ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಎನ್ನನು ದೇವ ಕಡೆ ಹಾಯಿಸೊ ಕಡಲೊಡೆಯ ಪ ಕಾಯಯ್ಯ ನೀ ಎನ್ನ ಕಮಲದಳಾಕ್ಷ ಅ ಒಂದು ಕಾಯಲಿ ನಾನು ಒಲಿದು ದಂಡಿಗೆಯಾದೆಎರಡು ಕಾಯಲಿ ನಾನು ವೀಣೆಯಾದೆಮೂರು ಕಾಯಲಿ ನಾನು ಮುದ್ದು ಕಿನ್ನರಿಯಾದೆನೀಟಾದ ಕಾಯಲಿ ನಾನು ನಾಗಸ್ವರವಾದೆ 1 ದಪ್ಪ ದಪ್ಪ ಕಾಯಲಿ ದರವೇಶಿಗಳಿಗಾದೆಮಿಕ್ಕ ಕಾಯಲಿ ನಾನು ಸನ್ನೇಸಿಗಳಿಗಾದೆಕೈತಪ್ಪಿ ಬಿದ್ದರೆ ಕದಿರಿಗೆ ಬಿಲ್ಲಾದೆಮತ್ತೆ ದೇವರ ಗುಡಿಗೆ ದೀಪವೇ ನಾನಾದೆ 2 ಚಿಕ್ಕಂದು ಮೊದಲು ನಾ ಸಾಸೂವೆ ಕಾಯಾದೆಚಿಕ್ಕ ಚಿನ್ಮಯಗೆ ಬುರುಡೆಯಾದೆಉಕ್ಕುವಾ ಹೊಳೆಯಲ್ಲಿ ತೆಪ್ಪವೇ ನಾನಾದೆಚೊಕ್ಕ ಕನಕಪ್ಪನ ಹಿಂದೆ ನಾ ತಿರುಪತಿಗೆ ಬಂದೆ3
--------------
ಕನಕದಾಸ
ಕುಲವಂತನೇ ನೀನು ಎಲೋ ಪರಮಾನಂದ ಕುಲಹೀನನೇ ನಾನು ಪೇಳೆಲವೊ ಸ್ವಾಮಿ ಪ ಹೊಲೆಯ ಪೆದ್ದಯ್ಯಗೆ ಒಲಿದವನ ಆಳಾದಿ ಕುಲದಿ ಮಾದಿಗರ್ಹರಳಯ್ಯನ ಮನೆಲುಂಡಿ ಚೆಲುವ ಕೂಸಿನ ಕೊರತೆ ಸಲಿಸಿದಿ ಬಲುಹಿತದಿ ಮಲಿನಸೀರೆಯ ನಿನ್ನ ತಲೆಗೆ ಸುತ್ತಿಕೊಂಡಿ 1 ಡೊಂಬಿತಿಯ ಗುಡಿಸಿಲಲಿ ಸಂಭ್ರಮದಿ ಮಲಗಿದಿ ಶಂಭೋ ಕುಣಿದೆಲೋ ಕುಂಬಾರಗೊಲಿದು ಸಾಂಬ ನೀ ನಡ ಪೊತ್ತು ಇಂಬು ಸುಡುಗಾಡು ನಿನಗಂಬುಧಿಧರನೆ 2 ಪುಲಿಚರ್ಮ ಹಾಸಿಕೊಂಡ್ಹೊಲಸು ಚರ್ಮುಟ್ಟಿರುವಿ ತಲೆ ಬುರುಡೆ ಕೊರಲಿಗೆ ಮಾಲೆ ಧರಿಸಿರುವಿ ಎಲೊ ದೇವ ಇನಿತಿರ್ದು ಕುಲವನೆಣಿಸುವಿ ನಿನ್ನ ಒಲವು ಬೇಡುವರಿಗೆ ಶ್ರೀರಾಮಸಖನೆ 3
--------------
ರಾಮದಾಸರು
ಗುಡಿಗುಡಿಯನು ಸೇದಿ ನೋಡೋ ನಿನ್ನ ಒಡಲೋಳಗಿರುವ ರೋಗಗಳನೀಗಾಡೋ ಪ ಬುರುಡೆ ಎಂಬುದು ಈ ಶರೀರಪಡೆ ದಿರುವ ಸುಕೃತವೆ ಕೊಳವೆಯಾಕಾರಾ ಹರಿನಾರಾಯಣನೆಂಬ ನೀರಾ ಇದ ನರಿತು ನೀ ಸೇದಿಕೊ ಬಲು ಮೋಜುಗಾರಾ ಗುಡುಗುಡಿ1 ಮನವೆಂಬ ಸಂಚಿಯ ಬಚ್ಚಿ ದಿನ ದಿನದಿ ಪತಾಕವೆಂಬ ಭಂಗಿಯ ಕೊಚ್ಚಿ ತನುವಿನ ಚಿಲುಮೆಯೊಳ್ಬೆಚ್ಚಿ ಗುರು ಧ್ಯಾನದ ಕೆಂಡದುರಿಯ ತಂದ್ಹಚ್ಚಿ ಗುಡುಗುಡಿ2 ಸದ್ಯದಿ ಅಮಲೇರುವುದು ದಾರ್ರಿದ್ರ್ಯ ದುಃಖವ ಸುಟ್ಟು ಹೊಗೆ ಏಳುವುದು ತೋರುವುದು ಗುರು ಬುದ್ಧಿಗೆ ಮಾರ್ಗ ಸಿದ್ಧ ವಿಮಲಾನಂದ ಪದಕೆ ಕೊಡುವುದು ಗುಡುಗುಡಿ 3
--------------
ಭಟಕಳ ಅಪ್ಪಯ್ಯ
ಬೇಡವೋ ಬ್ರಾಹ್ಮಣ ದ್ರೋಹ ಬೇಡವೋ ಪ ಮಾಡಬೇಡವೋ ನಿನಗೆ | ಕೇಡು ತಪ್ಪದು ಕೊನೆಗೆನಾಡೊಳಗಪಕೀರ್ತಿ | ಗೀಡಾಗಿ ನೀ ಕೆಡ ಅ.ಪ. ಭಾರ ನೀನು - ಅಂಥಅತ್ಯಂತವಲ್ಲವಿದೇನು - ನಿನ್ನ ||ಚಿತ್ತ ದೃಢ ಮಾಡು ಉತ್ತಮ ವಿಪ್ರರವೃತ್ತಿಯ ಸೆಳದು ಉನ್ಮತ್ತನಾಗಿ ಕೆಡ 1 ಸೂಸುವ ನದಿಯೊಳು ಬಿದ್ದು - ಇನ್ನುಈಸಲಾರದೆ ಮುಳುಗೆದ್ದು - ಅಂಜಿ ||ಈಸು ಬುರುಡೆ ಬಿಟ್ಟು ಬೀಸೋ ಕಲ್ಲನೆ ಕಟ್ಟಿಈಸುವ ತೆರನಂತೆ ಭೂಸುರ ದ್ರವ್ಯವು 2 ನೃಗರಾಯನೆಂಬ ಭೂಪತಿಯು - ವಿಪ್ರ-ರಿಗೆ ಗೋದಾನವನಿತ್ತ ಬಗೆಯ ಕೇಳಿ ||ಅಗಲಿ ತಮ್ಮೊಳು ತಾವೆ ಜಗಳ ಪುಟ್ಟಿ ಆ ನೃ-ಪಗೆ ತೊಣ್ಣೆಯಾಗೆಂದ್ಹಗರಣವನೆ ಕೇಳು 3 ರಾವಣನೆಂಬುವ ದುಷ್ಟ - ಅವ-ದೇವತೆಗಳ ಸೆರೆಯಿಟ್ಟ ||ದೇವನರಸಿ ಸೀತಾದೇವಿಯ ನೆಪದಿಂದರಾವಣನ ಕೊಂದು ದೇವತೆಗಳ ಕಾಯ್ದನೊ 4 ಇನ್ನೆಷ್ಟು ಹೇಳಲೊ ಸಾಕ್ಷಿ - ಬ್ರಾಹ್ಮ -ರನ್ನವ ತೆಗೆದರೆ ಶಿಕ್ಷಿ ಮೋ-ಹನ್ನ ವಿಠ್ಠಲರಾಯ ತನ್ನಯ ಭಜಕರಬೆನ್ನ ಬಿಡದಲೆ ಕಾಯ್ವ ಇನ್ನಾದರು ಕೆಡ 5
--------------
ಮೋಹನದಾಸರು
ಸುಳ್ಳು ಸುಳ್ಳು ಸುಳ್ಳು ಪೊಳ್ಳು ಜಗ ತಿಳಿಯಲೆ ಮಳ್ಳು ಮರುಳು ಪ ಸುಳ್ಳು ಬಂಗಾಲಿ ಕಂಡು ಮಳ್ಳಾಗ ಬೇಡೆಲೆ ಲೊಳ್ಳಟ್ಟಿಯಿದೆಲ್ಲ ಅ.ಪ ಕಾಜಿನ ಬುರುಡೆಯೊಳ್ ತೇಜಿಪದೀಪಕ್ಕೆ ಸೋಜಿಗಗಂಡು ಮತಿಮಾಜುವುದರಲವ ಮೋಜಿನ ಆಟಕ್ಕೆ 1 ನಾಶವಾಗುವುದೊಂದೇ ತಾಸು ತೋರೆಲ್ಲನು ಈಷಣ ಸಂಸಾರದಾಸೆಗೆ ಸಿಗದಿರು ಮೋಸವಿದೆಲ್ಲವು 2 ಮೋಹದಾಕಾರಕ್ಕೆ ಮೋಹಿಸಿ ಕೆಡದೆ ನೀ ಮೋಹಿಸಿ ಸ್ಥಿರಸುಖದೇಹವ ನೀಡೆಲೊ ಮಹ ಶ್ರೀರಾಮನೆ 3
--------------
ರಾಮದಾಸರು