ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ನಿನ್ನ ಪಾದವ ಕಾಣಬೇಕೆಂದು ಹಂಬಲಿಸಿದೆ ಮಾಧವ ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ ಕಮಲಾಂಬಕ ರಂಗಾ ಪ ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ ಇಂದಿರಾ ಮನೋವಿಲಾಸ ವೃಂದಾರಕರ ನಿಜಕೋಶಾ ಮಂದರಧರ ವಸುಂಧರಪತಿ ಪುರಂದರ ವಂದಿತ ಸುಂದರಾಂಗ ಕಂಬು ಇಂದೀಗ ತೊಂದರೆಕಿಡದಿರು 1 ತಂದಿತಾಯಿಗಳವರಾರೊ ತಾವಳಿದು ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು ಪೊಂದದೆನಲೊ ಇಳಿಜಾರು ಎಂದೆಂದಿಗಿದರ ಗಂಧದೊಳಗೆ ನಾ ಬಂದು ಬಳಲಿ ಸಂ ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ ತಂದೆ ತಾಯಿ ಸರ್ವಂದವು ನೀನೆ 2 ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ ಕುಂದಿದೆ ಎಲ್ಲ ಕಾವಿಲಿ ಬೆಂದೆನೋ ಬಲು ಕೋವಿಲಿ ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ ಇಂದು ಚರಣರವಿಂದವ ತೋರಿಸುವ ಬಂಧು ವಿಜಯವಿಠ್ಠಲೆಂದಹುದೆಂದು 3
--------------
ವಿಜಯದಾಸ
ನಿನ್ನ ಕಾಣಬಂದೆನಯ್ಯ ಚೆನ್ನಕೇಶವಾ ನಿನ್ನ ಕಂಡು ನಲಿದೆ ರಮಾರನ್ನ ಮಾಧವಾ ಪ ಜಳದಿ ಮುಳುಗಿ ತೊಳಲಿ ಬಳಲಿ ಬಹಳನೊಂದೆನು ತಳವ ಬಯಸಿ ಬಳಸಿ ಬಳಸಿ ನಡುವೆ ನಿಂದೆನೊ ಬಳಿಯ ಬಳಗವಿಲ್ಲ ನೋವಿನಿಂದ ಬೆಂದೆನೋ ಸುಳಿಗೆ ಸಿಲುಕಿ ಅಳುಕಿ ಬಳುಕಿ ವಿಧಿಯ ಬೈದೆನೋ 1 ಕರವ ಮುಗಿದು ಕರೆವೆ ನಿನ್ನ ಕರುಣದಿ ಬಾರೋ ಮರುಗಿ ಮರುಗಿ ಕೊರಗಿದೆನಗೆ ಚರಣವ ತೋರೋ ಕರಿಯ ಪೊರೆದೆ ತರಳಗೊಲಿದೆ ಮರುಕವ ಬೀರೋ ಶಿರವ ಚರಣಕಿರಿಸುವೆ ಮಾಂಗಿರಿಯರಂಗ ಬಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾಗಿಲ ತೆಗೆಯವ್ವಾ ಲಕ್ಷ್ಮೀದೇವಿ ಬಾಗಿಲ ತೆಗೆಯವ್ವಾ ಪ ಬಾಗಿಲ ತೆಗೆಯವ್ವಾ ಸಾಗಿ ಬಂದಿಹನಯ್ಯಾ ಭೋಗಿ ಭೂಷಣ ಪ್ರಿಯ ಕೇಶವನ ದಾಸಾ ಅ.ಪ. ಸಂಸಾರ ಜಾಲದಲೀ ಸಿಲುಕಿ ಬೆಂದೇ ಸಂಸಾರ ಮಾಯದಲೀ ಹಿಂಸೆ ಮಾಡಿದವಯ್ಯಾ ಐದಾರುರಿಪುಗಳು ಸಂಶಯ ಪಡದೆ ಬಂದೇ ಶರಣೆಂದೇ 1 ಭವದೊಳುರಳಿ ಬಿದ್ದೆನೋ ಪ್ರಾಣಾಂತಕ ಸವೆದು ಕರಗಿ ಬೆಂದೆನೋ ಯುವತಿಯರೊಡಗೂಢಿ ಇಹವೆನ್ನೆ ನೆರೆನಂಬಿ ವಿವಿಧ ಕಷ್ಟವ ಪೊಂದಿ ಬಂದೇ ಶರಣೆಂದೇ 2 ಹಲವು ಜನ್ಮಗಳಿಂದ ನೋಡಲು ಬಂದೆ ಹಲವು ರೀತಿಗಳಿಂದ ನಳಿನ ನಾಭನ ದಿವ್ಯ ರೂಪವ ನೋಡುವೆ ನಳಿನಾಕ್ಷಿ ತಾಯ ಕೇಶವನ ಸೇರುವನು 3
--------------
ಕರ್ಕಿ ಕೇಶವದಾಸ
ಗುರುರಾಯಾ ಗುರುರಾಯಾ |ತರಣಿಪ್ರಕಾಶ ಯತಿಪ ವರದೇಂದ್ರ ಪಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ |ಮಂದದಯಾಳೋ 1ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ2ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ 3ಮೇದಿನಿಪರು ಬೆರ | ಗಾದರು ದಾನಕೆ ||ಮೋದಮುನಿಮತ ಮ | ಹೋದಧಿ ಚಂದ್ರ 4ಕಾಷಾಯ ವಸನಿ |ದೇಶಿಕವರಪ್ರಾ ||ಣೇಶ ವಿಠಲನವ | ರಾ ಸಲಹುವದೋ 5
--------------
ಪ್ರಾಣೇಶದಾಸರು
ರಕ್ಷಿಸೋ ಲೋಕನಾಯಕನೆ-ನೀ ಎನ್ನ-ರಕ್ಷಿಸೋ ಲೋಕನಾಯಕನೇ ಪಎಷ್ಟೆಷ್ಟು ಜನ್ಮ ಕಳೆದೆನೋ ಇನ್ನೆಷ್ಟೆಷ್ಟು ಜನ್ಮ ಪಡೆವೆನೋ ||ಕಷ್ಟವ ಪಡಲಾರೆ ಕೃಷ್ಣ ಕೃಪೆಯನಿಟ್ಟುಇಷ್ಟವ ಪಾಲಿಸು ಇಭರಾಜವರದನೆ 1ಬಾಲತನದಿ ಬಹು ಬೆಂದೆನೋ ನಾನಾಲೀಲೆಯಿಂದಲಿಕಾಲಕಳೆದೆನೋ ||ಲೋಲಲೋಚನ ಎನ್ನ ಮೊರೆಯ ಕೇಳುತ ಬೇಗಜಾಲವ ಮಾಡದೆ ಪಾಲಿಸೈ ನರಹರಿ 2ಮುದುಕನಾಗಿ ಚಿಂತೆಪಡುವೆನೋ ನಾಕದಡು ದುಃಖವ ಪಡಲಾರೆನೋ ||ಸದರವಲ್ಲವು ಶ್ರೀಪುರಂದರವಿಠಲಮುದದಿಂದ ರಕ್ಷಿಸೊ ಖಗರಾಜಗಮನ 3
--------------
ಪುರಂದರದಾಸರು