ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡಿದೆ ನಂದತೀರ್ಥ ಮು - ನೀಂದ್ರವಂದಿತ ಚರಣನಾ ಪ ವಂದಿಸುವ ಭಕುತರಿಗೆ ನಿತ್ಯಾ - ನಂದಫಲದ ಮುಕುಂದನಾಅ.ಪ ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ 1 ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ ಸೋಮಪಾಧಿಪಸುತಗೆ ಒಲಿದು ಸಂ - ಗ್ರಾಮದಲಿ ರಕ್ಷಿಸಿದನಾ 2 ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ 3 ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ ಈ ವಸುಂಧರೆಯೊಳಗೆ ಮಧ್ವಸ - ರೋವರದಲಾವಾಸನಾ 4 ಪೋತವೇಷನ ವೀತಶೋಕನ ಪೂತನಾದಿವಿಘಾತನಾ ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ 5
--------------
ಗುರುಜಗನ್ನಾಥದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ