ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು 1 ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ 2 ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ3
--------------
ವ್ಯಾಸರಾಯರು
ಶರಣು ಬಂದೆನೊ ಹರಿಯೆ ಶರಣು ಬಂದೆನೊ ಪ ಕರುಣದಿ ನೋಡೆನ್ನ ಸಲಹು ಎಂದೆನೊ ಅ.ಪ. ಜನನ ಮರಣ ಸುಳಿಗಳಲಿ ತೊನೆದು ಬಳಲಿ ನೊಂದೆನೊಘನಭವದಲಿ ಮೂರುತಾಪಗಳಲಿ ಸಿಲುಕಿ ಬೆಂದೆನೊ 1 ಧನಕೆ ಮೆಚ್ಚಿ ನಿನ್ನ ಮರೆತು ಕಹಿಯ ಫಲವ ತಿಂದೆನೊಅನುದಿನ ಘನ ಚಿಂತೆಯಿಂದ ಮನದ ಶಾಂತಿ ಹೊಂದೆನೊ 2 ವನಿತೆ ಸುತರು ಪೊರೆವರೆಂಬ ಭ್ರಮದೊಳಾತ್ಮ ಕೊಂದೆನೊಕೊನೆಗೆ ಗದುಗು ವೀರನಾರಾಯಣನೆ ಗತಿಯೆಂದೆನೊ 3
--------------
ವೀರನಾರಾಯಣ