ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ ಕನಸು ಕಂಡೆನು ಕೇಳು ಘನತರ ಸುಖದೊಳೂ ಮನದೊಳಗನುದಿನ ನೆನೆಸೇ ಸಖಿಅ.ಪ ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು ಝಳಿಪಾ ಚೆಂದುಟಿಯಂ ತಿಳಿವೇ ಸಖಿ 1 ವಾಸವಾರ್ಚಿತ ಹರಿದಾಸ ತುಲಸಿರಾಮಾ ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು 2 ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ 3 ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ ಸುರತಕೇಳಿಗೆ ಬಂದೂ ಸರಸವನಾಡೆಲೆ 4 ವಾಸವನುತ ಹರಿ ದಾಸತುಲಸಿರಾಮಾ ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ 5
--------------
ಚನ್ನಪಟ್ಟಣದ ಅಹೋಬಲದಾಸರು
ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ಮಾರ್ಗನೋಡ್ಯಾನೆಂಬೊ ಭಯದಿ ಪ. ಕೃಷ್ಣರಾಯನ ಬಿಟ್ಟುಎಷ್ಟು ಹೊತ್ತು ಆಯಿತೆಂದುಸಿಟ್ಟು ಬರಧಾಂಗೆ ಸುರರಿಗೆ ಎಷ್ಟು ಸಲುಹಲಿ ಎನುತ 1 ವೀಕ್ಷಿಸಿ ಎನ್ನ ಮಾರಿಯನುಲಕ್ಷ್ಮಿಯರು ಕೋಪಿಸದಿರಲಿಲಕ್ಷ ಕೋಟಿದ್ರವ್ಯ ದಾನಈ ಕ್ಷಣ ಕೊಡುವೆನೆ ಎನುತ2 ಮದನಜನೈಯ್ಯನ ದಯವುಮೊದಲ್ಹಾಂಗೆ ಇದ್ದರೆ ನಾನು ಅದ್ಬುತದ್ರವ್ಯ ದಾನ ಬುಧರಿಗಿತ್ತೇನೆ ಎನುತ3 ವಿತ್ತ ಕೋಟಿ ದಾನವನ್ನು ಮತ್ತೆಕೊಡುವೆನೆ ಎನುತ4 ಇಂದಿರೇಶಗೆ ಅಂಜಿಕೊಂಡುಚಂದ್ರ ಸೂರ್ಯರು ತಿರಗೋರಮ್ಮಚಂದಾದ ನಕ್ಷತ್ರ ಬಂದುಅಂಜಿ ಹೋಗಿವೆ ಎನುತ 5 ಹರಿಗೆ ಅಂಜಿಕೊಂಡು ಶರಧಿಮರ್ಯಾದಿಲೆ ಇರುವೋ ನಮ್ಮದೊರೆಗೆ ಅಂಜಿಕೊಂಡು ವಾಯುತಿರುಗಾಡುವನಮ್ಮ ಎನುತ 6 ಅಗ್ನಿಅಂಜಿ ತನ್ನ ದರ್ಪತಗ್ಗಿಸಿ ಕೊಂಡಿಹ ನಮ್ಮಭಾಗ್ಯದರಸು ಅಂಜಿ ಮಳೆಯುಶೀಘ್ರದಿ ಗರೆಯುವನು ಎನುತ 7 ಹಾಸಿಗ್ಯಾಗುವ ಶೇಷ ಅಂಜಿದಾಸಿ ಆಗುವಳಂಜಿ ಲಕುಮಿದೇಶಕಾಲ ಅಂಜಿ ಒಂದುಲೇಸು ಮೀರ್ಯಾವೆ ಎನುತ 8 ವರಗಿರಿ ವಾಸಗೆ ಅಂಜಿಶೇಷ ಜಗವ ಪೊತ್ತಿಹನಮ್ಮಗರಿಯ ಹರವಿ ಗರುಡ ಅಂಜಿಹರಿಯ ಧರಸಿಹನೆ ಎನುತ9 ಸಂಖ್ಯವಿಲ್ಲದ ಗಜಗಳಂಜಿಫಕ್ಕನೆ ನಿಂತಿಹ ವಮ್ಮದಿಕ್ಪಾಲಕರು ಅಂಜಿ ತಮ್ಮದಿಕ್ಕು ಕಾಯುವರು ಎನುತ 10 ನದ ನದಿಗಳಂಜಿಕೊಂಡು ಒದಗಿಮುಂದಕ್ಕೆ ಹರಿವೋವಮ್ಮಸುದತೆ ವೃಕ್ಷ ಅಂಜಿಪುಷ್ಪಫಲವ ಕೊಡುವೊವೆ ಎನುತ 11 ಕಂತು ನೈಯನ ಅರಸುತನಎಂಥದೆಂದು ಬೆರಗುಬಟ್ಟುನಮ್ಮಂಥಾ ಒಣ ಬಳಗಅಂಜಿಲಿವೋದು ಕಾಂತೆ ಅರುವನೆ ಎನುತ 12 ರಮಿ ಅರಸಗಂಜಿಕೊಂಡು ಬ್ರಮ್ಹ ಸೃಷ್ಟಿ ಮಾಡೋನಮ್ಮಸುಮ್ಮನೆ ಸುರರೆಲ್ಲ ಕೂಡಿದಮ್ಮಯ್ಯ ಎನಲೆಂದು ಹರಿಗೆ13
--------------
ಗಲಗಲಿಅವ್ವನವರು
ನಿನಗಿದುಸರಿಯೆ ನನ್ನ ದೊರೆಯೆ ಪ ದಯಮಾಡೋ ದಾನವಾಂತಕನೆ ಅ.ಪ ಮಾಯಾಧಾರಿಯೇ ನಿನ್ನಂ ಬಲ್ಲೆನೇಳೆಲೋ ಜಾಣಾ ಪ್ರೀಯರಿಲ್ಲದೆ ನನ್ನ ಪ್ರಾಣಮಳಿವೋದು1 ಬರಿಯ ಮಾತಿನೊಳೆನ್ನಂ ಬೆರಗುಮಾಡಲಿ ಬೇಡಾ ಸುರತಕೇಳಿಗಾಗಿ ಬರಮಾಡಿದೆನು ನಿನ್ನ 2 ವಾಸವಾರ್ಚಿತ ಹರಿ ದಾಸಾ ತುಲಶೀರಾಮಾ ಆಶೆಯ ತೋರಿ ನೀ ಮೋಸಗೈದುದು3
--------------
ಚನ್ನಪಟ್ಟಣದ ಅಹೋಬಲದಾಸರು
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ಪರಮ ಪುರುಷನ ನೆನೆಯಿರೋ | ನರಕ ಭೀತ ಕಳ್ಳನರರೇ ನೀವು || ಶರಣಾಗತಾರ್ಥ ಪಾಲಕನೆಂಬಬಿರುದು ಇವನಿಗಲ್ಲದಿನ್ನೊಬ್ಬಗುಂಟೇ ಪ ಹರಿಯೆಂದು ಹೃದಯದಲಿ ಸ್ಮರಿಸಿ ಕರಿರಾಜ ಕರವೆತ್ತಿಕರೆಯೆ | ಉರದಲೊರಗಿಹ ಸಿರಿಗೆ ಸರಿಸಿ | ಸಾರಂಗರಿಯ ಧರಿಸಿಗರುಡನ ಮರೆತು | ಬರಿ ಗಾಲಿಲೆ ಬರುವಾ 1 ಮಂಗಳನು ಜರಿದು ಜಗವು ಕರುಣವಿಲ್ಲದೆ |ಕರಿಣಿಗಳುದಕದ ಹೊಲಸು ಹೇಸಿಕೆಗೆ |ಬೇಸರಗೊಳ್ಳದೆ ಬಂದವನ ಪುಷ್ಕರವೆತ್ತಿ |ಚಕ್ರದಿ ನಕ್ರನ ಮುಖ ಕಡಿವ 2 ಸುರರು ಕಿನ್ನರರು ಬೆರಗು ಬೀರುತಲಿರಲುವರ ಚತುರ್ಭುಜ ರುಕ್ಮ ವಸನಗಳು ಕೊಡುವ3
--------------
ರುಕ್ಮಾಂಗದರು
ಚಂಡಳಹುದೋ ನೀನುಕದನಪ್ರಚಂಡಳಹುದೋ ನೀನುದಿಂಡೆಯರನ್ನು ಖಂಡಿಸಿ ತುಂಡಿಪಚಂಡವಿಕ್ರಮಮಾರ್ತಾಂಡಮಂಡಿತ ದೇವಿಪಭುಗು ಭುಗು ಭುಗಿಲೆಂದು ಮಧು ಕೈಟಭೆಂಬುವರುನೆಗೆ ನೆಗೆ ನೆಗೆಯುತ ರಣಕೆ ಬರಲು ಪೋಗಿಜಿಗಿ ಜಿಗಿ ಜಿಗಿದವರ ನೀನು ಯುದ್ಧವ ಮಾಡಿನೆಗೆದುರೆ ಖಡ್ಗವನು ಝಡಿದು ಧಗ ಧಗಧಗಿಸುವ ಚಕ್ರವನು ಇಡಲು ಶಿರವುಜಿಗಿಯೆ ಚರ್ಮವ ಸೀಳಿ ಮಾಡಿದೆ ಭೂಮಿಯ ನೀನು1ಛಟ ಛಟಾಕೃತಿಯಿಂದ ಮಹಿಷಾಸುರನ ಬಲನಟ ನಟ ನಟಿಸುತ ಪಟು ಭಟರಿದಿರಾಂತುಘಟಿಸಿ ರಣಕೆ ಬರಲು ಫಲ್ಗಳ ಕಟಕಟನೆ ಕಡಿದು ನಿಲ್ಲಲು ಅಸುರ ಬಲಸೆಟೆದು ಹಿಂದಾಗುತಲಿರಲು ಸುರಕಟಕನಿಮ್ಮನ್ನು ಹೊಗಳಿ ಕೊಂಡಾಡಲು2ಘುಡು ಘುಡು ಘುಡಿಸುತ್ತ ಮಹಿಷಾಸುರನು ಬರೆದಢ ದಢನೆ ಪೋಗಿ ಹೊಡೆದು ನಿನ್ನಯಪಾದದಡಿಯೊಳವನ ಕೆಡಹಿ ಚದುರ ಬೀಳೆ-ಕಡಿದು ಕಂಡವ ಕೊಡಹಿ ನಿಲ್ಲಲು ಸುರರೊಡೆಯ ನೆಲ್ಲರ ನೆರಹಿನಿಲ್ಲಲು ನೀನುಬಿಡದೆ ಅಭಯವಿತ್ತು ಹರುಷದಿ ವಾರಾಹಿ3ಶುಂಭನಿಶುಂಭರೆಂಬ ರಾಕ್ಷಸರುಪಟಳಅಂಬುಜಾಂಡಕೆ ರಂಭಾಟವದು ಹೆಚ್ಚೆಜಂಭಾರಿದಿವಿಜರೆಲ್ಲ ನಿಲ್ಲದೆ ದೂರಬೆಂಬಿಡದ್ಹೇಳಲೆಲ್ಲ ಕೇಳಿಯೆ ಉ-ಗ್ರಾಂಬಕಳಾಗಿ ನಿಲ್ಲೆ ಅಸುರ ಕಾದಂಬ ನಿನ್ನನುಕಂಡು ಬೆದರಿ ವೋಡಿದರೆಲ್ಲ4ಆರು ನೀನೆಂದು ಶುಂಭನ ದೂತ ವಿಚಾರಿಸೆ ಕೇಳಿಯೆ ಎಮ್ಮರಸನಿಗೆನಾರಿ ನೀ ಸತಿಯಳಾಗು ಜಾಗತ್ಯಕ್ಕೆವೀರ ಶುಂಭನ ಸೊಬಗು ಬಣ್ಣಿಸುವೊಡೆಮೂರು ಲೋಕಕೆ ಹೊರಗು ಬಾ ಎನೆ ನೀನುಚೋರಗುತ್ತರ ವಿತ್ತೆ ಹೇಳ್ವೆನೇನದ ಬೆರಗು5ಕೇಳು ಶುಂಭನ ದೂತ ಖೇಳ ಮೇಳದಿ ನಾನುಕೀಳು ಸಪ್ತದಿಯಾಡ್ದೆ ಈರೇಳು ಲೋಕದಲಿತೋಳು ಸತ್ವವು ಬಲಿದು ಸಮರದಲಿಸೋಲಿಸೆನ್ನನು ಪಿಡಿದು ಒಯ್ಯಲು ಅವರಾಳು ಆಗಿಯೆ ನಡೆದು ಬಹೆನು ಪೋಗಿಖೂಳರ ಕರೆದು ತಾ ರಣಕೆಂದು ನುಡಿದು6ಅಂಬವಚನವಶುಂಭಕೇಳಿಸುಗ್ರೀವನೆಂಬ ನಿಶಾಚರ ಶುಂಭನಲ್ಲಿಗೆ ಪೋಗಿಶಾಂಭವಿಯಾಡಿದುದ ಶಬ್ದವ ಕೇಳ-ಲಂಬುದಿಯ ನೀಂಟುವುದ ವಡಬಾನಳ-ನೆಂಬವೋಲ್ ಕೋಪವ ತಾಳ್ದು ಬರಲು ಸರ್ವಸಂಭ್ರಮದಲಿ ನೋಡಿ ಎದ್ದು ನೀ ನಿಂದುದನು7ಸರಸರನೆ ಶುಂಭಾಸುರನ ಬಲ ಬರೆ ಕಂಡುಗರಗರನೆ ಹಲ್ಲ ಕೊರೆದು ಅವನ ದಂಡಸರಕುಗೊಳ್ಳದೆ ಛೇದಿಸಿ ಸುಭಟವೀರರಿರವನೆಲ್ಲಾ ಶೋಧಿಸಿಶುಂಭನಿಶುಂಭರಶೋಣಿತಕಾರಿಸಿ ಸುರರಿಗಿತ್ತೆಸ್ಥಿರವಪ್ಪ ಸೌಭಾಗ್ಯದವರ ನೀ ಪಾಲಿಸಿದೆ8ದುಷ್ಟ ಜನರೆಲ್ಲ ಸುಟ್ಟು ಭಸ್ಮಮಾಡಿಶಿಷ್ಟ ಜನರ ಪ್ರಾಣಗುಟ್ಟು ನೀನೆಂತೆಂಬರನಟ್ಟಿ ದಟ್ಟಿಸಿದೆ ಪರಾಂಬ ಭಕ್ತರ ಅ-ಭೀಷ್ಟ ಪಾಲಿಪ ಜಗದಾಂಬ ದುರ್ಜನರಘ-ರಟ್ಟಳಹುದೇ ತ್ರಿಪುರಾಂಬ ರಕ್ಷಿಸು ಎನ್ನಶಿಷ್ಟ ಚಿದಾನಂದಅವಧೂತಬಗಳಾಂಬ9
--------------
ಚಿದಾನಂದ ಅವಧೂತರು