ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ರಕ್ಷಕ ಆಪದ್ಬಾಂಧವ ಶ್ರೀಪತಿ ಕೇಶವ ಮಾಧವನೆ ಪ ಮದನ ಗೋಪಾಲನೆ ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ ಬಿಟ್ಟ ಕಂಗಳ ಮುಚ್ಚದೆ ತಿರುಗುವ ಬೆಟ್ಟವ ಬೆನ್ನಿನೊಳಾಂತಿರುವ ಗಟ್ಟಿನೆಲವ ಕೆದರುತ ಬೇರರಸುವ ಹೊಟ್ಟೆಯ ಕರುಳನೆ ಬಗೆದಿರುವ1 ಪೊಡವಿಯ ಬೇಡುತ ಕೊಡಲಿಯ ಪಿಡಿಯುತ ಪೊಡವಿಪರೆಲ್ಲರ ಗೆಲಿದವನೆ ಮಡದಿಯನರಸುತ ಕಡಲನು ಕಟ್ಟುತ ಕಡಹಲ್ದ ಮರನೇರ್ದ ಮೃಡಸಖನೆ2 ಬುದ್ಧನಾಗಿ ತ್ರಿಪುರರ ಗೆಲಿದವನೆ ಶುದ್ಧ ಹಯವನೇರಿ ಮೆರೆದವನೆ ಹದ್ದುವಾಹನವೇರುತ ನಲಿದಾಡುವ ಪದ್ಮನಾಭ ಪುರುಷೋತ್ತಮನೆ3 ಅಗಣಿತ ಮಹಿಮನೆ ಖಗವರವಾಹನ ನಿಗಮವೇದ್ಯ ನಿರ್ಮಲಚರಿತ ಬಗೆಬಗೆಯಿಂದಲಿ ಭಜಿಸುವ ಭಕುತರ ಅಘನಾಶನ ಸುಜನರ ಪ್ರಿಯ 4 ಸೌಮ್ಯ ವತ್ಸರದಿ ಸುಂದರಶ್ಯಾಮನ ಸಾಮಗಾನಲೋಲನ ಭಜಿಸಿ ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ 1 ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಿತ್ಯ 2 ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ ನಾದಿದೈವವೆಂದು ಎಣಿಸುವ ಜಪಶೀಲ 3
--------------
ವಿಜಯದಾಸ
ಜೋ ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ಜೋ ರಣಭೀಮ ಪ ಜೋ ಜೋ ಭಕ್ತರ ಕಷ್ಟನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ ಅ.ಪ. ಭೂಮಿಯ ಚಿನ್ನದ ತೊಟ್ಟಿಲ ಮಾಡಿಸೋಮಸೂರ್ಯರೆಂಬ ಕಲಶವ ಹೂಡಿನೇಮದಿ ವೇದಗಳ ಸರಪಣಿ ಮಾಡಿಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ1 ಸರಸಿಜೋದ್ಭವ ಸರಸ್ವತಿ ಭಾರತಿಗರುಡಶೇಷ ರುದ್ರರಿವರ ಸತಿಯರುಸುರರ ಕಿನ್ನರರು ಕಿಂಪುರುಷ ನಾರದರುಪರಿಪರಿ ಗೀತದಿ ತುತಿಸಿ ಪಾಡಿದರು 2 ವಸುದೇವಸುತನಾದ ಮುದ್ದುಮುರಾರಿಅಸುರೆ ಪೂತನಿಯ ಪ್ರಾಣಾಪಹಾರಿಅಸಮ ಸಾಹಸಮಲ್ಲ ದೈತ್ಯರ ವೈರಿಶಿಶುವಾಗಿ ದೇವಕೀಗಾನಂದ ತೋರಿ 3 ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿನಿಗಮಗೋಚರ ನಿತ್ಯಾನಂದನೆ ತ್ರುವ್ವಿ ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ 4ತಮನ ಮರ್ದಿಸಿ ವೇದತತಿಗಳನು ತಂದೆಸುಮನಸರಿಗಾಗಿ ಮಂದರಪೊತ್ತು ನಿಂದೆಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ 5 ತರಳನಾಗಿ ಬಲಿಯ ದಾನವ ಬೇಡ್ದೆಪರಶು ಧರಿಸಿ ಕ್ಷತ್ರಿಯರ ಸವರಿದೆದುರುಳ ರಾವಣನ ಶಿರವ ಚೆಂಡಾಡಿದೆಚರಿಸಿ ಮನೆಗಳ ಪಾಲ ಮೊಸರನ್ನು ಕುಡಿದೆ 6 ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲಮುದ್ದು ತುರಗವನೇರಿ ಕಲ್ಕ್ಯನಾದ್ಯಲ್ಲಪದ್ಮನಾಭ ಸರಿ ಭಕ್ತವತ್ಸಲನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ 7
--------------
ಶ್ರೀಪಾದರಾಜರು
ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ1ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ 2ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ 'ಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ 3
--------------
ಭೂಪತಿ ವಿಠಲರು
ರಮಾ ಮನೋಹರನೆ ದೀನ - ಪತಿತಪಾವನಾ ಪ ಚೆಂದದಿಂದ ವೇದ ತಂದ ಮಂದರೋದ್ಧಾರಾ ಅರ ವಿಂದನಯನ ಬಂಧು ರಕ್ಷಿಸೊ ಇಂದು ಭೂಧರಾ 1 ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾ ಧೃತ ಕರದ ಪರಶುರಾಮ ರಾಘವ ಯರು ಕುಲೋತ್ತಮಾ 2 ಲೋಕ ಮೋಹಕ ಬುದ್ಧನಾಗಿ ತೇಜಿಯೇರಿದಾ ಜಗ ದೇಕ ಜಗನ್ನಾಥ ವಿಠಲ ಭೀಕರಾಂತಿಕಾ 3
--------------
ಜಗನ್ನಾಥದಾಸರು