ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗ- ಳ್ವುಡಿಯ ತುಂಬಿರೆ ನಮ್ಮ ಪ ಜಂಬುನೇರಲ ಗೊನೆ ಜಾಂಬೂಫಲಗಳು ನಿಂಬೆ ದಾಳಿಂಬ್ರ ಔದುಂಬ್ರ ಫಲಗಳು 1 ಉತ್ತತ್ತಿ ದ್ರಾಕ್ಷಿ ಕಿತ್ತಳೆ ಸೀತಾಫಲವು ಅಕ್ಕಿ ಅಂಜೂರ ಉತ್ತತ್ತಿ ಫಲಗಳು2 ಶ್ರೇಷ್ಠ ಭೀಮೇಶ ಕೃಷ್ಣನ ಪಟ್ಟದರಸಿ ಗ್ಹಚ್ಚಿ ಕುಂಕುಮ ವೀಳ್ಯ ಕೊಟ್ಟು ರುಕ್ಮಿಣಿಗೆ 3
--------------
ಹರಪನಹಳ್ಳಿಭೀಮವ್ವ
ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ