ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಂಟೇನಿಲ್ಲ ಗುರುಕೃಪೆಯಿಂದ ತನುಮನಿಟ್ಟದೇ ಪಡಕೊಂಬುದು ಚಂದ ಧ್ರುವ ಸುಖ ಸುರುತದೆ ನೋಡಿ ಬಲುಬ್ರಹ್ಮಾನಂದ ಪ್ರಕಟಸಲಿಕ್ಕೆ ಬಾರದು ಮುಖದಿಂದ ಸಕಲವೆಲ್ಲಕೆ ಮೇಲು ತಿಳಿಯಬೇಕಿದೊಂದೆ ಶುಕಾದಿ ಮುನಿಗಳದಾರಿದರಿಂದೆ 1 ಸಿದ್ಧ ಬುದ್ಧ್ದರಿಗೆ ಸಾದ್ಯವದೆ ಸಿದ್ಧ ನೋಡಿ ಬುದ್ಧಿವಂತರಿಗೆ ಒಲಿದುಬಾಹುದು ಕೈಗೂಡಿ ಸನ್ಮಾರ್ಗ ಸುಪಥವಿದೆ ಸದ್ಗುರು ಸೇವೆಮಾಡಿ ಸದ್ಭ್ಬಾವದಿಂದಲಿ ಸ್ವಸುಖವೆ ಸೂರ್ಯಾಡಿ 2 ಭಾಸ್ಕರ ಗುರುದಯದವಗಿನ್ನೇನು ಭಾಸುತೀಹ್ಯದಾವಗಿನ್ನು ನಿಜಕಾಮಧೇನು ವಿಶ್ವದೊಳಗವನೊಬ್ಬ ಸಿದ್ಧತಾನು ದಾಸಮಹಿಪತಿಗಿದೇ ಅಭಿನವಧೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭುವನದೊಳಿವನೆ ಶೂರ ಪ ಭವಬಂಧಗಳ ನಿನ್ನ | ಕುವರನೆ ಬಿಡಿಸುವ ಅ.ಪ ಮಕ್ಕಳ ಕೂಡಿಕೊಂಡು | ನಮ್ಮನೆಗಿವ-| ನೊಕ್ಕಲಿಕ್ಕುವನು ಬಂದು || ಪಕ್ಕನೆ ಓಡುವ | ಸಿಕ್ಕನು ಯೆಮಗಿವ 1 ಒರಗಿದ ಮಕ್ಕಳ | ಕರೆದು ಡಬ್ಬಿಸುವನು 2 ಹಿಂಡಿದ ಪಾಲ್ಮೊಸರು || ಚೆಂಡಾಟದೊಳು ನೆಲ-| ನುಂಡುಂಡು ಕೆಸರಾಯ್ತು 3 ನಿಲುತ ಪಾತ್ರವ ಕೊಂಡು | ಮೆಲುವ ನಾಟಕಧಾರಿ 4 ಬೆಳಗನ್ನು ಮೇಳವಿಸೆ || ಕಳೆದು ತರಿಸುವ ನಾವಿ | ನ್ನುಳಿ (ವು)ಪಾಯವ ಕಾಣೆ 5 ದೊರೆಯದಿದ್ದರೆ ಬೈವನು | ಮನೆಗೆ ಕಿಚ್ಚ-| ನ್ನಿರಿಸುವೆನೆನ್ನುವನು || ವೊರಳೊಳು ವಿಷ್ಠಿಸಿ | ಮರೆಯೊಳಡಗುವ6 ನಿಲದೀಗ ತರಿಸಲ್ಲ(ದೆ) || ಸುಲಿಗೆÉಗಾರಗೆ ತಕ್ಕ | ಬಲುಮೆಯೊಳ್ ಬುದ್ಧ್ದಿಯ-| ನೊಲಿದು ಪೇಳುತಲೆಮ್ಮ | ಕುಲವನುದ್ಧರಿಸವ್ವ 7 ಎಂದು ನಾನಾ ತೆರದಿ | ನಾರಿಯರು ಗೋ-| ವಿಂದನನತಿ ಮುದದಿ || ಗೋಪಿ ಪರಿ ಚಾಡಿ8 ತಕ್ಕ ಪದ್ಧತಿ ಧಾತ್ರಿಗೆ || ಬೆಕ್ಕಸಗೊಳದಿರಿ ಅಕ್ಕು ಸದಾನಂದ 9
--------------
ಸದಾನಂದರು
ಬಂದೆನೇಳೆ ಗೋವಿಂದ ನಾ ಇಂದುಮುಖಿ ನಿದ್ರೆ ಬಿಟ್ಟುಬಂದು ನೀ ಬಾಗಿಲ ತೆಗೆಯೆ ಗೋವಿಂದ ನೀ ಗೋವೃಂದವ ಕಾಯಲು ಹೋಗಯ್ಯ ಪ.ಸೋಮಕ ಖಳನ ಕೊಂದು ನೇಮದಿ ವೇದವ ತಂದಶ್ರೀ ಮತ್ಸ್ಯಾವತಾರ ಬಂದೆನೆ ಮತ್ಸ್ಸ್ಯನಾದರೆಆ ಮಹಾಂಬುಧಿಗೆ ಹೋಗಯ್ಯ 1ಸಿಂಧುಮಥÀನ ಕಾಲಕೆ ವೃಂದಾರಕರಿಗÉೂಲಿದಸುಂದರ ಕೂರ್ಮನು ಬಂದೆನೆ ಕೂರ್ಮನಾದರೆಮಂದರಹೊರಲು ಹೋಗಯ್ಯ2ಪ್ರಳಯಾಂಬುಗಿಳಿದೊಬ್ಬನ ಸುಲಭದಿ ಕೋರೇಲಿ ಸೀಳಿದಚೆಲುವ ವರಾಹನು ಬಂದೆನೆ ವರಾಹನಾದರೆಇಳೆಯ ಕೂಡಾಡ ಹೋಗಯ್ಯ 3ಸೊಕ್ಕಿ ಕಂಬವ ಗುದ್ದ್ದಿದ ರಕ್ಕಸನಂತರ ಮಾಲೆಯನಿಕ್ಕಿದ ನರಹರಿ ಬಂದೆನೆ ನರಹರಿಯಾದರೆಚಿಕ್ಕವನೊಳಾಡ ಹೋಗಯ್ಯ 4ಹೋಮವ ಮಾಡಿ ಮೀರಿದ ಭೂಮಿಪನುಕ್ಕ ಮುರಿದನೇಮದ ವಾಮನ ಬಂದೆನೆ ವಾಮನನಾದರೆನೇಮ ನಿಷ್ಠೆಗೆ ನೀ ಹೋಗಯ್ಯ 5ಭೂಭಾರವನಿಳುಹಿ ದ್ವಿಜರ್ಗೆ ಭಾಗ್ಯವ ಕೊಟ್ಟ ಶೌರ್ಯಶೋಭಿತಭಾರ್ಗವಬಂದೆನೆ ಭಾರ್ಗವನಾದರೆಆ ಬಾಲೇರಂಜಿಸ ಹೋಗಯ್ಯ 6ಸೀತೆಗಾಗಿ ರಾವಣನ್ನ ಘಾತಿಸಿದೆ ಕೇಳೆವಾತಜಾತ ವಂದ್ಯ ರಾಮ ಬಂದೆನೆ ರಾಮನಾದರೆ ಸರಯೂ ತೀರದಲ್ಲಿರ ಹೋಗಯ್ಯ 7ಸೋಳಸಾಸಿರ ಗೋಪೇರನಾಳುವ ಪ್ರೌಢ ಕಾಣೆ ಗೋಪಾಲ ಚೂಡಾಮಣಿ ಬಂದೆನೆ ಗೋಪಾಲನಾದರೆ ಗೋಪಾಲೇರೊಡನಾಡ ಹೋಗಯ್ಯ 8ದೃಢದಲ್ಲಿ ತಪವಿದ್ದ ಮಡದೇರ ಮನಗೆದ್ದಕಡುಮುದ್ದು ಬುದ್ಧ್ದ ಬಂದೇನೆ ಬುದ್ಧನಾದರೆ ಮಿಥ್ಯದಸಡಗರದಲ್ಲಿರ ಹೋಗಯ್ಯ 9ಪದ್ಮಗಂಧಿ ನಿನ್ನ ರತಿಗೊದಗಿದೆ ಬಿಂಕವಿನ್ನ್ಯಾಕೆಕುದುರೆಯೇರಿ ಕಲ್ಕಿ ಬಂದೆನೆ ಕಲ್ಕಿಯಾದರೆಕದನಕೆ ಜಾಣ ಹೋಗಯ್ಯ 10ವಲ್ಲಭನ ನುಡಿಕೇಳಿ ನಲ್ಲೆ ಸತ್ಯಭಾಮೆಪಾದಪಲ್ಲವಕೆರಗಿ ನಿಂತಳು ಪ್ರಸನ್ವೆಂಕಟಚೆಲುವ ನೀನೆಂದರಿಯೆನೆಂದಳು 11
--------------
ಪ್ರಸನ್ನವೆಂಕಟದಾಸರು