ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ 1 ಸದ್ಭೋಧದನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ 2 ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು 3 ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗುಮದಿಂದ ದೊರೆಯಿತು ನಿಜ ಸ್ಥಾನ 4 ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೆ ಸುಖಸಾಧನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಧ್ವ ಸರೋವರದ ಸ್ನಾನವ ಮಾಡಿರೊ ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ ತ್ರೇತಾಯುಗದಲ್ಲಿ ವರುಣತೀರ್ಥ ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ- ನ್ನತ ಕಲಿಯುಗದಲ್ಲಿ ಮಹಾ ತೀರಿಥ 1 ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ- ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ ನಿರುತದಲ್ಲಿ ತೀವ್ರಗತಿ ಕೊಡುವಳೂ2 ಸಕಲ ವೇದಶಾಸ್ತ್ರ ಓದಿದವನಾದರೂ ಶಕುತಿವಂತನಾಗಿ ಇದ್ದನಾಗೆ ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು ಶಕಲ ಮತಿಯಲಿ ಮಹಾನರಕ ಭುಂಜಿಸುವಾ 3 ಮಜ್ಜನ ತಂದು ಕೊಡುವದು ನರಗೆ ಮಿಂದ ಫಲವೊ ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು 4 ಛೇದಿಸುವದಕೆ ಇದೇ ಸ್ನಾನವೆನ್ನಿ ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ5
--------------
ವಿಜಯದಾಸ
ಶುದ್ಧ ಸನ್ಮಾರ್ಗ ಸರ್ವರಿಗಿದು ಒಂದೆ ಬುದ್ಧಿವಂತರು ತಿಳಿದರು ಇದರಿಂದೆ 1 ಇದರಿಂದೇವೆಂಬುದು ನಿರ್ವಾಣ ಒದರುತಲಿಹುದು ವೇದಪುರಾಣ 2 ಪುರಾಣ ಪುಣ್ಯದ ಹಾದಿಯು ನಿಜ ಸುರಮುನಿಗಳಿಗಿದು ಹೊಳೆವದು ಸಹಜ 3 ಸಹಜಾನಂದದ ಸುಖಸಾಗರ ಬಾಹ್ಯಾಂತ್ರ ಸದೋತಿತ ಸಹಕಾರ 4 ಸಹಕಾರವು ಚಿನ್ಮಯ ಚಿದ್ರೂಪ ಸೋಹ್ಯದೋರುವ ಶ್ರೀ ಗುರುಸ್ವರೂಪ 5 ಸ್ವರೂಪವೆ ಸದ್ಗೈಸುವ ಹಾದಿ ಪರಮ ವೈಷ್ಣವರ ಮೂಲಾಗ್ರದ ಆದಿ 6 ಅಧಿವೆಂಬುದು ನಿಜನಿರ್ಧಾರ ಸಾಧಿಸುದವರಿಗೆ ಸಾಕ್ಷಾತಾರ 7 ಸಾಕ್ಷಾತ್ಕಾರವೆ ಮೋಕ್ಷದಮನೆಯು ಅಕ್ಷಯ ಪದ ಅದ್ವೈತದ ಖಣಿಯ 8 ಅದ್ವೈತವೆ ಆಧ್ಮಾತ್ಮ ಸುವಿದ್ಯ ಸಿದ್ದಸಾಧಕರಿಗೆ ಆಗುವ ಸಾಧ್ಯ 9 ಸಾಧ್ಯವೆಂಬುದು ನಿಜಸಿದ್ಧಾಂತ ಭೇದಿಸಿದವರಿಗೆ ಇದು ಸನ್ಮತ 10 ಸನ್ಮತವೆ ಮತ ಸರ್ವರಿಗೆಲ್ಲ ಉನ್ಮನಲೀಹ ಮಹಾಯೋಗಿಯು ಬಲ್ಲ 11 ಬಲ್ಲೆವೆಂಬುದು ಬಲು ಅಗಾಧ ಸೊಲ್ಲಿಗೆ ಸಿಲುಕದು ಗುರುನಿಜಭೋದ 12 ಬೋಧವೆ ಸದ್ಗುರುವಿನ ದಯಕರುಣ ಸದ್ಗತಿಸುಖ ಸಾಧನದ ಸ್ಫುರಣ 13 ಸ್ಫುರಣವೆ ಬ್ರಹ್ಮಾನಂದದ ಹರುಷ ತರಣೋಪಾಯದ ಮಹಾ ಉಪದೇಶ 14 ಉಪದೇಶವೆ ನಿಜ ಉಪನಿಷದ್ವಾಕ್ಯ ಒಪ್ಪಿಡುವದು ಭೂಸ್ವರ್ಗತ್ರೈಲೋಕ್ಯ 15 ತ್ರೈಲೋಕ್ಯಕೆ ಇದು ನಿಜನಿಧಾನ ಭಯವಿಲ್ಲದ ಮಹಾಸುಖಸಾಧನ 16 ಸಾಧನದಿಂದ ಸದ್ಗತಿ ಸಂಪೂರ್ಣ ಸಾಧು ಸಜ್ಜನರಿಗೆ ಸಕಲಾಭರಣ 17 ಸಕಲಾಭರಣ ಸದ್ಗುರು ನಿಜ ಅಭಯವು ಶುಕಾದಿ ಮುನಿಗು ಕೂಡಿದ ಪ್ರಭೆಯು 18 ಪ್ರಭೆಗಾಣಲು ತೋರದು ನೆಲೆನಿಭವು ನಿಭವೆ ಮಹಾಮಂಗಳಕರ ಶುಭವು 19 ಶುಭದೋರುದು ಸದ್ಗುರು ಕೃಪೆಯಿಂದ ಭ್ರಮೆಹಾರಿತು ಮಾಯೆ ಇದರಿಂದ 20 ಇದರಿಂದೆ ಇದರಿಟ್ಟಿತು ಪುಣ್ಯ ಒದಗಿ ಕೈಗೂಡಿತು ಬಂತು ತಾರ್ಕಣ್ಯ 21 ತಾರ್ಕಣ್ಯವು ಬಂತೆನ್ನೊಳು ಪೂರ್ಣ ಸರ್ಕನೆ ದೊರೆಯಿತು ಸದ್ಗುರುಖೂನ 22 ಖೂನವೆ ಎನ್ನೊಳಗಾಯಿತು ಧ್ಯಾನ ಘನಸುಖದೋರುವ ಅನುಸಂಧಾನ 23 ಅನುಕೂಲಾದ ನಮ್ಮಯ್ಯ ಪ್ರಸಿದ್ಧ 24 ಪ್ರಸಿದ್ಧವೆ ಪ್ರತ್ಯಕ್ಷ ಪ್ರಮಾಣ ಭಾಸುತಿಹುದು ಶ್ರೀಗುರು ಶ್ರೀಚರಣ 25 ಶ್ರೀಚರಣಕೆ ಎರಗಿಹ ಮಹಿಪತಿಯು ಸೂಚನೆ ಮಾತ್ರ ಕೊಂಡಾಡಿದ ಸ್ತುತಿಯು 26
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿದ್ಧಾಂತವಿದು ನೋಡಿ ಸದ್ಗುರುವಿನ ಕೃಪೆಯು ಬುದ್ಧಿವಂತರು ಬಲ್ಲರಾಧ್ಯಾತ್ಮ ಸುಖವು ಧ್ರುವ ಕಾಲಿಲ್ಲದಾಕಳವು ಬಾಲಮುಖದಲಿ ಬಂದು ಕಾಳರೂಪದ ಹುಲಿಯನೆ ನುಂಗಿತು ಮೇಲವರಿಯಲಿ ಬಂದು ಜಲದೊಳಗಿನ ಕಪ್ಪೆ ಮೂಲ ಸರ್ಪದ ಹೆಡೆಯ ನುಂಗಿದದು ನೋಡಿ 1 ಬಾಲ ಇಲ್ಲದ ಇಲಿಯು ಜಾಲಹಾಕುತ ಬಂದು ಸ್ಥೂಲ ಬೆಕ್ಕಿನ ತಲೆಯನೆ ಮುರಿಯಿತು ನಾಲಿಗಿಲ್ಲದ ಮೊಲವು ನಿಲುಕಿ ಜಪವ ಹಾಕಿ ಭಲೆ ಶ್ವಾನನ ಗಂಟಲ್ಹಿಡದಿಹುದು ನೋಡಿ2 ದಿವ್ಯ ಯೋಗದ ಮಾತು ಕಿವಿ ಇಲ್ಲದವಕೇಳಿ ಕಣ್ಣಿಲ್ಲದವ ಕಂಡು ಬೆರಗಾದನು ಕೌತುಕವು ಕಂಡು ಮಹಿಪತಿಯು ತನ್ನೊಳು ತಾನು ತ್ರಾಹಿ ತ್ರಾಹಿಯಿಂದ ಮನದೊಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು