ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಹೇಳಿದರೇನು ಹೀನ ಮನಕ | ತಾನು ಎಚ್ಚರ ಹಿಡಿಯ ದನಕಾ ಪ ಬೂದಿಯೊಳಗ ಹೋಮ ಮಾಡಿದಂತೆ | ಬೋಧಾನುಗೃಹ ಕಳವದು ಮರೆತಕೆ 1 ಹರಿ ಕೀರ್ತನೆ ಇರಲಿಲ್ಲಾ | ಬರಡು ಮಾತಿಗೆ ಸುಖ ಪಡುದಲ್ಲಾ 2 ಒಮ್ಮೆಯಾದರೂ ಹರಿ ಹರಿಯಂದು | ಝಮ್ಮೆನೆವೆ ಪಶ್ಚಾತಾಪ ಬಾರದೆಂದು 3 ಗಾಳಿಯಂತೆ ಓಡಾಡುವದು ನೋಡಿ | ಕಾಲೂರಿ ನಿಲ್ಲದು ಮತಿಗೇಡಿ 4 ತಂದೆ ಮಹಿಪತಿ ದಯವಾಗದನಕ | ಒಂದು ಹಿಡಿಯದು ಸ್ವಹಿತ ವಿವೇಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಮಲ ಲೋಚನನೆ ಎನ್ನತಡಿಯ ಸೇರಿಸೊ ತರಣಿಶತಕೋಟಿ ತೇಜ ಪ ಕಾಕು ಇಂದ್ರಿಯಗಳೆಂಬ ಕಟುಕರಿಗೆ ನಾ ಸಿಲುಕಿಮೇಕೆಯಂದದಿ ಬಾಯಿ ಬಿಡುತಿಪ್ಪೆನುಸಾಕಾರ ರೂಪ ಸರ್ವೋತ್ತಮನೆ ನೀ ಕರುಣಾಕರನೆಂಬ ಪೆಂಪುಂಟಾದಡೀಗೆನ್ನ 1 ಕೇಸರಿ ಎಂಬಛಲ ಬಿರುದು ತಾಳ್ದ ದೇವರ ದೇವ ನೀನೆನ್ನ 2 ಹಾದಿಗಾಣದೆ ತೊಲಗಿ ಪೋಪೆನೆಂದರೆ ಭಾವಬೂದಿಯೊಳಗಾಡಿ ಮುಳುಗಾಡುತಿಹೆನೊಭೂಧರನ ತಾಳ್ದ ಕೂರ್ಮಾವತಾರನೆ ಬಾಡದಾದಿಕೇಶವರಾಯ ಬೆನ್ನಲೆತ್ತಿಕೊಂಡು 3
--------------
ಕನಕದಾಸ
ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ1 ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ 2 ಜ್ಞಾನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ 3 ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು ಪಾತ್ರಾಪಾತ್ರನರಿದು ನಡೆದರೇನು ಗಾತ್ರವನು ಬಳಲಸಿ ನೇಮ ಮಾಡಿದರೇನು ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ 4 ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು ಗಡಿಗಿ ಅಲ್ಲದೆ ಅದು ಪರುಶಾಗೋದೆ ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ 5
--------------
ವಿಜಯದಾಸ
ನಿನ್ನ ವಶದಲಿ ಇದ್ದು ಇದ್ದು ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ ಚಿತ್ರವಾದ ಕರಿಯ ಶೃಂಗರಿಸಿ ಮೇಲೆ ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ 1 ಕಾಲಕಾಲಕೆ ಸುಧಿಯ ಸವಿದು ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ ತಾಳವೃಕ್ಷವನೇರಿ ತಲೆಕೆಳಗಾಗಿ ತಾ ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ 2 ವೇಣಿ ಮಾಧವರಾಯಾ ನಿನ್ನ ಚರಣಾಂಬುಜ ಕಾಣುವ ಪ್ರಕಾಶ ಉದಾಸಸಿ ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ ಹೀನನಂತೆಯಾದೆ ವಿಜಯವಿಠ್ಠಲರೇಯಾ 3
--------------
ವಿಜಯದಾಸ