ವಿಭವ ಪ್ರಪೂರಣ | ಮಾಂಗಿರಿಮೋಹನಾ ಪ
ದಾನವಕುಲಭೀಷಣಾ ಕೃಪಾಕರಾ ಅ.ಪ
ಪರತರ ಸುಖದಾತ ಸುಜನಗಣನುತ
ಕಾಮಿತ ಸಂದಾತ ಪಾರ್ಥಿವ ರಥಸೂತ
ವರದಸ್ವಯಂಜಾತಾ ಶರಣ ಸಂಪ್ರೀತಾ 1
ಮುರಹರ ಮುಚುಕುಂದ ಭಯಹರ ವರದಾ
ಶ್ರೀಮುಖ ಸಾನಂದ ಗೋಕುಲ ಮಕರಂದ
ಸುರಮುನಿ ಬೃಂದ ನಂದನ ಕಂದ
ಸುರುಚಿರ ಕೋವಿದಾ | ಮುರಳೀ ಬೃಹನ್ನಾದ
ಪಾಂಡುಸುತಾನಂದ | ಮಾಂಗಿರಿವರದಾ 2