ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ನಿರ್ಧಯವೊ ಓ ರಾಮ ಶ್ರೀ ರಘುರಾಮ ಪ ಸ್ಮರಿಸಿ ಸ್ಮರಿಸಿ ನಾನು ಕರಗಿ ಬೆಂಡಾದೆನೊ ಕರುಣವಿಲ್ಲವೆ ನಿನಗೆ 1 ಪಾವನ ಚರಿತನೆ ಪಾವನ ಮಹಿಮನೆ ಪಾವನ ರೂಪನೆ ಬಾ 2 ಮಾನವ ಸೇವ್ಯನೆ ಧೇನುಪುರೀಶನೆ ಬಾ ಶ್ರೀ ರಘುರಾಮ ಧೇನುಪುರೀಶನೆ 3
--------------
ಬೇಟೆರಾಯ ದೀಕ್ಷಿತರು
ನಾನಾ ಯೋನಿಗಳೊಳು ಹೀನಜನ್ಮದಿ ಬಂದು ನಾನು ತಿರುಗಲಾರೆನೊ ಗೋಪಾಲ ಪ. ಶ್ರೀನಿವಾಸ ನಿನ್ನ ಸೇರಿದ ಬಳಿಕ ಉದಾಸೀನ ಮಾಳ್ಪರೇನೋ ಗೋಪಾಲ ಅ.ಪ. ಇಂದ್ರಿಯದೊಳಿದ್ದೆನೊ ಗೋಪಾಲ ಪಿಂಡವಾದೆನೊ ಗೋಪಾಲ ಮಾಸ ನಾಲ್ಕಯಿದಾಗಲ ವಯವಂಗಳಿಂದ ಬೆಳೆವುತಿದ್ದೆನೊ ಗೋಪಾಲ 1 ನರಳಿ ಕೋಟಲೆಗೊಂಡೆನೊ ಗೋಪಾಲ ಹಿರಿದು ಚಿಂತಿಸಿದೆನೊ ಗೋಪಾಲ ಕಷ್ಟಬಡುತಿದ್ದೆನೊ ಗೋಪಾಲ ಸಂದ ಧರೆಗೆ ಪತನವಾದೆನೊ ಗೋಪಾಲ2 ಘಾಸಿಯೊಳೊರಲುವೆನೊ ಗೋಪಾಲ ಘಾಸಿಸಿ ದುಃಖಿಪೆನೊ ಗೋಪಾಲ ಬ್ಯಾಸತ್ತು ಒರಲುವೆನೊ ಗೋಪಾಲ ಶ್ವಾಸ ಎತ್ತಿದೆನೊ ಗೋಪಾಲ 3 ಬಾಲತನದಿ ಬಹುವಿಧದಾಟವ ತೋರಿ ಮೇಲನರಿಯದಿದ್ದೆನೊ ಗೋಪಾಲ ಮಾರ್ಜಾಲ ಘಾತಕನಾಗಿದ್ದೆನೊ ಗೋಪಾಲ ಕೂಳಿಗೀಡಾಗಿದ್ದೆನೊ ಗೋಪಾಲ ಪಾಳೆಯಕೀಡಾದೆನೊ ಗೋಪಾಲ 4 ಆಗಿ ಬಾಳುತಲಿದ್ದೆನೊ ಗೋಪಾಲ ನೀಗಿ ಬಾಳುತಿದ್ದೆನೊ ಗೋಪಾಲ ಬಾಧೆಗೆ ಬೆಂಡಾದೆನೊ ಗೋಪಾಲ ಆಗಲು ಪುತ್ರ ಬಾಂಧವರಿಗೋಸ್ಕರ ಭವ- ಸಾಗರ ಎತ್ತಿದೆನೊ ಗೋಪಾಲ 5 ಬಾಲ್ಯಯೌವನವಳಿದು ಜರೆ ಒದಗಿ ನಾನು ಮೇಲೇನರಿಯದಿದ್ದೆನೊ ಗೋಪಾಲ ಬೀಳುತೇಳುತಲಿದ್ದೆನೊ ಗೋಪಾಲ ಹೋದಂತಿದ್ದೆನೊ ಗೋಪಾಲ ಗೂಳಿಯಂದದಲಿದ್ದೆನೊ ಗೋಪಾಲ 6 ಬಾಳುತಲಿದ್ದೆನೊ ಗೋಪಾಲ ಗಿಷ್ಟನೆನಿಸಿಕೊಂಡೆನೋ ಮುಟ್ಟರೆನಿಸಿಕೊಂಡೆನೊ ಗೋಪಾಲ ಕೊಟ್ಟು ತಿನಿಸಿದೆನೊ ಗೋಪಾಲ7 ವೇದನೆಗೊಳುತಿದ್ದೆನೊ ಗೋಪಾಲ ಕೊಂಡದಿ ಬಿದ್ದೆನೊ ಗೋಪಾಲ ಗುಹ್ಯ ಯಾತನೆಗೊಳಗಾದೆ ಗೋಪಾಲ ಬಾಧೆಯೊಳು ಒರಲುವೆನೊ ಗೋಪಾಲ 8 ನಿನ್ನ ನೆನೆಯದಿದ್ದೆನೊ ಗೋಪಾಲ ದುಷ್ಟಬುದ್ಧಿಯೊಳಿದ್ದೆನೊ ಗೋಪಾಲ ಶ್ರೇಷ್ಠಜನ್ಮದಿ ಬಂದೆನೊ ಗೋಪಾಲ ಸೃಷ್ಟಿಯೊಳು ತುರುಗೇರಿ ಗುರು ಅಚಲಾನಂದವಿಠಲ ಸಲಹೆಂದೆನೋ ಗೋಪಾಲ 9
--------------
ಅಚಲಾನಂದದಾಸ
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಎನ್ನಿರೋ ``ಶ್ರೀ ರಾಘವೇಂದ್ರಾಯನ ನಮಃ'' ಎಂಬ ಪ ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ1 ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ2 ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ ಘನ್ನಮಹಿಮಾ ಶ್ರೀ ರಾಘವೇಂದ್ರಾ 3 ಭವರೋಗ ಗಳೆಲ್ಲ ಪರಿಹರಿವುದೊ ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ ಪುನೀತರನೆ ಮಾಡುವಿಯೊ ಗುರುವೆ 4 ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ ಅಪಾರ ಮಹಿಮ ಶ್ರೀ ರಾಘವೇಂದ್ರಾ 5
--------------
ರಾಧಾಬಾಯಿ
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |ಗಹನವಿಕ್ರಮಭೀಮ ಮಹೀಧರಪ ಜಾಧವ ಪಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |ನಿಟಿಲಲೋಚನ ಸುರಪಕ್ಷ ಹೇ || ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷವಹ್ನಿ|ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||ಕಠಿಣ ಸಂಸಾರದಿತ್ರುಟಿಮಾತ್ರ ಸುಖ ಕಾಣೆ |ವಟುರೂಪಿ ಭಕುತರ ಕಟಕದೊಳಿರಿಸೆನ್ನ1ಇಳಿರಥ ನಗಶರಸೋಮಮೌಳಿ|ನಳನಂದಿನಿಪ ಸುತ ರಾಮ ನಾಮಾ |ನಲಿದು ಪಾಡುವ ಗುಣಧಾಮ ರೌಪ್ಯಾ |ಬಲಾವಾಸಾನಂಗ ವಿರಾಮಾ ||ಆಹಾ||ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ 2ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |ಮಂಚ ನೀನಾಹೆ ಖಳರನಾ ||ಆಹಾ||ಹಿಂಚಾಗಿ ಅಳಿವಂಥ ಹಂಚಿಕೆಯಲಿವರ|ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ 3ಅಹಂಕಾರಾಧೀಶ ನಭೇಶತಾತ|ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |ದಿನಪತೇಕ್ಷಣನೆ ಅಶೇಷಾಮೋದ|ಬಹುಮೋದಸಕ್ತಾಯನ್ನಾಶಾ ||ಆಹಾ||ದಹಿಸೊಜಠರಪೋಷ ವಹಿಸಿ ಬೆಂಡಾದೆನೊ |ಅಹಿಮಲಾಂಧಕಾಸುರ ಗುಹಹ ಅಶ್ವತ್ಥಾಮ 4ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |ನಕ್ರಾಹನಂಘ್ರಿಯನಿಶದಲ್ಲಿ |ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |ವಿಕ್ರಮಕರವ್ಯೋಮಕೇಶ||ಆಹಾ||ಶುಕ್ರಪೂಜಿತಪಾದಅಕ್ರೂರಯನ್ನೊಳಿ |ದ್ದ ಕ್ರಮವೆಣಿಸದೆ ಸುಕೃತವೊದಗಿಸೊ5
--------------
ಪ್ರಾಣೇಶದಾಸರು