇಳಿ ಅರಿತು ಹರಿಯ ನಾಮ ನೀವು ಬಲಗೊಳ್ಳಿರೊ 2 ಹರಿನಾಮಕಾಗಬ್ಯಾಡಿ ವಿಮುಖ ಅರಿತು ಮಾಡಿಕೊಳ್ಳಿ ಪ್ರಾಣಪದಕ ತರಳ ಮಹಿಪತಿಯ ತಾರಕ ತೋರುತಿಹ್ಯ ದು ಬ್ರಹ್ಮಸುಖವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಬ್ಬವೆನಗಿಂದು ಧರೆಯೊಳು ನೋಡಿ ಇಬ್ಬರೊಂದಾದ ನೆಲೆನಿಜಗೂಡಿ ಉಬ್ಬಿ ಉನ್ಮನವಾಗಿ ಎನ್ನೊಳು ಕೊಬ್ಬಿದೆನು ಘನಸುಖ ಬೆರದಾಡಿ 1 ಉಬ್ಬಸೆನಗಿನ್ನು ಹಿಂಗಿತು ನೋಡಿ ಹಬ್ಬದೂಟದ ಸವಿರಸಗೂಡಿ ಹಬ್ಬಿಹವಣಿಸಿ ಬೀಳುವ ಗರ್ಭಪಾಶವನೆಗಳೆದೆನು ಈಡ್ಯಾಡಿ 2 ಹಬ್ಬವಾಯಿತು ಮಹಿಪತಿಗಿಂದು ಒಬ್ಬನಿಜವಾದ ಗುರು ಕೃಪಾಸಿಂಧು ಹಬ್ಬಹರುಷದಿ ನೆಲೆನಿಭಗೊಂಡಿÀನ್ನು ಶೋಭಿಸಿತು ಶುಭಕರ ದಿವಸಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು