ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥಎಷ್ಟೆಂದು ತಾಳುವೆನೊ ಶ್ರೀರಂಗ ಪ ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ಅ ನರಜನ್ಮವನು ಎತ್ತಿ ನರಕದೊಳಗೆ ಸುತ್ತಿಗುರಿ ಗೊತ್ತು ಕಾಣೆನಯ್ಯ ಶ್ರೀರಂಗಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನುಮರೆದು ಪಾಮರನಾದೆ ಶ್ರೀರಂಗ1 ಮಂದ ದು-ರ್ಮತಿಗೆ ಮರುಳಾದೆನೊ ಶ್ರೀರಂಗಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸಂ-ಗತಿಯ ನಾನರಿದಿದ್ದೆನೊ ಶ್ರೀರಂಗ 2 ಮಿತಿಮೀರಿ ಮನ ಹರಿ ಪದವ ನೆನೆಯದೆ ಪರಸತಿಯರಿಗಳುಪಿದೆನೊ ಶ್ರೀರಂಗಕೃತಬುದ್ಧಿಯೊಳು ಉನ್ನತನಾಗಿ ತಾನೆರೆದುಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ 3 ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ-ದ್ವಾಸನೆಯನು ಬಿಟ್ಟೆನು ಶ್ರೀರಂಗಮೋಸದಿಂದಾತ್ಮಘಾತುಕನಾಗಿ ಅಪರಾಧವೇಸೊಂದು ಮಾಡಿದೆನಯ್ಯ ಶ್ರೀರಂಗ 4 ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿಸೋಸುತ್ತ ಕುಳಿತಿಹೆನು ಶ್ರೀರಂಗವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತದಾಸರ ದಾಸನಯ್ಯ ಶ್ರೀರಂಗ 5
--------------
ಕನಕದಾಸ
ಗುರು ಮಧ್ವೇಶ ವಿಠಲ | ಪೊರೆಯ ಬೇಕಿವಳ ಪ ಪರಮ ಭಕುತಿಲಿ ನಿನ್ನ | ದಾಸ್ಯ ಕಾಂಕ್ಷಿಪಳ ಅ.ಪ. ಹರಿಗುರೂ ಸದ್ಭಕ್ತಿ | ಹಿರಿಯರಲಿ ಅಸಕ್ತಿನಿರುತ ಕರುಣಿಸಿ ಇವಳ | ಪೊರೆಯೊ ಹರಿಯೇ |ಅರುಹ ಲೇನಿಹುದಿನ್ನು | ಸರ್ವಜ್ಞ ನೀನಿರುವೆಕರುಣದಲಿ ಪೊರೆಯೆಂದು | ಪ್ರಾರ್ಥಿಸುವೆ ಹರಿಯೇ 1 ಕೃದ್ಧಖಳ ಜನರನ್ನು | ಪ್ರಧ್ವಂಸ ಮಾಡುತಲಿಬುದ್ಧಿಯೊಳು ನೀ ನಿಂತು | ವಿದ್ಯೆ ಪ್ರದನಾಗೋಮಧ್ವಮತ ಪದ್ಧತಿಗಳುದ್ಧರಿಸಿ ಇವಳಲ್ಲಿಪದ್ಮನಾಭನೆ ಪೊರೆಯೊ | ಮಧ್ವಾಂತರಾತ್ಮಾ 2 ಕಂಸಾರಿ ಹರಿಯೇ 3 ನಿನ್ನ ಪ್ರೇರಣೆಯಂತೆ | ಕನ್ಯೆಗಂಕಿತವಿತ್ತೆನನ್ನೆಯಿಂ ಪೊರೆಯಿವಳ ಪನ್ನಂಗ ಶಯನಾ |ನಿನ್ನಂಥ ಕರುಣಾಳು | ಅನ್ಯರಾರಿಹರಯ್ಯಪನ್ನಗಾರಿಯ ವಾಹ | ಅನ್ನಂತ ಮಹಿಮಾ 4 ಪಾವನಾತ್ಮಕ ದೇವ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಶರ್ವವಂದ್ಯಾ ಭಾವದೊಳು ಮೈದೋರಿ | ಕಾವ್ಯದನೆ ಬಿನ್ನಪವಾನೀ ವೊಲಿದು ಸಲಿಸೊ ಗುರು | ಗೊವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮಾಧವ ಪಾದ | ದಾಸ್ಯ ಬೇೀಡುವನ ಪ ಸನ್ನುತ ಹರಿಯೆ | ಭೂಮಗುಣ ಪೂರ್ಣಾ 1 ಮೂರೆರಡು ಭೇದಗಳ | ಸಾರವನೆ ತಿಳಿಸಿವಗೆತಾರತಮ್ಯ ಜ್ಞಾನ | ದರಿವನಿತ್ತೂಪಾರಗೈಭವದ ಕೂಪಾರವನು ಶ್ರೀ ಹರಿಯೇಮಾರುತಾಂತರ್ಯಾಮಿ | ಮಾರಮಣ ದೇವಾ 2 ಕರ್ಮ | ಜಾಲಗಳ ತವಪಾದಓತೈಪ ಭಾಗ್ಯವನೆ | ಪಾಲಿಸೋ ಹರಿಯೇ 3 ಬುದ್ಧಿಯೊಳು ನೀನಿಂತು ಮಧ್ವ ಸಿದ್ಧಾಂತಗಳವೃದ್ಧಿಗೈಸುತ ಹರಿಯೆ | ಸಿದ್ಧನೆನಿಸೋಅದ್ವಾನ ಇದ ಹೊರತು ಶುದ್ಧ ಸಾಧನ ಕಾಣೆಕೃದ್ಧಖಳ ಹರನೆ ಅನಿ | ರುದ್ಧ ಒಲಿ ಇವಗೇ 4 ಜೀವ ಅಸ್ವಾತಂತ್ರ | ದೇವ ನಿಜ ಸ್ವಾತಂತ್ರಈ ವಿಧದ ಸುಜ್ಞಾನ | ನೀ ವೊಲಿದು ಇತ್ತೂ |ಭಾವುಕರ ಪರಿಪಾಲ | ಮಾವಿನೋದಿಯೇ ಗುರು ಗೋವಿಂದ ವಿಠಲನೆ | ಭಾವದೊಳು ತೋರೋ 5
--------------
ಗುರುಗೋವಿಂದವಿಠಲರು
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು
ವ್ಯರ್ಥ ಕೆಟ್ಟರು ಯಿಂದು ನರಮನುಜರು ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ಪ ಮರುಳಾಟ ಪರ ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ ಮದ್ದು ತಿಂದಂತೆ ಇದ್ದಾದರು ಉದಯದಲಿ ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ 1 ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು ಬರಿದೆ ಬಾರದೆ ಬಿಂದು ಜಲ ತಂದು ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ ಯರದು ಯಮಬಾಧೆ ಕಳೆಯಲರಿಯದ ಮಂಕು 2 ಅಡವಿಯಿಂದಲಿ ಒಂದು ತುಳಸಿದಳವನೆ ತಂದು ತಡಿಯದಲೆ ತಾವರೆದಳನಯನನ ಕರವ ಮುಗಿದು ಮುಕುತಿ ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ3 ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ ಗಾತ್ರಗೆ ನೈವೇದ್ಯವೆಂದು ಬಗೆದು ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ ನಿತ್ಯ ಒಂದೊಂದು ಮಾಡದೆ ಕರ್ಮಿಗಳು4 ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ ಇಂದು ಬಂದದೆ ನಾಳೆ ಬರಲರಿಯದೂ ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ ಬಂದಾಗ ನೆನೆದು ಭವವನದಿ ಉತ್ತರಿಸದೆ 5
--------------
ವಿಜಯದಾಸ