ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಸುಪ್ರೀತ ಸರ್ವೋತ್ತಮ ಹರಿಯೆ ಚಿತ್ತಜನಯ್ಯ ಚಿನ್ಮಯ ಎನ್ನ ದೊರೆಯೆ ಪ. ಅರಿಯೆ ನಾನಾ ವಾಹನಾದಿ ವಿಧಿಯನು ಮರಿಯೆನು ಮನದಲ್ಲಿ ಮಂದಭಾವವನು ವರದೇಶ ನಿನ್ನಯ ಚರಣಾರವಿಂದವ ನೆರೆನಂಬಿದವನೆಂಬ ಪರಿಯಿಂದ ದಯವಾಗು 1 ಇಂದಿರಾವರವಿಧಿವಂದ್ಯ ಸರ್ವೇಶಾ- ನಿತ್ಯ ಸುಂದರ ವೇಷಾ ಮಂದ ಬುದ್ಧಿಯೊಳೆಂತು ಒಲಿಸುವೆ ಶ್ರೀಶಾ ತಂದೆ ನೀ ಕರುಣದಿ ಸಲಿಸಭಿಲಾಷಾ 2 ಅಣುರೇಣು ತೃಣಕಾಷ್ಠ ಪರಿಪೂರ್ಣ ನಿನ್ನ ನೆನೆದು ವಂದಿಸುವೆ ಚಂದನ ಮೂರ್ತಿಯನ್ನ ಸನಕಾದಿ ವಂದ್ಯ ಶೇಷಾಚಲನಾಯಕ ಅನಿಮಿಷ ಪತಿಯೆನ್ನ ಮನೆಯಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ ನಿನ್ನ ಕರುಣಾ ಏನೆಂದು ಸ್ತುತಿಪೆ ಪ. ಮಾನವರೊಳಗತಿ ಹೀನಬುದ್ಧಿಯಲಿ ಏನೊಂದು ಮಾರ್ಗ ಕಾಣದೆ ಬಹು ಬಳಲಿ ನಾನಾ ಚಿಂತೆಗಳಿಂದ ಧ್ಯಾನಿಪ ಸಮಯದಿ ತಾನಾಗಿ ಕರುಣಿಸಿ ಮಾನ ಪಾಲಿಸಿದಿ 1 ಹುಣಾರುವೆನ್ನನು ನಾನಾ ತರದೊಳು ಮಾನಹಾನಿಯ ಮಾಡಿ ಮರಳಿ ಬಾಧಿಸಲು ತಾನೆಂದು ಪೇಳುವರಿಲ್ಲದಂತಿರಲು ನೀನೆ ಬಂದೊದಗಿ ರಕ್ಷಿಸಿದೆ ಕೃಪಾಳು 2 ತದನಂತರದಲಿ ಕಷ್ಟದ ಬಾಧೆ ಸಹಿಸದೆ ಮದರಾಶಿಯೆಂಬ ಪಟ್ಟಣಕೆ ನಾ ಸರಿದೆ ಸದರವಲ್ಲೆಂದು ತಿಳಿದು ನಿನಗೊದರೆ ವಿಧಿಪಿತ ನೀನಲ್ಯು ಪ್ರೇರಿಸಿ ಪೊರೆದೆ 3 ಸಿರಿವರ ನಿನ್ನಯ ಪರಮ ಮಂಗಳಮೂರ್ತಿ ಹರುಷದಿಂದಲಿ ನೋಡಿ ಬರಲು ನಾನಿಲ್ಲಿ ದೊರೆತನದಲಿ ಮಾನಿತಪದಲ್ಲಿ ಇರಿಸಿ ನಿರಂತರ ಕಾವುದ ಬಲ್ಲಿ4 ಶರಣಾಗತ ರಕ್ಷಾಕರನೆ ಮಂದಿರದ ವರನಾಗಿ ಸಲಹುವ ದೊರೆ ನಿನ್ನ ಬಿರುದ ತರಳ ಬುದ್ಧಿಯೊಳೆಂತು ವರ್ಣಿಪೆ ವರದ ಕರುಣಾ ಸಾಗರ ವೆಂಕಟಾದ್ರಿಯೊಳ್ಮೆರೆದ 5
--------------
ತುಪಾಕಿ ವೆಂಕಟರಮಣಾಚಾರ್ಯ