ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಳಸಿ ಸ್ವೀಕರಿಸೆನ್ನಯ ಪೂಜೆಯ ತುಳಸೀ ಲೋಕೋತ್ತರನರಸೀ ಪ ಈ ಕರಗಳು ಧನ್ಯಗಳಾಗಲಿ ಮನ ವ್ಯಾಕುಲ ಪರಿಹರಿಸಮ್ಮ ಜನನಿ ಅ.ಪ ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಫುಲ್ಲ ಕುಸುಮವಿರಲು ಒಲ್ಲನು ಹರಿ ನೀನಿಲ್ಲದ ಪೂಜೆಯ ಬಲ್ಲರಿದನು ಜ್ಞಾನಿಗಳು ಮಾತೆ 1 ವಂದಿಸಿ ನಿನ್ನಯ ಚರಣಗಳಿಗೆ ಫಲ ಗಂಧ ಪುಷ್ಪಗಳನರ್ಪಿಸುವೆ ಬೃಂದಾವನಲೋಲನ ವಲ್ಲಭೆ ಮೃದು ಮಂದಹಾಸವನು ತೋರೆ ಮಾತೆ 2 ನೀನಿದ್ದೆಡೆ ಹರಿ ತಾನಿರುವನು ಅನು ಮಾನವಿಲ್ಲವೆನಗೆ ನೀನಾಗಿರುವೆ ಪ್ರಸನ್ನವದನೆ 3
--------------
ವಿದ್ಯಾಪ್ರಸನ್ನತೀರ್ಥರು
ಬಾರೋ ಯದುಕುಲ ತಿಲಕ ನಲಿಯುತ ಬಾರೋ ಯದುಕುಲ ತಿಲಕ ಅ.ಪ ನಂದಕುಮಾರ ಸುಂದರಾಕಾರ ಬೃಂದಾವನಲೋಲ ನಲಿಯುತ 1 ಜಗಮೋಹನ ಬಾಲ ಸದನಕೆ 2 ಅಧರಾಮೃತದ ಮಧುರಸ ಕುಡಿದ ಹೃದಯಂಗಮ ಮುರಳೀ ನುಡಿಸುತ 3 ರಂಗಿನ ತಿಲಕ ಮುಂಗುರುಳುಗಳು ಶೃಂಗಾರದ ಸೊಬಗ ನೋಡುವೆ 4 ಕುಣಿಯುತಲಿರುವ ಮನದ ಬಯಕೆಯ ದಣಿಸೋ ವನಮಾಲಿ ಪ್ರಸನ್ನನೆ 5
--------------
ವಿದ್ಯಾಪ್ರಸನ್ನತೀರ್ಥರು