ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದೆ ಏನೇ ಕೊಳಲ ದನಿಯ ಬಾಳಿಗೆ ಅಮೃತವ ಬೀರುವ ಸವಿಯ ಪ ಬೃಂದಾವನದಲಿ ನಂದಯಶೋದ ಕಂದನು ಮುರಳಿಯನೂದುತಿರೆ ಸುಂದರಿಯರು ಆನಂದದಿ ನರ್ತಿಸಿ ಇಂದಿರೆಯರಸನ ಹೊಗಳುವರು 1 ಕಿರುಗೆಜ್ಜೆಯ ದನಿ ಕಿಣಿಕಿಣಿಸುತಿರೆ ಕರದ ಕಂಕಣಬಳೆ ಗಣಗಣರೆನಲು ಚರಣದ ಕಡಗ ಝಣ್ ಝಣಿ ಝಣಿರೆನುತಿರೆ ಪರಮ ಸಂತೋಷದಲಿ ಹರಿಯರುಳುತಿರೆ 2 ಮರುಗ ಮಲ್ಲಿಗೆ ಪಾದರಿ ಸುಮ ಪರಿಮಳ ಭರಿತ ತಂಬೆಲರು ಪರಿಚರಿಸುತಿರೆ ಪರಮಾನಂದವೆ ಪುರುಷನಾಗಿರುವ ಮಾಂ ಗಿರಿಪತಿಯೊಲವನು ಪಡೆಯುವ ಗೆಳತಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗ ಬಂದ ಬೃಂದಾವನದಲಿ ನಿಂದಕೊಳಲಿನ ಧ್ವನಿ ಬಹು ಚೆಂದ ಪ ನಂದಗೋಪಿಯರ ಕಂದ ಮುಕುಂದಸುಂದರಿಯರ ಆನಂದ ಗೋವಿಂದ ಅ.ಪ ಮಂದಗಮನೇರ ಕೂಡಿ ಸರಸವನಾಡುತಇಂದಿರೆಯರಸ ನಗುತ ಕೊಳಲನೂದುತಎಂದೆಂದಿಗೂ ತನ್ನ ನಂಬಿದ ಭಕ್ತರಬಂದು ಪೊರೆವ ಗೋವಿಂದ ಮುಕುಂದ 1 ಉದಧಿ ಸಂಚಾರ ಗುಣಗಂಭೀರನವನೀತದಧಿ ಭಾಂಡಚೋರ ರುಗ್ಮಿಣಿ ಮನೋಹರಮದನ ಗೋಪಾಲನು ಭಜಿಸುವ ಭಕುತರಹೃದಯದೊಳಗೆ ನಿಂದು ಮುದವನು ಕೊಡುವ2 ಮಧುರೆಯಿಂದಲಿ ಬಂದ ಮಾವನ್ನ ಕೊಂದಕಡೆಗೋಲ ನೇಣ ಕೈಲಿ ಪಿಡಿದ ದ್ವಾರಕಾವಾಸಹಡಗಿನಿಂದಲಿ ಬಂದು ಉಡುಪಿಲಿ ನೆಲೆಸುತಬಿಡದೆ ಪೂಜೆಗೊಂಬ ಒಡೆಯ ಶ್ರೀಕೃಷ್ಣ3
--------------
ವ್ಯಾಸರಾಯರು
ಸುಲಲಿತ ಮಧುಕರ ಕೊಳಲನೂದುವುದನು ಕಲಿಸಿದರಾರೇ ನಳಿನಮುಖೀ ರಾಧೇ ಪ ಬಲಿಸಂಹಾರನು ಲೋಕದ ನಾರಿಯ ರಲಸದೆ ಗಾನವ ಕಲಿಸಿದನೇನೇ ಅ.ಪ ಕರು ತುರುಗಳ ಬಳಿ ಸರಸವನಾಡುತ ಮುರಳಿಯನೂದುವ ಸರಸಿಜನಾಭ ಕರೆಕರೆದು ನಿನ್ನ ಬೆರಳಿಗುಂಗುರವಿಟ್ಟು ಸ್ವರಗಳ ಬೋಧಿಸಿ ನಲಿನಲಿದಿಹನೇನೇ 1 ಬೃಂದಾವನದಲಿ ನಂದಕುಮಾರನ ವಂದಿಸೆ ನಾರದ ಬಂದುಹಾಡಿದನೇ ಅಂದದ ಕಲಿಕೆಯ ತುಂಬುರ ನಿನಗಾ ನಂದದಿ ಗಾನವ ಕಲಿಸಿದನೇನೆ 2 ಅಂಗಜಪಿತನಿಗೆ ಮಂಗಳಗಾನವ ಅಂಗನೆ ಶಾರದೆ ಪಾಡಿದಳೇನೇ ಮಾಂಗಿರಿರಂಗ ಮಾತಂಗವರದನಂತ ರಂಗದರಾಣಿ ನೀ ಕಲಿಯೆಂದನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್