ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದು ನಿರಾಲಂಬ ಅದು ನಿರಾಲಂಬಅದು ನಿರಾಲಂಬ ಕೇಳದು ನಿರಾಲಂಬ ಪ ತನು ಹಂಗು ಇಲ್ಲದೆ ಮನ ಹಂಗು ಇಲ್ಲದೆತನಗೆ ತಾನಿಹುದದು ನಿರಾಲಂಬ 1 ಬುದ್ಧೀಂದ್ರಿಯಕೆ ಅತ್ತ ಅಹಂಕಾರಕೆ ಅತ್ತಸುದ್ದಿಲ್ಲದಹುದದು ನಿರಾಲಂಬ 2 ಇಂದ್ರಿಯಕೆ ನಿಲುಕದೆ ಇಂದ್ರಿಯಕೆ ಸುಖಿಸದೆಇಂದ್ರಿಯಗಳರಿಯದುದು ನಿರಾಲಂಬ3 ಅರಿವುದು ಕಾಣದೆ ಮರೆವುದುತೋರದೆ ಅದು ಚಿದಾನಂದ ಅದು ನಿರಾಲಂಬ 4 ಬಹಿರಂತಲ್ಲದೆ ಬೇರೆಂಬುದಿಲ್ಲದೆಮಹಾ ಬೆಳುದಿಂಗಳದೆ ನಿರಾಲಂಬ 5
--------------
ಚಿದಾನಂದ ಅವಧೂತರು
ಅನುಭಾವದ ನಿಗೂಢ ಮುಂಡಿಗೆಗಳು ಎರಡು ಸಾವಿರದ ಜಿಹ್ವೆಯುರಗ ಪೊಗಳಿದ ಹರಿಯೆ ಪ ಪರಂಜ್ಯೋತಿ ಪರಬ್ರಹ್ಮ ಪರಮಪುರುಷ ಓಂ ಎಂದುಅ ಹುಟ್ಟು ಬಣ್ಣ ಒಂದರೊಳಗೆ ಕಟ್ಟು ಬಣ್ಣ ಒಂದು ಮಾಡಿಕಟ್ಟಿ ಕುಟ್ಟಿ ಕಾಸಿ ಕರಗಿ ಮೂರು ಬಣ್ಣವಮುಟ್ಟಿ ಮಾಡಿ ನಾಲ್ಕು ಬಣ್ಣ ಒಪ್ಪವಿಕ್ಕಿ ಅದರ ಮೇಲೆಗಟ್ಟಿಯಾಗಿ ನೆಲೆಗೆ ನಿಂತವೈದು ಬಣ್ಣವುಸೃಷ್ಟಿಯಾರೇಳು ಬಣ್ಣ ಎಂಟು ಒಂಬತ್ತರೊಳಗೆ ನೆಟ್ಟನೆ ಹತ್ತು ಹನ್ನೊಂದು ಹನ್ನೆರಡು ತೋರುವಘಟ್ಟಿ ಹದಿಮೂರು ಹದಿನಾಲ್ಕು ಹದಿನೈದರಿಂದಕಟ್ಟಕಡೆಗೆ ನಿಂದ ಹದಿನಾರು ಬಣ್ಣ ಓಂ ಎಂದು 1 ಭದ್ರಕಂಬ ಒಂದರೊಳಗೆ ಉದ್ದವಾದ ಕೊನೆಯ ಮೇಲೆಸಿದ್ಧಿಯಾದ ಚಿಗುರು ಹೂವು ಕಾಯಿ ಹಣ್ಣನುಮೆದ್ದು ಹೋದ ಪಕ್ಷಿ ಬಂದು ಹದ್ದು ಹಿಡಿದು ಉದ್ದಕೆತ್ತಿಬುದ್ಧೀ ಹೀನನಾಗಿ ಬೆಳೆದು ಧರೆಗೆ ಬಿದ್ದುದಕದ್ದು ಮತ್ತೊಬ್ದ ತರುತಿದ್ದ ದಾರಿಯನ್ನು ಕಟ್ಟಿಒದ್ದು ಹಿಡಿದು ಗುದ್ದಿ ನೂಕಿ ಸೆಳೆದುಕೊಂಡುದ ಸಾಧ್ಯವಾಯಿತೆಂದು ತನ್ನ ಮನೆಗೆ ತಂದು ಸತಿಗೆ ಕೊಡಲುಶುದ್ಧವಾಗಿ ಸುಟ್ಟು ಮಡಗಲೆದ್ದು ಹಾರಿ ಹೋಯಿತೆಂದು 2 ತಿಳಿಯುತಿಹುದು ತಿಳಿಯದಿಹುದು ಬೆಳೆಯುತಿಹುದು ಬೆಳೆಯದಿಹುದುಹೊಳೆಯುತಿಹುದು ಹೊಳೆಯದಿಹುದು ಸುಳಿಯದಿಹುದುತಿಳಿದು ನಾಲ್ಕು ದಿಕ್ಕಿನಲ್ಲಿ ಹೊಳೆದು ಎಂಟು ದಿಕ್ಕ ತೋರಿಬಳಸಿ ಸುತ್ತ ತಿರುಗುತಿಹುದು ಬಳಲಿ ಬಳಲದೆಒಳಗೆ ಹೊರಗೆ ತೋರುತಿಹುದು ಅಳಿದ ವಸ್ತು ಮುಟ್ಟದಿಹುದುಕಳವಳಂಗೆ ಎರಡು ಗುಣವ ತೋರಿ ಮೆರೆವುದುತಿಳಿದು ನೋಡೆ ಕೈಗೆ ಸಿಕ್ಕಿ ಒಳಗೆ ಬಯಲ ತೋರುತಿಹುದುಪ್ರಣವ ಒಂದು ಕೋಟಿ ನುಂಗಿ ಉಗುಳಿತಿಪ್ಪುದೋಂ ಎಂದು 3 ತತ್ತಿಯಾದ ಬ್ರಹ್ಮನೀಗೆ ದಿಕ್ಕು ಅಖಿಲಾಂಡವೆಲ್ಲಹೆತ್ತ ತಂದೆಗಾದವನೆ ನಿತ್ಯವುಳ್ಳವ ಸತ್ತು ಹುಟ್ಟಲಿಲ್ಲವೆಂದು ಅತ್ತ ನೋಡಿ ಇತ್ತ ತಿರುಗೆ ತತ್ತಿಯೊಳಗೆ ಬೆಳೆದವೆಲ್ಲ ಸತ್ತವೆನ್ನುತಸತ್ತು ಹೋದ ದೀಪದಂತೆ ಉತ್ಪತ್ತಿಯಾದವಗೆಸತ್ತು ಸತ್ತು ಹುಟ್ಟುವುದು ತಪ್ಪದೆನ್ನುತಎತ್ತಿ ಜಗವ ನುಂಗಿ ತನ್ನ ಹೊಟ್ಟೆಯೊಳಿಂಬಿಟ್ಠುಕೊಂಡುಕತ್ತಲೆಗೆ ಕರ್ತೃವೆಂಬ ಜಗವಸತ್ಯ ಕೇಳಿರೋ ಎಂದು | 4 ಪಂಕಜನ ತಾಯಿ ಸುತನ ಅಂಕದಲ್ಲಿ ಹುಟ್ಟಿ ಜಗವಮಂಕು ಮಾಡುತಿಪ್ಪ ಮಾಯೆ ಹತ್ತು ಶಂಕೆಯಶಂಕೆಕಾರ ಶತ್ರುಮಿತ್ರರಿಬ್ಬರಿಗಾಧಾರವೆಂದುಕುಂಕರದಿಪ್ಪತ್ತೊಂದು ಕೋಟಿ ಪಾಶವುಓಂಕಾರದೊಳಗೆ ಪುಟ್ಟಿ ಓಂಕಾರದೊಳಗೆ ಬೆಳೆದುಓಂಕಾರದೀ ಜಗವ ಎತ್ತಿ ಮೆರೆವುದೋ ಎಂದು 5 ಪ್ರಣವ ಒಂದರೊಳಗೆ ಒಂದು ಕೋಟಿಯನ್ನು ತೋರಿ ಪಡೆಯ (ಕಡೆಯ ?)ಕುಣಿಕೆಯೊಳಗೆ ಎಂಟು ಕೋಟಿಯನ್ನು ತೋರುತತೃಣವ ಹಿಡಿದು ಬರೆಯುತಿಪ್ಪ ಒಂದು ರೋಮ ಕೂಪದಲ್ಲಿಕುಣಿಕೆಯೊಳಗೆ ಜಗದ ಜೀವರಾಶಿ ಎಲ್ಲವಸುಳಿದ ವಿಷ್ಣು ಬ್ರಹ್ಮನೆಂಬ ಹಣೆಯ ಕಣ್ಣ ರುದ್ರನೆಂಬ ಮಣೆಯಗಾರರೆಪ್ಪತ್ತೇಳು ಕೋಟಿ ಸಂಖ್ಯೆಯುಹಣೆಯ ಕಾಣದವರ ಕೀಲಿನೆಣಿಕೆಯಲ್ಲಿ ಹೊಲಬುದಪ್ಪಿಪ್ರಣವ ಒಂದು ಕೇಳುತಿಪ್ಪ ಪರಬ್ರಹ್ಮ ಓಂ ಎಂದು 6 ಸುಳಿ ಕಮಲ ಪಾದ ಮೇಲೆ ಮಸ್ತಕವುತೊಳಲಿ ಕಾಣೆ ವೇದವೆಂದು ಬಳಲಿ ಬಳಲದೆಪ್ರಳಯ ಕೋಟಿ ಪ್ರಾಣಿಗಳಿಗೆ ಹೊಳವುಗಾಣಲೀಸದಂತೆಬೆಳೆದು ಹೋಗುವ ಗತಿಯೆಂಬುದಿತ್ತಲರಿಸುತಕಳವಿನವರು ಬಂದು ಇಳೆಯ ಮೇಲೆ ನಿಂದುಬಿಳಿಗಿರಿವಾಸ ತಿರುಮಲೇಶ ಆದಿಕೇಶವ ತಾನೆಯೆಂದು 7
--------------
ಕನಕದಾಸ
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು
ಪಾದ ಕೂಡಿ ಧ್ರುವ ವಾದ ಮಾಡಬ್ಯಾಡಿ ಸದ್ಬೋಧ ಇದೆ ನೋಡಿ ಭೇದ ಬುದ್ಧೀ ಡ್ಯಾಡಿ ಹಾದಿ ಇದೆ ಕೂಡಿ 1 ಇಂಬು ನಿಜವಾದ ಗುಂಭಗುರುತಾದಾರಂಭದೋರುವದ 2 ಹಿಡಿದು ನಿಜ ವರ್ಮ ಪಡಿಯಬೇಕು ಧರ್ಮ ಜಡಿದು ಪರಬ್ರಹ್ಮ ಕಡೆವದು ದುಷ್ಕರ್ಮ 3 ಗುರುವೆ ನರನೆಂದು ಮರೆದುಬಿಡಿ ಸಂದು ಅರಿತು ನಿಜವೆಂದು ಬೆರೆತು ಕೂಡಿಬಂದು 4 ಇದೆ ಸ್ವತ:ಸಿದ್ಧ ಸದ್ಗುರು ಕೃಪೆಯಿಂದ ಸದ್ಗೈಸುವಾನಂದ ಇದೆ ಮಹಿಪತ್ಯೆಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ವೆಂಕಟೇಶ ಭುವನೇಶ್ವರೇಶಪಾಹಿವೇದವೇದ್ಯ ಕರುಣಾಢ್ಯ ಗತಮೌಢ್ಯ ಪ.ಸರ್ವಚೇತನ ಜಡನಿಚಯಪೂರ್ಣ ಹೇ ಸುಪೂರ್ಣಶರ್ವೇಶ ವಿಧಿವಿನುತ ವಿಮಲಚರಣಉರ್ವಿಭಾರಕಹರಣ ಶರಣಾನ್ವಯೋದ್ಧರಣನಿರ್ವಾಣಪದಪ್ರದ ನಿತ್ಯಾಂತ:ಕರಣಾನಿರ್ವಚನೀಯಾತಿಶಯಾನಾಥನಾಥ ಸುಗೀತಸರ್ವಾಮರಾರ್ಥಿಸುದಾತತಾತಸರ್ವಜÕ ವಾರಣೇಂದ್ರಭರಣ ಹಿತಕರಣ ದಾಶಾರ್ಹ ಹಿತಕರಣಸಂಸ್ಕøತಿವಾರ್ಧಿಕರಣ1ಆತ್ಮಾಂತರಾತ್ಮ ಪರಮಾತ್ಮ ಜ್ಞಾನಾತ್ಮ ಪುರುಷೋತ್ಮಾನ್ನಮಯ ಪ್ರಾಣಮಯ ಮನೋಮಯಾಧ್ಯಾತ್ಮಪ್ರಿಯ ಮಾಪ್ರಿಯ ವಿಬುಧಜನಸ್ವಪ್ರಿಯಆತ್ಮವೈಭವಪ್ರಿಯ ಭಕ್ತಪ್ರಿಯಆತ್ಮೀಯ ವೀರ್ಯ ಔದಾರ್ಯೋದ್ಧøತಟಂಕಆತ್ಮ ಅನಂತನಿಕುರುಂಬಬಿಂಬಆತ್ಮ ನಿವೇದನ ಬಲೀಂದ್ರನುತಉಪೇಂದ್ರ ನಿತ್ಯಾತ್ಮ ಗುಣವೃಂದ ದಯಾಸಾಂದ್ರ ವಿಭೋ ಸಿಂಧೋ 2ಸೃಷ್ಟಿ ಸ್ಥಿತಿ ಲಯ ನಿಯಮ ಜ್ಞಾನಾಜ್ಞಾನ ಬಂಧ ಮೋಕ್ಷಾದ್ಯಷ್ಟ ಕಾರಣ ಸದಾಸಾಧುಪಕ್ಷದುಷ್ಟಹರ ದುರಿತತಮೋಭಾನುಬುಧಸುರಧೇನುವಿಷ್ಣು ಜನರಕ್ಷ ಸದ್ದೀಕ್ಷ ದಕ್ಷಶಿಷ್ಟಮೂಲ ಪ್ರಕೃತಿ ತುಷ್ಟಿದ ಜಡ ಪ್ರಕೃತಿಪುಷ್ಟಿಕರ ಸುಲಲಿತ ಶ್ರೀವತ್ಸಪಕ್ಷಸ್ಪಷ್ಟಲೀಲಾದಿ ನಾರಾಯಣ ನಿರಾಮಯವೃಷ್ಣೀಶಸಾಷ್ಟ ಸಾಪರಾಗತಿ3ಬುದ್ಧೀಂದ್ರಿಯ ಪ್ರಾಣವರ್ಧಕ ಕೃತೀಶ ಅನಿರುದ್ಧ ಪಾಲನಪರ ಪ್ರದ್ಯುಮ್ನ ವಿಭೋರುದ್ರ ನಿಯಂತಾರ ಹಂತಾರ ಸಂಕರ್ಷಣಾದ್ಯವಾಸುದೇವಸನ್ಮೋಕ್ಷಪ್ರದಸದ್ಧಾಮತ್ರಯಗ ಶ್ರೀಪದ್ಮನಾಭಾಚ್ಯುತ ಮುಕ್ತಿದಾತಗಾತ್ರಅತ್ಯದ್ಭುತಾರ್ಥಶುದ್ಧಕರ ನಾಮಾಪ್ತ ಕಾಮಾಪ್ರಮೇಯ ಸಮೃದ್ಧ ಸುಖಗಾತ್ರಾಬ್ಜನೇತ್ರಮಿತ್ರ4ಸತ್ಯವ್ರತ ಪಾಲಾಬ್ಧಿ ಕೀಲನಸೃಕ್ಕೋಲಖಳದೈತ್ಯಜಸುಶೀಲಪ್ರಿಯವಟುನೃಪಕುಲಹರ್ತ ದ್ವಿಜಕರ್ತ ದಶವಕ್ತ್ರ್ತಮಾರಕ ನಮಿತಪಾರ್ಥಪದ ಶುದ್ಧೋದನ ಚಿತ್ತಹರಣಮತ್ತಕಲಿಹರ ಧರ್ಮಸ್ಥಾಪಕಪರಾತ್ಪರಸತ್ಯಸಂಕಲ್ಪಪ್ರಸನ್ನವೆಂಕಟಪರ5
--------------
ಪ್ರಸನ್ನವೆಂಕಟದಾಸರು
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮಸರ್ವ ಪರಬ್ರಹ್ಮ ತಾನೆ ಪರಬ್ರಹ್ಮಪಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲಅದರೊಳಗಣ ಸಿಹಿ ಅದುವೆ ಪರಬ್ರಹ್ಮ1ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ2ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲಹಾಲೊಳಗಣಘೃತಅದುವೆ ಪರಬ್ರಹ್ಮ3ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲದೇಹದೊಳಗಣ ದೇಹಿ ಅದುವೆ ಪರಬ್ರಹ್ಮ4ಸರ್ವಮಾಯೆ ಮಾತುಮಿಥ್ಯಸರ್ವಬ್ರಹ್ಮವೇ ಸತ್ಯಸರ್ವ ಚಿದಾನಂದ ಸರ್ವ ಪರಬ್ರಹ್ಮ5
--------------
ಚಿದಾನಂದ ಅವಧೂತರು