ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪಟಳ ಬಿಡಿಸುವರೇ ಇಂಥಾ ಪರತಳ ಭೋಜನವೆಂದಿಗೂ ಮಾಡಬಾರ್ದು ಪ ಇಲಿಗಂಜಿ ನಿಜಗೃಹ ತ್ಯಜಿಸುವರೆ ತನ್ನ ಸಲಹೊ ದೇವನು ಬೆಂಬಲನಾಗಿಹನು 1 ಭವಕಂಜಿ ಭುವನವ ತೊಲಗುವರೆ ಲಕ್ಷ್ಮೀ ಧವನನ ಭಜಿಸುತ ಬಾಳ್ವೆಯ ಮಾಡುವದು 2 ಹರಿಗಂಜಿ ಶರಣರು ಓಡುವರೆ ಇಂಥಾ ನರಸಿಂಹವಿಠಲನೆಂದಿಗು ಬಿಡಬÁರದು 3
--------------
ನರಸಿಂಹವಿಠಲರು
ಕೃಷ್ಣ ನೀ ಕರುಣದಿ ಥಟ್ಟನೆ ಸಲಹೊ ದುಷ್ಟಮರ್ದನ ಸಕಲೇಷ್ಟದಾಯಕ ರಾಮ ಪ. ಹುಟ್ಟಿಸಿದ ದೇವರು ಹುಲ್ಲು ಮೇಯಿಸನೆಂದು ಶಿಷ್ಟ ನುಡಿವುದ ನಂಬಿಹೆನು ಮೆಟ್ಟಿ ಬಾಧಿಸುವಂಥ ದಟ್ಟ ದಾರಿದ್ರ್ಯದ ಬಟ್ಟೆ ಒಂದನು ಕಾಣೆ 1 ಊರ ಜನರ ಮುಂದೆ ಸೇರಿದ ಪದವನ್ನು ದೂರಗೊಳಿಸಿ ಬಹು ಗಾರಾದೆನು ಮಾರಮಣ ನೀನ್ನುದಾರ ಗುಣವ ನಂಬಿ ಚೀರುವ ಎನಗೆ ಬೇರಾರು ರಕ್ಷಕರಿನ್ನು 2 ವಿಶ್ವಕುಟುಂಬಿ ಸರ್ವೇಶ್ವರ ನೀನಿಂದು ವಿಶ್ವಾಸದಿಂದ ನಾನಿರುವದನು ತೈಜಸ ಪ್ರಾಜ್ಞ ತುರ್ಯರೂಪಗಳಿಂದ ವಿಶ್ವವ್ಯಾಪಕನಾದ ನಿನಗರುಪುವುದೇನೊ 3 ಖುಲ್ಲ ಮಾನವರೆಂಬ ಕ್ಷುಲ್ಲ ನುಡಿಗಳಿಂದ ತಲ್ಲಣಗೊಳಿಸುವುದುಚಿತವೇನೊ ಮಲ್ಲ ಚಾಣೂರ ಮುಷ್ಟಿಕರನ್ನ ಗೆಲಿÉದರಿ- ದಲ್ಲಣಯನಗೆ ಬೆಂಬಲನಾಗಿ ಸಲಹಿನ್ನು 4 ಇಂದ್ರಾದಿ ದಿವಿಜರ ಪದಗಳನವರಿಗೆ ಪೊಂದಿಸಿ ಪಾಲಿಪ ಕರುಣಿ ನೀನು ಇಂದಿರೆ ಸಹಿತಾಗಿ ಬಂದೆನ್ನ ಮನಸಿಗಾ ನಂದ ತೋರಿಸೊ ಭುಜಗೇಂದ್ರಾದಿ ಒಡೆಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ದೇಶ ತಿರುಗಿಸಿ ಪರದೇಶಿ ಮಾಡಲು ಬೇಡೋ ಈಶ ನೀ ಘನ್ನಾ ಸಂಪನ್ನಾ ಪ ಜನಕನಂಶದಿ ಧ್ರುವನು ಸನುಮತವ ಮಂಡಿಸಲು ಘನರೋಷ ತಾಳಿ ಮಲಜನನಿ ಧೂರ್ತೆ ದೂಡಲು ವನವಾಸ ಲೇಸೆಂದು ತಿಳಿದು ನಿನ್ನ ನೆನೆಯೆ ತಾ ನಡೆದ ಘನಮಹಿಮ ಶ್ರೀಮನ್ನಾರಾಯಣ ಸ್ಥಿರಪಟ್ಟವ ನಾಡಿದ 1 ಖಳ ಕುರುಪಗೊಡೆತನವು ಭಲೆ ಧರ್ಮಗೆ ವನವಾಸವು ಬಲು ಮಾನವಂತೆ ದ್ರೌಪದಿಯು ಜಲಜನಾಭನೆ ನೀನೆ ಗತಿಯೆನಲು ಒಲಿದು ಬೆಂಬಲನಾಗಿ ಪಾಂಡವರ ಪೊರೆದೆ 2 ವರಮುನಿಯ ಶಾಪದಿಂದರಸನಿಂ ಪ್ರದ್ಯುಮ್ನ ಕರಿರಾಜನಾಗಿ ಮಡುವೊಳು ಕ್ರೀಡಿಸೆ ಭರದಿ ನೆಗಳಿಯು ಪೀಡಿಸೆ ಶ್ರೀ- ಹರಿಯೆಂದು ಮೊರೆಯಿಡÀಲು ಶ್ರೀ- ಕರದಿಯುದ್ಧರಿಸಿದೆ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನ ನಂಬಿದ ಭಕ್ತರಿಗೆ ಬೆಂಬಲನಾಗಿರುವನೆ ಪ. ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತ ಪೊರೆದ ಮಹಾನುಭಾವ ಮುರಹರನೆ ನಿನ್ನ 1 ಶಕ್ತನೆ ನಿನ್ನ ನಾ ಭಕ್ತಿಯಿಂ ಭಜಿಸುವೆ ಭಕ್ತರಿಗೆಲ್ಲ ನೀನು ಮುಕ್ತಿಯ ಕೊಡುವನೆ 2 ಗಿರಿಯೊಳು ನೆಲಸಿಹ ಪರಮಪುರುಷ ರಂಗ 3
--------------
ಹೆಳವನಕಟ್ಟೆ ಗಿರಿಯಮ್ಮ
ಬಹಳ ದೇಹವ ದಂಡನೆ ಮಾಡಿ ದೇಹ ಘನ ಬಳಲಿಸಿ ಅಹಿಶಯನನು ನಿನ್ನ ಬೆಂಬಲನಾಗಿಹ ಚಿಂತೆ ಮಾಡಲಿ ಬ್ಯಾಡಾ ಪ ಅರಿವರ್ಗಗಳು ಕ್ರೀಡಿಸುತಿಹ ಮನದಿ ಧರ್ಮವ ಮಾಡಲಾದೀತೆ ಪಾಪಿಗೆ ಹಿತವಾದೀತೆ 1 ದುರ್ವಿಕ್ಷಯ ಭುಂಜಿಪ ದುರುಳಗೆ ಅಸಮ ಫಲಪ್ರದ ಹರಿದಿನ ಮಾಡ್ದರೆ ನರಕ ಬಾಧೆ ಬಿಟ್ಟೀತೆ 2 ಪರವಿತ್ತವಪಹರಿಸಿ ಧರೆಯ ಪ್ರದಕ್ಷಿಣೆ ಮಾಡ್ದರೆ ಗತಿಯಾದೀತೆ ನರಸಿಂಹವಿಠ್ಠಲನ ಸ್ಮರಿಪ ಸುಜ್ಞಾನಿಗಿ ಬಹುಭಾಗ್ಯ ತಪ್ಪೀತೆ 3
--------------
ನರಸಿಂಹವಿಠಲರು
ಬಾರೊ ಮನಕೆ ಮುರಾರಿ ಗೋಪಾಲಕೃಷ್ಣ ಬಾರೊ ಬೇಗ ಹದಿ- ನಾರು ಸಾವಿರದ ನೂರೆಂಟು ನಾರೇರ ಮನೋಹರ ಪ. ನೀಯೆನಗಿಂಬೆಂದರಸುತ ನಂಬಿಹೆನು ಸಂಬಾಳಿಸುತಿಹ ದೊರೆ ನೀನು ತುಂಬಿದ ದುರಿತಾಡಂಬರ ಓಡಿಸಿ ಬೆಂಬಲನಾಗಿರು ಕಂಬ್ವರಧರನೆ1 ಬಲೆಯನು ಕೆಡವುತ ಬೇಗದಲಿ ಕಳದನುಗಾಲವು ಕಾವುತಲಿ ಸುಲಲಿತ ವಕ್ಷಸ್ಥಳದಲಿ ಭಾರ್ಗವಿ ಲಲನೆಯನಿರಿಸಿದ ನಳಿನಜ ಜನಕಾ 2 ಮಾನ್ಯ ಪರಾಪರ ಮೂರುತಿಯೆ ಚಿನ್ಮಯ ನಿನಗಿದು ಕೀರುತಿಯೆ ಪನ್ನಗ ಗಿರಿವರ ಪದಯುಗ ಪದ್ಮಗ- ಳೆನ್ನ ಶಿರದೊಳಿಸುನ್ನತ ಕರುಣದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ವಂಚನೆಲ್ಲಿಹುದಯ್ಯ ವೈಕುಂಠಪತಿ ಗೊಂಚನೆಲ್ಲಿಹದಯ್ಯ ಪ ವಂಚನೆಲ್ಲಿಹ್ಯದು ವಿರಂಚಿತಾತನಿಗೆ ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ ಚರಣದಾಸರೆಂದು ಪಾಂಡವರ ತುರಗಕಾಯ್ದ ನಿಂದು ನರಗೆ ಬೆಂಬಲನಾಗಿ ತಿರುಗಿದ ಧುರದಲಿ ಜರ ಮರೆಯಾಗದೆ ಪರಮಕರುಣಾಕರ 1 ಜಾಗುಮಾಡುತಲಿವ ಭಕ್ತರ ಯೋಗಕ್ಷೇಮ ತಿಳಿವ ನೀಗದಂಥ ಮಹಾಭೋಗಭಾಗ್ಯವಿತ್ತು ಬಾಗಿಲ ಕಾಯ್ದನು ಸಾಗರನಿಲಯ 2 ಜಾರನೆನಿಸಿಕೊಂಡ ಒಲಿದು ಚೋರನೆನಿಸಿಕೊಂಡ ತೋರಿದವರ ಮನಸಾರ ವರವಿತ್ತು ಭೂ ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3
--------------
ರಾಮದಾಸರು