ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಂಧು ಶಯನ ಬಾರೆಲೋ - ಮಂದರೋದ್ಧಾರೀಇಂದಿರೆಯರಸ ಮುಕುಂದನೇ ಪ ಮಾಧವ ಹೇ ದಯಾಂಬುಧೆ - ವಂದಿಸುವೆ ತ್ವತ್ಪಾದ ದ್ವಂದ್ವಕೇ ಅ.ಪ. ಹೃದಯ ಮಧ್ಯದಿ ಮಂಟಪಾ - ಬುಧ ಜನ ವಂದ್ಯಸಿದ್ಧವಾಗಿಹುವು - ಮಾಧವಾ |ಸಿದ್ಧ ಸಾಧನ ಪವನ - ಉದಾನಾದಿಗಳೆಲ್ಲಹೆದ್ವಾರಗಳ ಕಾದಿಹರೋ ||ಮಧು ವಿರೋಧಿಯೆ ನಿನ್ನ ಪದ - ಸದ್ವನಜ ಕೀರುತಿ ಸುಧೆಯ ಸವಿಯುವಮುದವ ಕರುಣಿಸು ಶ್ರೀದ ನರಹರಿ - ಹೃದಯ ಸದನಕೆ ವದಗಿ ಬೇಗ 1 ಚಿತ್ತ ಸಿಂಹಾಸನವೂ - ಚಿತ್ತ ಜನಯ್ಯಾಸ್ತೋತ್ರ ರತುನ ಖಚಿತವೂ ||ಉತ್ತಮ ಮತಿ ಸುದತೇರೂ - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ಕೃತ್ತಿವಾಸನ ಸಖನೆ ಪರಮ ಸು - ಹೃತ್ತಮೋತ್ತಮ ಚಿತ್ಸುಖ ಪ್ರದಚಿತ್ತವಿಸು ಚಿತ್ತಾಖ್ಯ ಪೀಠಕೆ - ಸತ್ಯಕಾಮ ಶರಣ್ಯ ಶಾಶ್ವತ 2 ಭವ ಪಿತ ತೋಯ ಜಾಕ್ಷನೆ -ದಾಯ ನಿನ್ನದು ಎನ್ನ ಗತಿಗೇ ಪ್ರೇರ್ಯ ಪ್ರೇರಕ ಶ್ರೀಗುರು - ಗೋವಿಂದ ವಿಠಲನೆ ಕಾಯೊ ಬೇಗ 3
--------------
ಗುರುಗೋವಿಂದವಿಠಲರು
ಎಂತು ಶೋಭಿಪ ನೋಡೀ - ಶ್ರೀವ್ಯಾಸ ವಿಠಲಸಂಪುಟವ ಮನೆ ಮಾಡೀ - ವಿಶ್ವಜ್ಞ ತೀರ್ಥರಶಾಂತ ಸೇವೆಯ ಗೂಡೀ - ಮೆರೆಯುತಿಹ ನೋಡೀ ಪ ಕಂತು ಸಿರಿ | ಕಾಂತ ವಿಠಲ ಶಾಂತಮೂರುತಿಸಂತ ಯತಿವರರಂತರಂಗದಿ | ಚಿಂತಿಸುತಲೇಕಾಂತ ಪೂಜೆಗೆ ಅ.ಪ. ಉತ್ತಮ ಮತಿ ಸುದತೇರು - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ದ್ರುತ - ಕೃತಿವಾಸನ ಸಖನ ಪರಮ - ಸು | ಹೃತ್ತಮೋತ್ತಮ ಚಿತ್ಸುಖಪ್ರದಚಿತ್ತವಿಸು ಚಿತ್ತಾಖ್ಯ ಪೀಠಿಕೆ | ಸತ್ಯಕಾಮ ಶರಣ್ಯ ಮೂರುತಿ 1 ಕಾಯ ಭವಪಿತ ತೋಯಜಾಕ್ಷನೆ | ದಾಯ ನಿನ್ನದು ಎನ್ನ ಗತಿಗೇಪ್ರೇರ್ಯ ಪ್ರೇರಕ ಶ್ರೀಗುರು | ಗೋವಿಂದ ವಿಠಲನೆ ಕಾಯೋ ಬೇಗ 2
--------------
ಗುರುಗೋವಿಂದವಿಠಲರು
ಬಾಗುವ ತೆಂಗಿನ ಮರನೋಡ ರಂಗನ ಅಂಘ್ರಿಗೆರಗುವಂತೆ ಸಖಿಯೆ ಪ. ಶೃಂಗಾರದ ವನ ನೋಡ ಪಂಚರಂಗದ ಗಿಳಿ ನೋಡ ಮಂಗಳ ಸ್ವರ ನೋಡ ಕೋಕಿಲ ರಂಗನ ಪಾಡುತಲಿವೆ 1 ಮೃಗ ನೋಡ ಕಸ್ತೂರಿ ಹರಿಪಾದಕೆ ಆತುರದಿ ಬರುತಲಿವೆ 2 ನೆಲ್ಲಿ ನೇರಲೆ ನೋಡ ಪುಷ್ಪ ಚೆಲ್ಲಿ ನಲಿಯುತಲಿವೆ ಮಲ್ಲ ಮಲ್ಲಿಗೆ ನೋಡ ಹರಿಪಾದ ಪಲ್ಲವಕೆ ಎರಗುತಿವೆ 3 ಸಾರ ಪಕ್ಷಿಗಳ ನೋಡ ಹರಿಗುಣ ಸಾರುತ ನಲಿಯುತಿವೆ4 ನಾಗ ಪುನ್ನಾಗ ನೋಡ ಸಂಪಿಗೆ ಪರಿಮಳ ನೋಡ ಹಾಂಗೆ ಕ್ಯಾದಿಗೆ ನೋಡ ಹರಿಪಾದ ಕ್ಹೋಗಿ ಎರಗುತಿವೆ 5 ಕುಸುಮ ನೋಡ ತುಳಸಿ ವಿರಾಜಿಸುªವನÀ ನೋಡ ಸಹಜದವನವ ನೋಡ ರಂಗನ ಪೂಜೆಗೆ ಒದಗುವಂತೆ 6 ಮಂದ ಮಾರುತ ನೋಡ ಪರಿಮಳ ತಂದು ಬೀಸುತಲಿದೆ ಸುಂದರ ಲತೆ ನೋಡ ರಂಗಗೆ ಫಲ ತಂದು ಅರ್ಪಿಸುವಂತೆ7 ಓಕುಳಿ ಕುಣಿನೋಡ ನಿಲ್ಲಿಸಿದ ಜೀಕಳಿ ಗೊಂಬೆಗಳ ಲೋಕ ನಾಯಕ ಹರಿಗೆ ಚಿಮ್ಮುತ ಹಾಕುವ ಪರಿಯಂತೆ 8 ಸಾಲು ಮರಗಳ ನೋಡ ರಂಗಗೆ ಫಲ ಮೇಲಾಡಿ ಮೆಲಿಸುವಂತೆ ಲಾಲಿಮಣಿಯ ನೋಡ ರಾಮೇಶನ ವಾಲೈಸಿ ಕರೆಯುತಿವೆ9
--------------
ಗಲಗಲಿಅವ್ವನವರು
ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆ ಎರೆದ ಶ್ರೀ ಕೃಷ್ಣನಾಮ ||ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನ ಜಯಿಸಿತೈ ಕೃಷ್ಣನಾಮ |ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ 1ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||ಗೋಪವನಿತೆಯರೆಲ್ಲ ಕುಟ್ಟುತಲಿ - ಬೀಸುತಲಿ ಪಾಡುವುದು ಕೃಷ್ಣನಾಮ |ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ 2ಸುಖದ ಅವಸಾನದಲಿ ಈ ನಾಮ ಗಾಯನವು ಶ್ರೀಕೃಷ್ಣದಿವ್ಯನಾಮ |ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ 3
--------------
ಪುರಂದರದಾಸರು