ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹಾವಳಿ ಮಾಡುತಿಹನಮ್ಮ ಗೋಪಮ್ಮ ಕೇಳೆಏನು ಹಾವಳಿ ಮಾಡುತಿಹನಮ್ಮ ಪ ಏನು ಹಾವಳಿ ಮಾಡುತಿಹಮನೆ ಓಣಿಯಲಿ ಕ್ರೀಡಿಸುವ ಮಕ್ಕಳನುತಾನು ಅಳಿಸುವ ಹಿಡಿಯ ಪೋಗಲುವೇಣುನೂದುತ ಮೋಹಿಸುವನು ಅ.ಪ. ಮನಿಯೊಳು ತಾ ಪೊಕ್ಕು ನೋಡುವನೆ ಪಾಲ್ಮೊಸರ ಕೊಡಗಳಮನಸಿನಂದದಿ ತಿಂದು ಒಡೆಯುವನೆತಿನಿಸಿ ಬೆಕ್ಕಿಗೆ ಕ್ಷಣವು ತಡೆಯದೆ ವನಿತೆರೆಲ್ಲರು ಹಿಡಿಯ ಕೂಸಿನತನುವು ಧರಿಸಿ ನಿಂತ ಕಟಿಯಲಿ ಸ್ತನವ ತಿಂಬುವ ವನರುದೇಕ್ಷಣ1 ತರುಗಳಾಲಯದಲ್ಲಿ ತಾ ಬರುವಕರೆಸದಲೆ ಮುಂಚಿತ ತೊರಿಸಿ ಮೊಲೆಗಳ ಪಾಲ ತಾ ಕುಡಿದಕರಸಿಕೊಳ್ಳದೇ ಸುರಭಿ ತಿರುಗಲು ಸರಣಿಯೊಳು ತಾ ನಿಂತು ನಗುತಲಿ ತರುಣಿಯರ ಹೆರಳ್ಹಿಡಿದುಜಗ್ಗುತ ಕರದಿ ಸಿಗದಲೆ ಭರದಿ ಓಡುವ 2 ಕೂಸಿನಂದದಿ ತೊಡೆಯೊಳಾಡುವನೆ ಕ್ಷಣದೊಳಗೆ ಪತಿಗಳವೇಷಧರಿಸಿ ಮೋಸ ಮಾಡುವನೆತಾಸು ಘಳಿಗೆ ಬಿಡದೆ ನಮ್ಮ ನಿವಾಸ ಮಾಡುತ ಕಾಡುತಿಹಇಂದಿರೇಶವಚ್ಛವ ಸಾಕು ಮಾಡು ಹೇ ಶುಭಾಂಗಿ3
--------------
ಇಂದಿರೇಶರು
ಕತ್ತಲೆಗಂಜುವುದೇನುಮೈದುನ ನಿನ್ನ ಬತ್ತಲೆ ಮಾಡಿದನ ಚಿತ್ತ ಸ್ವಸ್ಥ್ಯವಾದ ಚಪಲಾಕ್ಷಿ ನೀ ಇಂಥಕತ್ತಲೆಗಂಜುವುದೇನ ಪ. ಪುನುಗಿನ ಪರಿಮಳ ಬಿನುಗು ಬೆಕ್ಕಿಗೆ ಉಂಟೆನಿನ್ನ ಮನದಿ ಪಾಂಡವರು ಸರಿಯೆಂದು ದ್ರೌಪತಿನಿನ್ನ ಮನದಿ ಪಾಂಡವರು ಸರಿಯೆಂದು ಕೈ ಹಿಡಿದಿಜನರೆಲ್ಲ ನಗರೆ ಜಗದೊಳು ದ್ರೌಪತಿ1 ಗಿಳಿಯಂಥ ಕಳೆಯ ಹೊಳೆಯ ಬಲ್ಲುದೆ ಗುಬ್ಬಿತಿಳಿದು ನಿನ್ನ ಗರವು ಬಿಡು ಕಂಡ್ಯಾ ದ್ರೌಪತಿತಿಳಿದು ನಿನ್ನ ಗರವು ಬಿಡು ಕಂಡ್ಯಾ ಐವರೂ ಹಳಿದುಕೈ ಹೊಯಿದು ನಗರೇನ ದ್ರೌಪತಿ2 ಆತುರವಾಗಿದ್ದ ಕೀಚಕನಿಗೆಮಾತು ಕೊಟ್ಟವನ ಮಡುಹಿದಿಮಾತು ಕೊಟ್ಟವನ ಮಡುಹಿದ ನಿನ್ನಂಥಫಾತಕಳುಂಟೆ ಜಗದೊಳು ದ್ರೌಪತಿ3 ಮಾಯಗಾರುತಿ ಪತಿಯ ದಾಯದಾಟಕೆ ಹಚ್ಚಿಕಾಯದ ಕಾಂತಿ ಅಡಗಿಸಿಕಾಯದ ಕಾಂತಿ ಅಡಗಿಸಿ ಮೆರೆಸಿದಿಯಾವ ಕಚ್ಚೆತನ ಪರಿಯಲೆ ದ್ರೌಪತಿ4 ಸೃಷ್ಟಿಕರ್ತನೆಂಬೊ ಧಿಟ್ಟ ಗಂಡನ ಒಯ್ದುಅಟ್ಟು ಹಾಕುವನ ಪರಿಯಲಿಅಟ್ಟು ಹಾಕುವನ ಪರಿಯಲಿ ಕೈಯೊಳುಹುಟ್ಟು ಕೊಟ್ಟವನ ಮೆರೆಸೀದಿ ದ್ರೌಪತಿ 5 ಕಳೆಯ ಸುರಿಯುವ ಮುದ್ದು ಎಳೆಯ ಚನ್ನಿಗಪತಿಗೆಬಳೆಯನೆ ಇಡಿಸಿ ಜನರೊಳುಬಳೆಯನೆ ಇಡಿಸಿ ಜನರೊಳು ರೂಪವ ತಿಳಿಯದಂತವನ ತಿರುಗಿಸಿ ದ್ರೌಪತಿ 6 ರಾಜಪುತ್ರನ ಒಯ್ದುತೇಜಿ ಕೆಲಸಕೆ ಇಟ್ಟಿಸೋಜಿಗವಲ್ಲ ಜನರೊಳು ಸೋಜಿಗವಲ್ಲ ಜನರೊಳು ರೂಪವಮಾಂಜುಕೊಂಡವನ ಮೆರೆಸಿದಿ ದ್ರೌಪತಿ7 ಘನ ಗಂಭೀರನ ಒಯ್ದು ದನದ ಕೆಲಸಕೆ ಇಟ್ಟಿಜನರೆಲ್ಲ ನಗರೆ ಜಗದೊಳುಜನರೆಲ್ಲ ನಗರೆ ಜಗದೊಳು ದ್ರೌಪತಿಮನಬುದ್ಧಿ ಎಂದು ಬರಬೇಕು8 ಅತಿ ಅಂತಃಕರಣಿ ಹಿತದ ಅಗ್ರಜನ ಒಯ್ದುರಥಿಕನ ಮಾಡಿ ಮೆರೆಸಿದಿ ದ್ರೌಪತಿರಥಿಕನ ಮಾಡಿ ಮೆರೆಸಿದಿ ರಾಮೇಶನ ಪತಿಗಳಭಿಮಾನ ಇರಲುಂಟೆ ದ್ರೌಪತಿ9
--------------
ಗಲಗಲಿಅವ್ವನವರು
ಕೋಲ ಕೋಲೆನ್ನ ಕೋಲ ಕೃಷ್ಣ ನೀಮದನಗೋಪಾಲನಾಗಿಮೆರೆದಿಯಲೊ ಕೃಷ್ಣ ಪ. ಅಂಬರ ತಕ್ಕ ಸುರುಳಿಯ ಮುಂಡಾಸಮುರಿಗಿಯವಂಕಿ ನಡುವಿಟ್ಟುಮುರಿಗಿಯವಂಕಿ ನಡುವಿಟ್ಟು ರುಕ್ಮಿಣಿಯವರಪುತ್ರ ಪ್ರದ್ಯುಮ್ನಗೆ ಉಡುಗೊರೆ1 ಮುತ್ತಿನಾಭರಣ ಹೆಚ್ಚಿನ್ಹೆಚ್ಚಿನ ಜವಳಿಮತ್ತೆ ಕೃಷ್ಣಯ್ಯನ ಸಭೆಯೊಳು ಮತ್ತೆ ಕೃಷ್ಣಯ್ಯನ ಸಭೆಯೊಳು ಇಟ್ಟೆವಪಾರ್ಥನು ಕೊಟ್ಟ ಉಡುಗೊರೆ 2 ಬೆಳಕಿನಂತೊಪ್ಪುವ ಥಳಥಳಿಸುವ ಜವಳಿ ನಳಿನಾಕ್ಷಿಯರು ಕುಳಿತ ಸಭೆಯಾಳು ನಳಿನಾಕ್ಷಿಯರು ಕುಳಿತ ಸಭೆಯಾಳಗೆ ಇಟ್ಟೆವಕುಳಿತ ಜನಕೆಲ್ಲ ಉಡುಗೊರೆ 3 ಅಂದವಾದ ಬಲು ಚಂದ ಚಂದದ ಜವಳಿ ತಂದೆ ಕೃಷ್ಣಯ್ಯನ ಸಭೆಯೊಳು ತಂದೆ ಕೃಷ್ಣಯ್ಯನ ಸಭೆಯೊಳಗೆ ಇಟ್ಟೆವಬಂದ ಜನಕೆಲ್ಲ ಉಡುಗೊರೆ 4 ಸಾಸಿವೆ ಬಣ್ಣದ ಸೀರೆ ಕುಸುಬೆ ಬಣ್ಣದ ಕುಪ್ಪುಸ ಲೇಸಾದ ಅಡಿಕೆ ನಡುವಿಟ್ಟುಲೇಸಾದ ಅಡಿಕೆ ನಡುವಿಟ್ಟು ರುಕ್ಮಿಣಿಯದಾಸಿಯರಿಗೆಲ್ಲ ಉಡುಗೊರೆ 5 ಹತ್ತೆಂಟು ಸಾವಿರ ಸುತ್ತುವ ಮುಂಡಾಸ ಮತ್ತ ಬೆಟ್ಟಡಕಿ ನಡುವಿಟ್ಟುಮತ್ತ ಬೆಟ್ಟಡಕಿ ನಡುವಿಟ್ಟು ರಂಗಯ್ಯನ ಭೃತ್ಯರಿಗೆಲ್ಲ ಉಡುಗೊರೆ6 ಸುಳಿಬಳ್ಳಿಯಂತೊಪ್ಪುವ ಬಿಳಿ ಚೀಟಿನ ಜೂಲು ಎಳೆ ಮಾವುಗಳ ನಡುವಿಟ್ಟುಎಳೆ ಮಾವುಗಳ ನಡುವಿಟ್ಟು ರಂಗಯ್ಯನ ಗಿಳಿಗಳಿಗೆಲ್ಲ ಉಡುಗೊರೆ 7 ಅಕ್ಕರದಿಂದ ಹೊಸ ಚಿಕ್ಕ ಚೀಟಿನ ಜೂಲುತಕ್ಕ ಕುಲಾಯಿ ಮುರುವಿಟ್ಟುತಕ್ಕ ಕುಲಾಯಿ ಮುರುವಿಟ್ಟು ರುಕ್ಮಿಣಿಯ ಬೆಕ್ಕಿಗೆ ಕೊಟ್ಟ ಉಡುಗೊರೆ 8 ಅಷ್ಟೂರಿಗೆ ಉಡುಗೊರೆ ತಕ್ಕಷ್ಟು ಕೊಟ್ಟೆವಕೃಷ್ಣಯ್ಯನ ಮನಕೆ ಬರಲಿಲ್ಲಕೃಷ್ಣಯ್ಯನ ಮನಕೆ ಬರಲಿಲ್ಲ ಕುಬ್ಚಿಎಂಬೊ ಸೊಟ್ಟ ಸ್ತ್ರೀಯಳ ಕರೆಸಿಲ್ಲ9 ಎಲ್ಲರಿಗುಡಗೊರೆ ಬಲ್ಲಷ್ಟು ಕೊಟ್ಟೆವಚಲುವನ ಮನಕೆ ಬರಲಿಲ್ಲಚಲುವನ ಮನಕೆ ಬರಲಿಲ್ಲ ಗೋಕುಲದಗೊಲ್ಲ ನಾರಿಯರ ಕರೆಸಿಲ್ಲ10 ತರಹ ತರಹದ ಜವಳಿ ದುಂಡು ಮುತ್ತಿನ ಪದಕಪೆಂಡಿ ಸರಗಳ ನಡುವಿಟ್ಟುಪೆಂಡಿ ಸರಗಳ ನಡುವಿಟ್ಟು ರಾಮೇಶನಿನ್ನ ಪಂಡಿತರಿಗೆಲ್ಲ ಉಡುಗೊರೆ 11
--------------
ಗಲಗಲಿಅವ್ವನವರು
ಧನ್ಯ ಧನ್ಯ ರಾಯ ಮಾನ್ಯ ಮಾನ್ಯವೀತ ಮುನ್ನಾರು ಸರಿಯಿಲ್ಲಮುನ್ನೆಲ್ಲ ಕೆಲದಿ ಕೃಷ್ಣನ ಪ್ರಿಯ ಪ. ಕಾಮ ಕ್ರೋಧಗಳೆಲ್ಲ ಸೀಮೆಯ ದಾಟಿಸಿಭೂಮಿಯನಾಳುವನೆಪ್ರೇಮದಿರಾಯ 1 ಚಲ್ವನರಾಜ್ಯದಿ ಇಲಿಗೆ ಬೆಕ್ಕಿಗೆ ಹಿತ ಹುಲಿಗೆ ಮೊಲಕೆ ಹಿತ ಬಲು ಕೌತುಕವ2 ಅಪ್ಪನ ರಾಜ್ಯದಿ ಸರ್ಪಕಪ್ಪೆಗೆ ಹಿತ ತಪ್ಪು ಗುಣಗಳೆಲ್ಲ ಒಪ್ಪರು ಕೆಲದಿ 3 ಮಾನ್ಯನ ರಾಜ್ಯದಿ ಆನೆ ಸಿಂಹಕೆ ಹಿತ ಏನೆಂಬ ಸವತೆಯರ ಹೀನತೆ ಇಲ್ಲ4 ಮುನ್ನ ಕಲಿಯಕಟ್ಟಿ ಚನ್ನರಾಮೇಶನಅನಂತ ದಯಪಡೆದ ಉನ್ನತಿ ನೋಡ 5
--------------
ಗಲಗಲಿಅವ್ವನವರು
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು