ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸಕೂಟ ವರ್ಣನೆ ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ ಪ. ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು ದಾಸಜನರ ಸಮೂಹದೊಳಗಾವಾಸವಾಡುತ ನಲಿವರು ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು 1 ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ 2 ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ ಅಂದಿನಂದಿನ ದೋಷದುಷ್ಕøತವೊಂದು ನಿಲ್ಲದು ಕಡೆಯಲಿ ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡೆ ತಿರುಪತಿ ವೆಂಕಟೇಶನಕಾರಣಾತ್ಮಕಸಾರ್ವಭೌಮನಕಾಮಿತಾರ್ಥವನೀವ ದೇವನ ಕರುಣನಿಧಿಯೆಂದೆನಿಸಿ ಮೆರೆವನ ಪಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನುನೋಟಕ್ಕಚ್ಚರಿಯೆನಿಪ ನಗೆಮೊಗನೊಸಲೊಳಗೆ ತಿರುಮಣಿಯ ಕಂಡೆನುಸಾಟಿಯಿಲ್ಲದ ಶಂಖ-ಚಕ್ರವ ಚತುರ ಹಸ್ತದಲೀಗ ಕಂಡೆನುಬೂಟಕದ ಮಾತಲ್ಲ ಕೇಳಿ-ಭೂರಿದೈವದ ಗಂಡನಂಘ್ರಿಯ 1ತಪ್ಪುಗಾಣಿಕೆ ಕಪ್ಪುಗಳನು ಸಪ್ತಲೋಕಗಳಿಂದ ತರಿಸುವಉಪ್ಪು ವೋಗರವನ್ನು ಮಾರಿಸಿಉಚಿತದಿಂದಲಿ ಹಣವ ಗಳಿಸುವ ||ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ ಒಪ್ಪದಿಂದಕ್ರಯ ಮಾಡಿ ಕೊಡಿಸುವಸರ್ಪಶಯನನ ಸಾರ್ವಭೌಮನ ಅಪ್ಪವೆಂಕಟರಮಣನಂಘ್ರಿಯ 2ಉರದಿ ಶ್ರೀದೇವಿ ಇರಲು ಕಂಡೆನುಉನ್ನತದ ಕೌಸ್ತುಭವ ಕಂಡೆನುಗರುಡಕಿನ್ನರನಾರದಾದಿಗಳಿರಲು ಎಡಬಲದಲ್ಲಿ ಕಂಡೆನು ||ತರತರದಿ ಭಕ್ತರಿಗೆ ವರಗಳ ಕರೆದುಕೊಡುವುದ ನಾನು ಕಂಡೆನುಶರಧಿಶಯನನ ಶೇಷಗಿರಿವರಸಿರಿಪುರಂದರವಿಠಲನಂಘ್ರಿಯ3
--------------
ಪುರಂದರದಾಸರು