ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ 1 ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ 2 ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ 3 ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ 4 ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ 5 ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ ದಯದಿ ರಾಮರಾಮ6 ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ7 ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ8 ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ9 ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ10 ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ11 ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ 12 ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ 13 ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ 14 ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ 15 ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ 16 ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ 17 ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ 18 ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ 19 ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ20 ಜಾಹ್ನವಿಯಲ್ಲಿ ಜನಾದರ್Àನಿದ್ದಾನೆ ರಾಮರಾಮ ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ21 ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ 22 ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ 23 ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ 24 ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ 25
--------------
ವಿಜಯದಾಸ
ಪುರಹರ ಶಿವ ಪ ಕೃತ್ತಿವಾಸ ದೇವೋತ್ತಮ ಭವಹರ ಅ.ಪ ರಜತಗಿರಿನಿಲಯ ಭಜಕ ಜನಪ್ರಿಯ ಭುಜಗಭೂಷಣ ಪಂಕಜಭವತನಯ 1 ಬೃಂದವಂದ್ಯ ಹೃನ್ಮಂದಿರನಿಲಯ 2 ಗುರುರಾಮವಿಠಲ ಪರನೆಂಬರ್ಥವ ಅರಿಯುವಂತೆ ಮನದಿರವನು ಪಾಲಿಸು 3
--------------
ಗುರುರಾಮವಿಠಲ
ಬಂದು ನಿಲ್ಲೋ ಶ್ರೀಹರೇ-ಬಂದುನಿಲ್ಲೊ ಪ ಇಂದು ಹಿಂದು ನೀನೆಂದಿಗು ತಂದೆ ಗೋ- ವಿಂದ ಅನಿಮಿತ್ತಬಂಧು ಕಣ್ಣಮುಂದೆ ಅ.ಪ ಸ್ವಾಂಶದಿಂದ ಅಭಿವ್ಯಕ್ತಿಯಾದೆ ಪಂ- ಚಾಂಶತೋರಿ ಸರಸ ಜನನ ಮಾಡಿದೆ ಸ್ವಾಂಶನಾಗಿ ಅವತರಿಸಿ ಮೆರೆವ ಸ- ರ್ವಾಂಶದಿಂದಿಹ ತ್ರಿಂಶ ರೂಪನೇ 1 ಸ್ವಗತಭೇದವಿವರ್ಜಿತನೆನಿಸಿ ತ್ರಿಗುಣಮಯದಿ ಬ್ರಹ್ಮಾಂಡ ನಿರ್ಮಿಸಿ ಅಗಣಿತಮಹಿಮಾಧಾರನಾಗಿ ನಿಂದು ಮಿಗೆ ಶೋಭಿಸುವ ವಿರಾಟಮೂರುತಿಯೆ2 ಕಾರಣನೆನಿಸಿದ ಕರ್ಮನಿವೃತ್ತಿಗೆ ಸಾರವಾದ ಜ್ಞಾನಯೋಗ ಮಾರ್ಗವ ನಾರದಾದಿ ಮಹಾಮುನಿಗಳಿಗರುಹಿದ ನರನಾರಾಯಣ ಬದರಿ ಆಶ್ರಯನೇ 3 ಹಂಸಕಪಿಲ ದತ್ತಾತ್ರೇಯ ರೂಪನೆ ಹಂಸರಹಸ್ಯಗಳೆಲ್ಲವ ಪೇಳಿ ಸಂಶಯ ಬಿಡಿಸಿದೆ-ಜೀವಪರಮಾತ್ಮರ ಅಂಶಗಳರುಹಿದ ಹಂಸಮೂರುತಿಯೆ4 ಅಜಪಿತ ನೀ ಗಜರಾಜನ ಸಲಹಿದೆ ಭಜಿಸಿದ ವಾಲಖಿಲ್ಯರ ಕಾಯ್ದೆ ಅಜಹತ್ಯವು ವೃತ್ರವಧೆಯಿಂದ ಕಾಯ್ವ ಬಿ- ಡೌಜನ ಸಲಹಿದ ಗಜರಾಜ ವರದಾ5 ಪುರುಹೂತನ ಅಹಂಕಾರ ಖಂಡಿಸಿ ಕಿರುಬೆರಳಲಿ ಗೋವರ್ಧನಗಿರಿ ಎತ್ತಿ ಪರಿಪಾಲಿಸಿ ಗೋಬೃಂದವನೆಲ್ಲವ ಸುರರಿಂದ ಪೊಗಳಿಸಿಕೊಂಡೆ ಗೋವಿಂದ6 ಬುಧರರಿಯುಲು ಆ ವೇದ ವಿಭಾಗಿಸೆ ಉದಯಿಸಿ ಮುದದಿಂದ ಬದರಿಯ ಸದನದಿ ಬೋಧಿಸುತ್ತಲಿಹ ಬಾದರಾಯಣನೇ7 ಅಖಿಳಾಂಡಕೋಟಿಬ್ರಹ್ಮಾಂಡನಾಯಕ ವಿಕುಂಠಳೆಂಬೊ ಉದರದಿ ಜನಿಸಿ ಲಕುಮಿರೂಪಿಯಾದ ಸುಂದರಿಯ ಕೂಡ ಭೂ- ವೈಕುಂಠ ನಿರ್ಮಿಸಿದ ವೈಕುಂಠಮೂರುತಿಯೆ 8 ಸತ್ಯವ್ರತನೆಂಬೊ ಮನುವಿನುದ್ಧರಿಸಿ ಉತ್ತಮ ಔಷಧಿಗಳೆಲ್ಲವ ಸಲಹಿದೆ ದೈತ್ಯನಾದ ಉನ್ಮತ್ತನ ಕೊಂದು ಶ್ರುತಿಯ ತಂದಿತ್ತ ಮತ್ಸ್ಯಮೂರುತಿಯೆ 9 ಸುರಭಿನೆವನದಿ ಶರಧಿಮಥಿಸೆ ತಾ ಭರದಿ ಬೆನ್ನೊಳು ಧರಿಸಿಹೆ ಮಂದರ ಗಿರಿಧರನೆನಿಸಿದೆ ಕಮಠರೂಪನೆ 10 ಪ್ರಳಯ ಜಲಧಿಯೊಳು ಇಳೆಯನು ಕದ್ದಾ ಖಳಹಿರಣ್ಯನಾ ಶಿರವ ಚೆಂಡಾಡಿ ಜಲಧಿಯ ಶೋಧಿಸಿ ಇಳೆಯನು ತಂದು ಜಲಜಸಂಭವಗಿತ್ತ ಕ್ರೋಢರೂಪನೆ 11 ದುರುಳತನದಿ ತನ್ನ ತರಳನ ಬಾಧಿಪ ಹಿರಣ್ಯಕಶಿಪುವಿನ ಉದರವ ಬಗೆದು ಶರಣನಿಗಭಯವ ಕರುಣಿಸಿ ತೋರಿದ ಸರ್ವವ್ಯಾಪ್ತನೆಂದರುಹಿದ ನರಹರಿಯೇ12 ಬಲಿಯಿಂದಪಹೃತವಾದ ಸಾಮ್ರಾಜ್ಯವ ಸುಲಭದಿಂದಲಿ ಪುರಂದರಗಿತ್ತು ಸಲಹಿದೆ ಒಲಿದು ಬಲಿಯ ಭಕ್ತಿಗೆ ನೀ ಬಾ- ಗಿಲ ಕಾಯ್ದ ವಟು ವಾಮನನೆ 13 ದುರುಳತನದಿ ಆ ಹೈಹಯರೆಂಬ ನರಪರದುರ್ಮದ ಮರ್ದಿಸಲೋಸುಗ ನೃಪರ ಶಿರವನೆಲ್ಲ ತರಿದು ನಿಗ್ರಹಿಸಿದ ಭಾರ್ಗವ ಮೂರ್ತೇ 14 ಶರಧಿ ಬಂಧಿಸಿ ಸೇತುಕಟ್ಟಿ ಕಪಿ- ವೀರರೊಡನೆ ಆ ರಾವಣನಡಗಿಸಿ ಭೂ ಭಾರವನಿಳುಹಿಸಿ ಭೂಮಿಜೆಯನು ತಂದ ಅ- ಸುರ ಮರ್ದನ ದಾಶರಥಿ ರಾಘವ 15 ವಸುಮತಿಭಾರವನಿಳುಹಲೋಸುಗ ವಸುದೇವಸುತ ಶ್ರೀಕೃಷ್ಣನೆನುತಲಿ ಶಿಶುಪಾಲಾದಿಗಳಾಂತಕನೆನಿಸಿದ ಶಶಿಮುಖಿರುಕ್ಮಿಣಿ ಸಹಿತ ಶ್ರೀಕೃಷ್ಣ 16 ವೇದ ಕರ್ಮಗಳಿಗನರ್ಹರೆಲ್ಲರು ಸಾದರದಿಂದಲಿ ಅಧಮರೆಸಗುತಿರೆ ವೇದವಿರುದ್ದವಾದಗಳಿಂದಲೇ ಮೋಹವ ತೋರಿದೆ ಬುದ್ಧಸ್ವರೂಪನೆ17 ದುರುಳತನದಿ ಇಳೆಯಾಣ್ಮರುಗಳು ಕ್ರೂರತನದಿ ಪರಪೀಡಕರಾಗಿರೆ ಪರಿಹರಿಸಲು ಭೂಭಾರಕ್ಕಾಗಿ ಅವ- ತರಿಸಿ ಮೆರೆಯುವ ಕಲ್ಕಿರೂಪನೆ 18 ಏಕರೂಪ ಅನೇಕರೂಪನೆ ಏಕಮೇವ ನೀ ಪ್ರಕಟ ಮಾಡುವೆ ಪಿನಾಕಿ ಪ್ರಮುಖರು ಏಕದೇಶದಿ ಸಾಕಲ್ಯವ ತಿಳಿಯರೊ 19 ದೋಷದೂರ ಶೇಷಾಚಲವಾಸ ಪೋಷಿಸೊ ನಿನ್ನಯ ದಾಸಜನರ ಸರ್ವ ದೋಷಕಳೆದು ಮನೋಕಾಶದಲಿ ನಿಲ್ಲೊ ಶೇಷಗಿರೀಶ ಶ್ರೀ ವೆಂಕಟೇಶನೆ 20
--------------
ಉರಗಾದ್ರಿವಾಸವಿಠಲದಾಸರು
ಯೋಗಿ ಭಾವ್ಯ ಪದ್ಮಮುಖದಿವ್ಯ ಲಕ್ಷಣಾಂಚಿತ ಪದಯುಗಳ 1ಚಂದ್ರ ಕುಲಾವತಂಸ ದ'ುತ ಕಂಸಪರಮಹಂಸ ಚಿದಾವರ್ಣ'ತೇಂದ್ರಮುಖ್ಯ 'ಹಗೇಂದ್ರ ವಾಹನೋಪೇಂದ್ರಕಾಳಿಯೋರಗ ಮದಹರಣ 2ಕಂಜದಳನಿಭಾಕ್ಷ ಸುಜನರಕ್ಷದನುಜಶಿಕ್ಷಾ ಪ್ರ'ೀಣ ಧನಂಜಯಾರ್ತಿಹರಮಂಜುಭಾಷಣ ನಿರಂಜನಾಗಣಿತನಿರುಪಮಲೀಲಾ 3ನಂದಕ ಪ್ರಹರಣ ಭೂರಿಕರಣಾವಾಲ್ಯಶರಣಾ ಗತಾವನನಂದನಂದನ ಸನಂದನಾದಿ ಮುನಿ ಬೃಂದವಂದ್ಯ ಸಕಲಜನ ಶರಣ್ಯಾ 4ದಂತಿರಾಜವರದಾ ರಾತ್ರಿ ಚರದಾವಾಗ್ನಿ ಶರದವ್ರಜಶ್ರೀಕಾಂತ ಮೌನಿಘನ ಚಿಂತನೀಯವೇದಾಂತವೇದ್ಯಕೋಸಲಪುರ ನಿಲಯಾ 5
--------------
ತಿಮ್ಮಪ್ಪದಾಸರು
ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ ಗೋವಿಂದ ನಂದ ಮೂರುತಿ ಹರೆ ಪ ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ ದೇವಕೀ ವಸುದೇವ ಭಾವನಾ ಗೋಚರ 1 ಹಾರಕುಂಡಲ ಮನ ಮಾಲಾವಿರಾಜಿತ ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ2 ಧೇನುನಗರ ಪರಿಪಾಲಕ ವೇಂಕಟೇಶ ಸಾನುರಾಗದಿ ಪೊರೆ ಗಾನವಿನೋದ ಹರೆ 3
--------------
ಬೇಟೆರಾಯ ದೀಕ್ಷಿತರು
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು