ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಬಿತ್ತಿರೋ ಬೀಜವ ಗಜನಿಗೆ ಮತ್ತೆ ಬೆಟ್ಟಿಗೆ ಬಿತ್ತ ಬಿತ್ತಿದ ಬೀಜ ಬಾರದು ಪ ಒಳ್ಳೆ ಪಾತ್ರನ ನೋಡಿ ವೇದಾಂತ ವೇದ್ಯಗೆ ಬೆಳ್ಳಿ ಸುವರ್ಣ ಗೋದಾನಂಗಳ ಉಲ್ಲಾಸ ದೊಳ ಗೊಂದು ಬುದ್ದಿಯೊಳಿತ್ತರೆ ಎಳ್ಳಷ್ಟು ಮಹಮೇರು ಪರ್ವತವಹುದು 1 ದುಡ್ಡು ದುಗ್ಗಾಣಿಯಾದರು ತನಗುಳ್ಳದು ದೊಡ್ಡ ಕುಟುಂಬ ಶ್ರೋತ್ರಿಯನ ನೋಡಿ ಅಡ್ಡ ಮನಸಿಲ್ಲದಂದದಲಿ ಕೊಟ್ಟೊಡೆ ದೊಡ್ಡ ಪರ್ವತವಾಗಿ ಬೆಳೆವುದು ಕಂಡ್ಯಾ 2 ಬೆಟ್ಟ ಭೂಮಿಗೆ ಬೀಜ ಬಿತ್ತಲು ಬೀಜವು ಕಷ್ಟದಿಂದಲಿ ಬೆಳೆದು ಬರಬೇಕು ಶಿಷ್ಯರಾಗಿರ್ದ ವಿಪ್ರೋತ್ತಮರಿಗೆ ಒಂದು ಕೊಟ್ಟೊಡೆ ಒಂದು ಲಕ್ಷವಾಗುವುದು 3 ಶ್ರದ್ಧೆಯಿಂದಲಿ ನಾರಿ ಮಕ್ಕಳು ಸಹಿತ ಸದ್ಭುದ್ಧಿಯಿಂದಲಿ ದಾನ ಕೊಡಬೇಕು ಶುದ್ಧ ಪಾತ್ರನ ನೋಡಿ ಕೊಟ್ಟೊಡೆ ಅದು ಒಂದು ಉದ್ದಿನ ಕಾಳಷ್ಟು ಪರ್ವತವಹುದು 4 ಯಾರಿಗಾದರೂ ವಿಪ್ರರಿಗೆ ಕೊಡಬಹುದು ವಿ ಚಾರಿಸೆ ಬೆಟ್ಟುಗಜನಿಯಂತರ ಮಾರುತಾತ್ಮಜನ ಕೋಣೆಯ ಲಕ್ಷ್ಮೀರಮಣನ ಚಾರು ದಾಸರಿಗೆ ಇತ್ತರದು ಕೋಟಿ ಫಲವದು 5
--------------
ಕವಿ ಪರಮದೇವದಾಸರು