ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಲಿ ಕೂಸಿನ ಚರ್ಯಮಾನಿನಿ ಉಳಿದದ್ದ ಆಶ್ಚರ್ಯ ಪ ಪುಟ್ಟಿದೇಳನೆಯ ದಿನವೆ ಬಾಲಗ್ರಹ ಬಂದುಎಷ್ಟು ಕಾಡಿದಳು ನಮ್ಮಪ್ಪನಸೃಷ್ಟಿಪಾಲಕ ಸಿರಿವಿಷ್ಣು ದಯದಿಂದಕಷ್ಟ ಕಳೆದು ನಮ್ಮ ಕೂಸು ಉಳಿದಿತೇ 1 ಒಂದು ಮಾಸದ ಕೂಸು ಅಂದು ಬಂಡಿಯ ಕೆಳಗೆಹೊಂದಿಸಿ ಮಲಗಿಸಿದ್ದೆನೇ ನಾನುಅಂದು ಹಸಿದು ಮುಖದಿಂದ ಬೆರಳನೆ ಚೀಪಿಬಂಧ ಕಳೆದು ಹೀಂಗೆ ಬದುಕಿತೇ 2 ದುಷ್ಟತನವು ಬಹಳ ಎಂದು ಒರಳಿಗೆಕಟ್ಟಿಹಾಕಿದೆ ಇವನ ಒಂದಿನಾಬೆಟ್ಟದಂತೆರಡು ಮರಗಳು ಬೀಳಲು ಮಧ್ಯ ಪುಟ್ಟ ನಮ್ಮಪ್ಪ ಹ್ಯಾಂಗೆ ಬದುಕಿತೆ 3 ಅಂಗಳದೊಳಗೆ ಆಡುತ ಕುಳಿತಿದ್ದ ಕೂಸಿನಾ-ಮಂಗಳಾ ಘಾಳಿ ಬಂದೊಯಿತೆಅಂಗನೇರೆಲ್ಲರೂ ಅಳುತ ಕೂತೇವಲ್ಲೆ ನರ-ಸಿಂಗನಾ ಕರುಣದಿಂದುಳಿದಿತೆ 4 ನೀರು ಕುಡಿದು ಯಮುನೆ ಮೇಲೆ ಆಡಲು ಕೂಸುಘೋರ ಪಕ್ಷಿಯು ಬಂದು ನುಂಗಿತೆಪೋರರೆಲ್ಲರು ನೋಡಿ ಗಾಬರಿಯಾಗಲು ಮತ್ತೆಕಾರಿತವನ ಬಕ ಸೋಜಿಗವೆ 5 ಕತ್ತೆಗಳನು ಕೊಂದು ತಾಳಫಲವು ಗೋಪ-ಪುತ್ರರಿಗೆ ಉಣ್ಣ ಕೊಟ್ಟಿಹನಂತೆಚಿತ್ರಚರಿತನ ನಂದಬಾಲನ ಚರಿತೆ ಏಕಾವೃತದಿಂದಲಿ ಪೇಳಲಳವೇನೆ 6 ಕರುಗಳ ಕಾಯುತಿರಲು ವತ್ಸವೇಷದಿದುರುಳನೊಬ್ಬನು ಬಂದಿಹನಂತೆಅರಿಯದಾ ಕೂಸಿನಾ ಕಾಲ್ಪಿಡಿದುಬೆರಳ ಮರದ ಮೇಲಕ್ಕೆ ತೂರಿದನಂತೆ 7 ಏಳೇ ವರ್ಷದವ ಕೇಳೆ ಗೋವರ್ಧನಏಳು ದಿವಸ ಎತ್ತಿದನಂತೆಬಾಳುವ ಗೋಪಿಯರ ಪಾಲನೆ ಮಾಡಿದನೀಲವರ್ಣನ ಎಷ್ಟು ವರ್ಣಿಸಲೆ 8 ಬಾಲನಾದರು ನಿನ್ನ ಹಾಳು ದೈತ್ಯನ ಕೊಂದು ಬ-ಹಳ ಕುತ್ತುಗಳಿವೆ ಕೇಳಿದೇನೆಬಾಲಕರಿಬ್ಬರು ಲೋಲರಿಬ್ಬರು ನಮ್ಮ ಬಾಲಕರೇನೇ ಸ್ವರ್ಗಪಾಲನು ಇಳೆಯೊಳು ಉದಯಿಸಿದನೇ 9 ಮಂದಗಮನೆ ಎನ್ನ ಕಂದನಾಟಗಳನ್ನುಮಂದಿಯ ದೃಷ್ಟಿಯ ಭಯದಿಂದ ನಾನುಒಂದೂ ಹೇಳದೆ ಹೀಗಾನಂದ ಬಡುವೆನು ನಾನುಚಂದ್ರವದನೆ ರೋಹಿಣಿ ಕೇಳೆ 10 ಗೋಪಿ ಸುಖಿಸುತಿಹಳು 11
--------------
ಇಂದಿರೇಶರು
ಕೋಲು ಕೋಲೆನ್ನ ಕೋಲೆ ಪ ಅಂಜಾನೆ ಗಿರಿಯಲ್ಲಿ | ಸಂಜೀವರಾಯ ಸಹ ಕಂಜನಾಭನಿರುವ | ಅಂಜಿಕ್ಯಾತಕಮ್ಮ 1 ಮೂಡಲು ಗಿರಿವಾಸ | ನಾಡಿಗೊಡೆಯನೆಂದು ಪಾಡುವವರ ದೋಷ | ಓಡಿಸುವನಮ್ಮ 2 ವೆಂಕಟರಮಣನು | ಕಿಂಕರ ಜನಗಳ ಸಂಕಟಗಳ ಕಳೆವ | ಶಂಕೆ ಇಲ್ಲವಮ್ಮ 3 ಈಶ ಶ್ರೀನಿವಾಸ | ದಾಸ ಜನರ ಪೋಷ ರಾಶಿ ದೋಷ ಸುಟ್ಟು | ಲೇಸುಗೈವನಮ್ಮ 4 ಮತ್ಸ್ಯ ಮೂರುತಿ ತ | ನ್ನಿಚ್ಛೆಯಿಂದಲಿ ಬಲು ತುಚ್ಛ ದೈತ್ಯನನು | ಕೊಚ್ಚಿ ಬಿಸುಟನಮ್ಮ 5 ಅಮಿತ ಭಾರ ಪೊತ್ತು ಸುಮನಸರಿಗಮೃತ | ಮಮತೆಲಿತ್ತನಮ್ಮ 6 ಕ್ರೋಡಾಕಾರನಾಗಿ | ರೂಢಿಚೋರನಾದ ಹೇಡಿ ರಕ್ಕಸನ | ತೀಡಿ ಕೊಂದನಮ್ಮ 7 ಘೋರ ರೂಪ ಕೊಂಡು | ಕ್ರೂರ ರಕ್ಕಸನ ದೋರೆ ಕರುಳಕಿತ್ತು | ಪೋರನ ಪೊರೆದನಮ್ಮ 8 ಪುಟ್ಟ ಪೋರನಾಗಿ | ಬೆಟ್ಟದಂತೆ ಬೆಳೆದು ದಿಟ್ಟ ಬಲಿಯ ಶಿರವ | ಮೆಟ್ಟಿ ತುಳಿದನಮ್ಮ 9 ತಾತನ ನುಡಿ ಕೇಳಿ | ಕಾತರನಾಗದೆ ಮಾತೆಯ ಶಿರವನ್ನು | ತಾ ತರಿದಿಟ್ಟನಮ್ಮ 10 ಸೀತೆಯ ಬಿಡಿಸಲು | ಸೇತುವೆಯನು ಕಟ್ಟಿ ಭೂತನನ್ನು ಕೊಂದು | ಖ್ಯಾತಿಗೊಂಡನಮ್ಮ 11 ದ್ವಾರಕಪತಿ ತಾನು | ನಾರಿ ಪಾಂಚಾಲೆಯು ಕೋರಿದ ಕ್ಷಣದಲ್ಲಿ | ಸೀರೆಯ ನೇದನಮ್ಮ 12 ಚಿತ್ತಜನಯ್ಯನು | ಅತ್ತಿತ್ತ ಅಲೆಯುತ ಬೆತ್ತಲೆ ನಾರಿಯರ | ಮುತ್ತುಗೊಂಡನಮ್ಮ 13 ಜಲಜನಾಭನು ತಾ | ಕಲಿಗಾಲ ಕಡೆಯಲ್ಲಿ ಹಲವು ಪಾಪಿಗಳನು | ಫಲದಿ ಕೊಂದನಮ್ಮ 14 ಮುಟ್ಟಿ ಭಜಿಸುವರಿಗೆ | ಇಷ್ಟವಾದ ವರವಕೊಟ್ಟನು ರಂಗೇಶ | ವಿಠಲ ಕೇಳಮ್ಮ 15
--------------
ರಂಗೇಶವಿಠಲದಾಸರು
ಬಿಟ್ಟನೋ ಆತಂಕಗಳನು ನಾ ಕೃಷ್ಣ ನಿನ್ನ ಕರುಣಾ ನಂಬಿ ಪ ಸೃಷ್ಟಿ ಸ್ಥಿತಿ ಲಯಾದಿ ಕರ್ತ ಅಷ್ಟವಿಭವಪೂರ್ಣ ನಿನ್ನ ಇಷ್ಟದಂತೆ ನಡೆಯುವುದೇ ಶ್ರೇಷ್ಠವೆಂಬೊ ಬುದ್ಧಿ ಬಂದು 1 ಬೆಟ್ಟದಂತೆ ಇದ್ದುದಲ್ಲಿ ಘಟ್ಟಿಮಂಜಿನಂತೆ ಕರಗಿ ಕಷ್ಟರಾಶಿಯೆಲ್ಲಾ ಸ್ವಪ್ನ ದೃಷ್ಟದಂತೆ ಆದಮೇಲೆ 2 ತಲೆಯಮೇಲೆ ಕೈಯ್ಯನಿಟ್ಟು ಇಳೆಯ ಮೋರೆ ಮಾಡಿ ನೊಂದು ನೆಲವ ಕಚ್ಚಿ ಬಿದ್ದರೇನು ಫಲವೊ ಧೀರಜನ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು