ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಲಕೃಷ್ಣ ವರ್ಣನೆ) ಕಂಸಾರಿ ಕೃಷ್ಣಾ ಕಾಡದಿರೆನ್ನನು ಪ ಹಳ್ಳದ ತಡಿಯಲ್ಲಿ ಮಳಲು ತೋಡಿ ತೋಡಿ ಗೊಲ್ಲಿತೆರೊಡÀನಾಡಿ ಕಲಿತ್ಯೋ ಬೆಡಗಾ ಅಹಿನೇರಿ ಹುಡುಗಾ ಮಾಡಿದಿ ತುಡುಗಾ 1 ನೀರಿಗ್ಹೋಗುವಾಗ ದಾರಿಗಡ್ಡಕಟ್ಟಿ ನಾರಿ ನೀನಾರೆಂದ್ವಿಚಾರಿಸುವೀ ದೂರದಲ್ಲಿರುವಿ ಬದಿಯಲ್ಲಿ ಬರುವಿ ಬೇರೆ ಕರೆವೆ ಈ ಬುದ್ಧಿ ತರವೆ 2 ವರ ಕದರುಂಡಲಗಿ ಹನುಮಯ್ಯನೊಡೆಯನೆ ನಿನಗೆಣೆಯಿಲ್ಲವೊ ವನಜನಾಭಾ ವನಿತೆಯರೆಲ್ಲಾ ಒಲಿಸಿದೆಯಲ್ಲಾ ಮನುಜನಲ್ಲಾ ಮಾಯದ ಗೊಲ್ಲಾ 3
--------------
ಕದರುಂಡಲಗಿ ಹನುಮಯ್ಯ
ಬರಹೇಳಮ್ಮಾ ಭಾವೇ ಮನೆಗೆ ಬಿರದಂಕ ಹರಿಯಾ| ಚರಣವನ್ನು ಗಾಣದೆನ್ನ ಚಿತ್ರನೆಲೆ ಗೊಳ್ಳದಮ್ಮಾ ಪ ಬಾಲೆಕೇಳೆ ಕುಂತಳೆ ಬೇಸರ ವಿದೇನೇ| ಪಾಲಗಡಲ ಮನೆಯಾ ಬಿಟ್ಟು ಪವನಾಹಾರನ ಪರ್ಯಂಕವನು| ಜಾಳಿಸಿ ತಾನ್ಯಾಕ ಪೋದನೇ ಜಲರುಹ ನಾಭ| ಕಾಲಿಲಲ್ಲದವನಾಗಿ ಕೊಂದು ತಮನನೀಗಿ| ಮ್ಯಾಲಗಿರಿಯ ಪೊತ್ತ ಮರರಿಗ ಮೃತವಿತ್ತಾ| ಭೂಲಲನೆ ಬಡಿಸಿ ಭೂವರಾಹೆನಿಸಿ| ಬಾಲಕರಿಯಲು ರೂಪ ಬೆಡಗಾ ವಿಡಿಸು 1 ಉಡುರಾಜದವನೆ ಕೆಳದೀ ಉನ್ನತಿಯ ನೋಡೇ| ಷಡ್ಗುಣೈಶ್ವರ್ಯವುಳ್ಳಾ ಸುರಮುನಿಸೇವಿತ ಪಾದಾ| ಬೇಡಿ ಭಾಗ್ಯವ ನೀಡುವ ಬಲುದೊರೆ ತಾನಾಗಿ| ಬಡಹಾರುವನಂತೆ ಭೂಮಿ ಬೇಡಿದನಂತೆ| ಕೊಡಲಿಪಿಡಿದರೆ ಸಕುಲ ಮಾಡಿದ ನಾಶಾ ವಡನೆ ವಾನರ ಸಂಗ ವಿರಹರಿಸಿ ಸುರತುಂಗಾ| ತುಡುಗತನದಿ ಬೆಣ್ಣೆತಿನ್ನುವರೆ ರನ್ನೆ 2 ಕರಿರಾಜ ಗಾಮಿನೀ ಕಿರೀಟ ಕುಂಡಲದಾ ಶಿವತ್ವಕುಂಡಲದಿಂದಾ| ಪರಮಪುರಷದೇವನು ಪೀತಾಂಬರಧಾರೀ| ಬರಿಯ ಬತ್ತೆಲೆಯಾಡಿ ಬೌದ್ಯರೋಳಗ ಕೂಡೀ| ತುರಗೀರಿಯ ವನರ ತುಳಿಸುತ ಸುರವರ ಮೊರೆಗೇಳಿ ಬಂದನು ಮನದೊಳು ನಿಂದನು| ಗುರು ಮಹಿಪತಿ ಪ್ರೀಯಾ ಗುಣಗಣನಿಲಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಾವಣಿ ಪದ ದೂರ್ ದೂರಲ್ಲ ಕೋಲ್‍ಕಾರ ಕೃಷ್ಣ ಕೇಳು ಬಾಲೆ ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು 1 ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ ಪುಂಡತನ ಬುದ್ದಿಯಿದು ಥರವೇನೆಂದರೆ ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ 2 ಕಾಕು ಮಾತಾಡುತಿದ್ದಿ ಸಾಕು ನಿನ್ನ ಮಾತೀಗ ಸಲುಗೇನೆಂದರೆ ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ 3 ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ 4 ಒಳತನಕ್ಯಾತಕೆ ಬೆಳತನಕ್ಯಾತಕೆ ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ5
--------------
ಶ್ರೀದವಿಠಲರು