ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡಿದೆ ನಂದತೀರ್ಥ ಮು - ನೀಂದ್ರವಂದಿತ ಚರಣನಾ ಪ ವಂದಿಸುವ ಭಕುತರಿಗೆ ನಿತ್ಯಾ - ನಂದಫಲದ ಮುಕುಂದನಾಅ.ಪ ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ 1 ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ ಸೋಮಪಾಧಿಪಸುತಗೆ ಒಲಿದು ಸಂ - ಗ್ರಾಮದಲಿ ರಕ್ಷಿಸಿದನಾ 2 ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ 3 ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ ಈ ವಸುಂಧರೆಯೊಳಗೆ ಮಧ್ವಸ - ರೋವರದಲಾವಾಸನಾ 4 ಪೋತವೇಷನ ವೀತಶೋಕನ ಪೂತನಾದಿವಿಘಾತನಾ ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ 5
--------------
ಗುರುಜಗನ್ನಾಥದಾಸರು
ಬೆಳಗುಂಝಾವದಿ ಬಾರೊ ಹರಿಯೆ ಚರಣ ತೊಳೆದು ಜಲದಿ ತೀರ್ಥಪಾನ ಮಾಡುವೆನೊ ಪ. ನೀರ ಒಳಗೆ ನಿಂತುಕೊಂಡು ಬೆನ್ನ ಭಾರ ಪೊತ್ತು ನಿನ್ನವರ ಕಾದುಕೊಂಬೆ ಮೋರೆ ತಗ್ಗಿಸಿದರೇನೆಂಬೆ ಜಗದಿ ನಾರಸಿಂಹನಾಗಿ ಪೂಜೆಯಗೊಂಬೆ 1 ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ ಬಲವಂತ ನಿನಗಿದಿರಿಲ್ಲೊ ನಿನ್ನ ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ 2 ಗೋಕುಲದೊಳು ಪುಟ್ಟಿದೆಲ್ಲೊ ಲೋಕ ಪಾ(ಕಾ?) ಕು ಮಾಡಲು ಬುದ್ಧರೂಪನಾದೆಲ್ಲೊ ಯಾಕೆ ಹಯವನೇರಿದೆಲ್ಲೊ ನಮ್ಮ ಸಾಕುವ ಹಯವದನ ನೀನೆ ಬಲ್ಲೆಲ್ಲೊ 3
--------------
ವಾದಿರಾಜ
ಮಾನಿನೀ ವ್ರತಹರಣ ದೀನರಕ್ಷಣ ನಿಪುಣ ದಾನವ ಕುಲಾಹನನ ವಸನಹೀನ ತ್ರಿಪುರಾರಿ ವಂದಿತ ತಪ್ತಹೇಮಸುಗಾತ್ರ ಸುಪವಿತ್ರ ಸುಚರಿತ ಭೇದರಹಿತ ನಿತ್ಯ ನಿಷ್ಕಲ್ಮಷ ಸತ್ವಮಯ ಸ್ವರೂಪ ಬುದ್ಧರೂಪ ಆನಂದಪರಿಪೂರ್ಣ ಅಬ್ಜಪತ್ರೇಕ್ಷಣ ಆದ್ಯಂತಕಾರಣ ಅಪಾರಮಹಿಮ ಭೂತದಯಾಪರ ಧರ್ಮಸಾರ ಪೂತ ಸದ್ಗುಣಲಸಿತ ದುರಿತದೂರ ಧಾತ ಸುಕವಿಜನ ಚೈತನ್ಯದಾತ ಖ್ಯಾತ ಶೇಷಾದ್ರಿವರ ಪಾಹಿಸುಕÀರ
--------------
ನಂಜನಗೂಡು ತಿರುಮಲಾಂಬಾ
ವೆಂಕಟೇಶನೆ ಶ್ರೀ ವೆಂಕಟೇಶನೆ ಪ. ಶಂಖ ಚಕ್ರಗಳನೆ ಪಿಡಿದುಬಿಂಕದಿಂದ ಮೆರೆಯುತಿರುವ ಅ.ಪ. ಮೀನನಾಗಿ ಬಂದು ಘೋರ ದಾನವನೆ ಕೊಂದುಯನ್ನೇ ಎತ್ತಿದಂಥ ಜಾಣ ಕೂರ್ಮಾವತಾರ1 ಧರಣಿದೇವಿಯನ್ನು ಕದ್ದ ಹಿರಣ್ಯಾಕ್ಷನೆ ತರಿದುಕರುಳಮಾಲೆಯನ್ನೆ ಧರಿಸಿ ವರ ಪ್ರಹ್ಲಾದನ ಕಾಯ್ದ 2 ಬಲಿಯ ದಾನವನ್ನೆ ಬೇಡಿ ನೆಲವ ಮೂರಡಿ ಮಾಡಿಛಲದಿ ಕ್ಷತ್ರಿಯನಳಿದ ಚಲುವ ಪರಶುರಾಮ3 ಹತ್ತುರಥನ ತನಯನೆನಿಸಿ ಹತ್ತುಶಿರನ ಸಂಹರಿಸಿಮತ್ತೆ ಕಂಸಾದಿ ಖಳರ ಹತ್ಯಮಾಡಿದಂಥ ಶ್ರೀ 4 ಚಾರು ಬುದ್ಧರೂಪವಾಗಿ ನಾರಿಯರ ವ್ರತವ ಕೆಡಿಸಿತುರಗವೇರಿ ಚರಿಪ ತಂದೆವರದವಿಠಲ ಕಲ್ಕಿ 5
--------------
ಸಿರಿಗುರುತಂದೆವರದವಿಠಲರು
ಶಾರದೇಂದುಮುಖಿ ನೀರಜನಯನಳೆ ಬಾರೆಲೆ ಬಾಗಿಲ ತೆಗಿಯಲೆ ಭಾಮೆ ಪ ಯಾರಯ್ಯ ಬಾಗಿಲ ಹೊರಗೆ ನಿಂತಿರುವನು ಜಾರ ಪುರುಷನಂತೆ ತೋರುವೆ ನೀನು ಅ.ಪ ಜಾರನಾದರೆ ನಿಂಗೆ ಜಾರನಲ್ಲವೆ ಮೀನಾ ಕಾರ ಧರಿಸಿರುವ ಹರಿಯಲೆ ಭಾಮೆ ಮೀನನಾದರೇ ಬಲು ಮೌನದಲಿರದಂತೆ ಮಾನವರಂತೆ ಮಾತು ಯಾವುದೋ ನಿನಗೆ 1 ಮಂದರಗಿರಿಯ ಬೆನ್ನಿಂದ ಧರಿಸಿರುವ ಅಂದ ಕೂರ್ಮನಲ್ಲವೇನೆ ಭಾಮೆ ಕೂರ್ಮ ನೀನಾದರೆ ಕೂಪದೊಳಿರುವುದೆ ಧರ್ಮವೆಂಬುವುದನು ಮರೆತೆಯಾ ನೀನು 2 ನೀಲವೇಣಿಯೆ ಕೇಳೆ ಕೋಲರೂಪದಿ ಬಂದು ಕ್ಷಿತಿ ತಂದೆನೆ ಭಾಮೆ ಪೋತರೂಪನೇ ನಿಜ ಧಾತ್ರಿಯ ಭೇದಿಸಿ ಗಾತ್ರ ರಕ್ಷಣೆ ಮಾಡು ಹೋಗೆಲೊ 3 ಸ್ತಂಭ ಭೇದಿಸಿ ರಿಪು ಡಿಂಭನ ಕಾಯಲು ಜಂಭದಿ ಖಳನನು ಕೊಂದೆನೇ ಭಾಮೆ ಸ್ಥಂಭ ಭೇದಿಸಿದ ನಾ ನಂಬುವುದಿಲ್ಲವೊ ಡಂಭದಿ ಬಾಗಿಲು ಭೇದಿಸಿ ಬಾರೊ 4 ವಾಮನನೆಂದು ವಟುರೂಪದಿ ಬಂದು ಸಾರ್ವ ಭೌಮನಲ್ಲಿ ಭೂಮಿ ಬೇಡಿದೆ, ಭಾಮೆ ವಟುರೂಪನಾದರೆ ಕುಟಿಲಾಕ್ಷಿಯರಲಿಂಥ ಚಾಟುವಚನಗಳು ಯಾಕೆಲೊ 5 ದುರುಳನೃಪರ ಪರಿಹರಿಸಿದ ಭೃಗುಮುನಿ ವರಕುಲಜಾತ ಶ್ರೀ ರಾಮನೇ ಭಾಮೆ ಮುನಿವರಸುತನಾಗಿ ಸ್ವನಿಯಮಗಳ ಬಿಟ್ಟು ವನಿತೆಯರಲ್ಲಿಂಥಾ ಸರಸವೆ ನಿನಗೆ 6 ದಶರಥ ನೃಪತಿಯ ಮನೆಯೊಳವತರಿಸಿ ದಶಶಿರರನು ಕೊಂದ ರಾಮನೆ ಭಾಮೆ ಪರ ಕಾಮಿನಿಯರೊಳಿಂಥಾ ಪ್ರೇಮ ಮಾಡುವುದುಂಟೆ ಯೋಚಿಸೊ ನೀನು 7 ನೀರಜಾಕ್ಷಿ ಕೇಳೆ ಜಾರಚೋರತೆಯಲ್ಲಿ ಸಿರಿ ಕೃಷ್ಣನೇ ಭಾಮೆ ಚೋರನಾದ ಮೇಲೆ ಸೇರಿಸುವುದು ಹೇಗೆ ಭಾರಿ ಆಭರಣಗಳಿರುವುವೊ 8 ಮುಗ್ಧೆ ಕೇಳೆ ಇದಬದ್ಧವಲ್ಲದೆ ಅತಿ ಶುದ್ಧನಾದ ಬುದ್ಧರೂಪನೆ ಬುದ್ಧರೂಪನೆ ನಿನ್ನ ನಡತೆಯ ಕೇಳಲು ಶುದ್ಧಿಯು ಲೋಕಪ್ರಸಿದ್ಧವು9 ಸರಸಿಜಮುಖಿ ವರತುರಗವನೇರಿದ ನೃಪರ ಗೆಲ್ವ ಕಲ್ಕಿಯೇ ಭಾಮೆ ದುರುಳ ಜನರು ಇಲ್ಲಿ ಸೇರುವುದಿಲ್ಲವೊ ತರಳೆಯರಲಿ ದುಷ್ಟ ಕಾರ್ಯವೇ ಪೋಗೊ10 ಪರಿ ಸರಸವನಾಡುವ ನಾಮಗಿರಿ ನರಹರಿ ರೂಪ ರಮಾ ರಮೇಶರು ವಿಹರಿಪ ಬಗೆಯನು ಸ್ಮರಿಸುವ ಸುಜನರ ಪರಮಪುರುಷ ಹರಿ ಪೊರೆವುದು ನಿಜ 11
--------------
ವಿದ್ಯಾರತ್ನಾಕರತೀರ್ಥರು
ಹನುಮ - ಭೀಮ - ಮಧ್ವರು ಅಮಮ ಎನಿತÀದ್ಭುತಮಹಿಮೆ ಪೊಗಳನು ಪಮ ದೇವ ಜೀವೋತ್ತಮ ಸುರಸಾರ್ವಭೌಮ ಹನುಮ ಪ ಭೀಮ ರಿಪುಕುಲಧೂಮ ಯತಿಕುಲಸೋಮ ಶ್ರೀಮದಾನಂದ ಮುನಿಮಹಿಮಾಅ.ಪ ಜೀಯ ಈ ಪಯೋಜಾಂಡದೊಳಿನ್ನೆಣೆಯಿಲ್ಲ ಬಲದೊಳು ಶೌರ್ಯ ಕಾಯನೋಡಲು ಆಖಣಾಶ್ಮಸಮನು ನಿನ್ನೊಳು ಹರಿಯರೂಪಗಳೆನಿತು ಇಹುದಯ್ಯ ನಿನ್ನಲ್ಲಿಹುದು ಇನ್ನೆಷ್ಟಯ್ಯ ಶ್ರೀಯರಸ ಶ್ರೀ ಶಿಂಶುಮಾರನು ನಿನ್ನ ಮುಖಕಮಲದಲ್ಲಿಹನೂ ವಾಯುಮೂರುತಿ ನಿನ್ನ ನಾಸಾಗ್ರದೊಳು ಶೋಭಿಪ ಮತ್ಸ್ಯಮೂರುತಿಯು ಜೀಯ ನಿನ್ನಯ ನಾಸಪೃಷ್ಠದಿ ಕೂರ್ಮ ಮೂರುತಿಯು ಅಲ್ಲಿ ನೆಲೆಸಿಹನು ನಯನದ್ವಯದಿ ಕಪಿಲವಿಷ್ಣು ಶ್ರವಣದ್ವಯಗಳೊಳು ಕೃಷ್ಣರಾಮರು ನಾರಾಯಣ ಇಹನು 1 ಬಾಹುದ್ವಯಗಳೋಳ್ಕಲ್ಕಿ ಬುದ್ಧರೂಪಿರೆ ಬಾಹುಬಲವಿನ್ನೆಷ್ಟಯ್ಯ ಅಹುದು ಪವನಹಸ್ತದೊಳ್ ಪಾವನ್ನ ಶ್ರೀ ಬಾದಾರಾಯಣ ಕಂಗೊಳಿಪನಯ್ಯ ಶ್ರೀ ಹರಿಯು ನೆಲೆಸಿಹನು ಪಾದ ಮಧ್ಯಸ್ಥಾನದಲಿ ಸಲೆ ಬೆಳಗುತಿಹನು ಮಹಮಹಿಮ ನಿನ್ನಯ ಪಾದಪೃಷ್ಠದಿ ಹೃಷೀಕೇಶ ಹರಿಯು ನಿಂತಿಹನು ಇಹರಯ್ಯ ದಕ್ಷಿಣ ವಾಮಜಾನುಗಳಲಿ ಯಜ್ಞ ಶ್ರೀಧರರಿಹರು ಕಟಿ ಪ್ರದೇಶದಿ ದಿಟ್ಟರಾಗಿಹರು 2 ದಕ್ಷಿಣದಲ್ಲಿಹ ವನಮಾಲೆಯಲ್ಲಿಹರು ಗುಣನಿಧಿಯೆ ತದುಪರಿ ಸೂರ್ಯವರುಣಅಶ್ವಿನಿಗಳೆಲ್ಲ ನಿನ್ನಯ ವನಮಾಲೆಯಲಿಹರು ಎಣಿಸೆ ದಕ್ಷಪ್ರಜಾಪತಿಯು ನಿನ್ನ ವಾಮ ವನಮಾಲದೊಳಲ್ಲಿ ಇರುತಿಹನು ಮಣಿದು ಸೇವಿಪ ಜಯಂತ ಮನುಯಮ ತದನಂತರ ವನಮಾಲೆಯಲ್ಲಿಹರು ಜಾಣ ಬೃಹಸ್ಪತಿ ದಕ್ಷಿಣ ವನಮಾಲದೊಳು ಆಶ್ರಯಿಸಿ ತಾವಿಹರು ಪ್ರಾಣ ಅಪಾನ ವ್ಯಾನೋದಾನ ಸಮಾನ ವನಮಾಲದಲ್ಲಿಹರು 3 ಪದುಮನಾಭನು ಸಲೆ ಬೆಳಗುತಿಹನು ವಾಮದಕ್ಷಿಣ ಕುಕ್ಷಿಯೊಳಿಹರು ಹರಿಮೂರುತಿ ನಿನ್ನಾಂತರದಿಂದ ನಿಂತಿಹನು ಪಾದಪಾಶ್ರ್ವಗಳಲ್ಲಿ ಋಷಭ ಗೋವಿಂದ ಮೂರುತಿ ಅಲ್ಲೆ ಇರುತಿಹರು ಮುದದಿ ನಿನ್ನಯ ವಕ್ಷದೊಳು ಶ್ರೀ ವರಹಮೂರುತಿ ಅಲ್ಲೆ ನೆಲೆಸಿಹನು ಎದುರಿಲ್ಲ ನಿನಗೆ ಕಪೋಲದೊಳು ಶ್ರೀ ವಾಸುದೇವನು ಇಹನು ವಿಧಿವಾಯುಗಳು ನಿನ್ನಯ ವಾಮಭುಜದೊಳು ಮುದದಿ ನಲಿಯುತಿಹರು ವಿಧಿ ವಾಯುಸತಿಯರು ದಕ್ಷಿಣಭುಜದೊಳು ನುತಿಸುತಿಹರು 4 ಪವನಶಕ್ತಿ ಹನ್ನೆರಡೆಲ್ಲ-ನಿನ್ನಯ ಹೃದಯದಾಭರಣ ಪವನಿಸಿರ್ಪುದು ಕ್ರಮದಿ-ಶಕ್ತಿ ಪ್ರತಿಷ್ಠೆ ಸಂವಿತ್ ಸ್ಪೂರ್ತಿ ಭವಹಾರಿ ನಿನಗೆ ಕಲಾವಿದ್ಯಾಮತಿ ನಿಯತಿ ಮಾಯಾ ಕಾಲಪುರುಷ ಈ ಪರಿಯು ಜೀವೇಶ ನಿನ್ನಯ ಮಹಿಮ ಗುಣಗಳ ಪೊಗಳಲಳವೇ ಹರಮುಖಾದ್ಯರಿಗೆ ಜೀವರೆಸಗುವ ಕಾರ್ಯಗಳು ಲವಲೇಶ ನಿನ್ನ ಬಿಟ್ಟು ನಡೆಯದೊ ಪವಮಾನಮೂರುತಿ ಹರಿಯ ಕರುಣಾಕಟಾಕ್ಷ ನಿನ್ನೊಳು ಇಟ್ಟುಇರುವುದು ಇನ್ನೆಷ್ಟೊ ದೇವ ನಿನ್ನಯ ಖ್ಯಾತಿ ಎಷ್ಟೋ ಬಲದಿ ಶೇಷಶೈಲವ ತಂದೆ ಕಾವುದಯ್ಯ ಶ್ರೀ ವೇಂಕಟೇಶನ ಪ್ರೇಮದ ದೂತ 5
--------------
ಉರಗಾದ್ರಿವಾಸವಿಠಲದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ