ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ. ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1 ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2 ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3 ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4 ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5 ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6 ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7 ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8 ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9
--------------
ಗಲಗಲಿಅವ್ವನವರು
ಗೋಪಸತಿಯರೆಲ್ಲ ಕೇಳೆರೆನ್ನಯ ಮಾತ ಪರಿ ಕೂಸಿನ ಕಂಡೀರ್ಯಾ ಪ ತೊಟ್ಟಿಲೊಳಗಿಟ್ಟು ವತ್ತಿ ಮಾತಾಡದೆ ಮುಟ್ಟದೆ ಉಣಲಿಕ್ಕೆ ಕುಳಿತಿರಲು ಚಿಟ್ಟಕ್ಕಿ ಚೀರೆದ್ದು ಭೇಟಿ ತಾನಳುತಿಹ ಹೊಟ್ಟಿ ತುಂಬಾ ಉಣಲೀಸ ಎಷ್ಟೆಂದೇಳಲೆ ನಾನು 1 ಬಣ್ಣಿಸಿ ಬಣ್ಣಿಸಿ ಪದವ ಪಾಡಿ ತೂಗಿ ಥಣ್ಣಾಗೆ ಬೀಸಿ ಬೀಸಣಿಕೆಯಲಿ ಕಣ್ಣ ಮುಚ್ಚಿಸಿದೆವೆಂದರಿತು ಸುಪ್ಪಾಣಿಸೆ ಅಣ್ಣ ತಾನೇಳುವ ನಿದ್ರೆಗೈಯ್ಯಲೀಸ 2 ಅನಿಮಿಷರಾದೆವೆ ಅನಶನರಾದೆವೆ ಮನಸು ಕೂಸಿನಲ್ಲೆ ನಟ್ಟಿಹುದೆಮಗೆ ಮನೆಕೆಲಸಗಳಲ್ಲ ಎಲ್ಲಿವೆ ನಮಗಿನ್ನು ತನಯ ಪುಟ್ಟಿದ ಪುಣ್ಯದಿಂದಲ್ಲಿನ್ನೇನೆಂಬೆ 3 ಚಿಕ್ಕವರೊಳು ಪೋಗಿ ಮಕ್ಕಳಾಟಿಕೆ ಆಡಿ ಲೆಖ್ಖವಿಲ್ಲದ ದೂರು ಘಕ್ಕನೆ ತರುವ ರಕ್ಕಸರೆನÀಲು ತಾ ಲೆಕ್ಕಿಸದವರ ಸೊಕ್ಕು ಮುರಿವನಿವನಕ್ಕೊಜಾಕ್ಕೇನೆಂಬೆ4 ದೇವತೆಗಳ ಮೀಸಲಾವಾಗ ಮೆಲುವನು ಸೇವಕರಂತಲ್ಲೆ ತಾವಾ ಹೊರೆ ದಾವಾದಿ ಭಯದಿಂದ ಕಾವಾನೀತನೆ ವಾಸು - ದೇವಾವಿಟ್ಠಲನೆಂದು ಭಾವಿಸಿ ತಿಳಿವೆನು 5
--------------
ವ್ಯಾಸತತ್ವಜ್ಞದಾಸರು
ಪಾರಿಜಾತ ಶ್ಲೋಕ : ದ್ವಾರಾವತಿಯಲಿ ದÀನುಜದಲ್ಲಣ ಮುಕುಂದ ಸಾರೆ ರುಕ್ಮಿಣಿಸಹಿತ ಆನಂದದಿಂದ ವಾರಿಜಾಂಬಕ ವಾಲಗದೊಳು ಚಂದ ನಾರಂದಮುನಿ ತಾ ಪಾರಿಜಾತವ ತಂದ 1 ಪದ : ಬಲ್ಲಿದ ಮುನಿಯ ಕುಳ್ಳಿರಿಸಿದ ಸತ್ಕರಿಸಿದ ಪುಷ್ಪಯಾರಿಗೆ ಎಂದ ವಲ್ಲಭೆರುಕ್ಮಿಣಿಗಲ್ಲದೆ ಬ್ಯಾರೆ ಸಲ್ಲದು ಎಲ್ಲ ನೀನು ಬಲ್ಲದೆ ಇಂತೆಂದ ಈ ಸುದ್ದಿ ಸತ್ಯಭಾಮೆಗೆ ತಂದು ಹೇಳಿದರಂದು ಕೇಳಿದಳಾಕೆ ನಿಂದು ಮನದಲ್ಲಿ ಅತಿನೊಂದು 1 ಶ್ಲೋಕ : ಇಂದ್ರಲೋಕದ ಚಂದದ ಕುಸುಮವನ್ನು ಮಂದಗಮನೆಯ ಮುಡಿಗೆ ತಾ ಮುಡಿಸಿದನು ಎರವು ಇಲ್ಲವು ಕಾಣಿ ಇಂದು ಮಾಡಿದ ಕುಹಕವ ಕೃಷ್ಣ ತಾನು 2 ಇನ್ನಾರಿಗೆ ಪೇಳುವೆನು ರುಕ್ಮಿಣಿ ತನ್ನ ಜೀವ ಬಹುಪ್ರೀತಿ ಬಡಿಸಿದ ಠಕ್ಕುಠವಳಿಗಳಿಲ್ಲಿ 2 ಶ್ಲೋಕ : ಮೆಚ್ಚಿ ಬಂದೆನೆ ಮೋಹಕ್ಕೆ ಮರುಳಾದೆನೆ ಹಚ್ಚಿರೆ ಮಾತ ಹರಿಯು ತಾ ಕೇಳಿದನೆ ನೆಚ್ಚಿ ಇದ್ದೆನೆ ಎನ್ನೊಳು ವಂಚಿಸಿದನೆ ರಚ್ಚಿಗಿಕ್ಕಿದ ರಂಪು ಮಾಡಿದ ಕಾಣೆ 3 ಪದ : ಮಾರನಟ್ಟುಳಿ ತಾಳಲಾರೆನೆ ಮುಖದೋರನೆ ಇನ್ನೇನು ತೆರನೆ ಕಂತು ಕಮಲಜನಯ್ಯ ಏನೆಂದು ತಿಳಿಯದು ಬಹು ಪ್ರೀತಿ ಇದ್ದವ[ಳ] 3 ಶ್ಲೋಕ : ಮಳೆ ಇಲ್ಲದ ಮೇಘವಿದ್ಯಾತಕ್ಮಮ್ಮ ಬೆಳೆ ಇಲ್ಲದ ಭೂಮಿ ಮತ್ಯಾತಕಮ್ಮ ಗಿಳಿಇಲ್ಲದ ಗೂಡು ತಾನ್ಯಾತಕಮ್ಮ ತಾಳಲಾರೆನೊ ಶ್ರೀ ಕೃಷ್ಣನಿಲ್ಲದೆ ಎಮ್ಮ 4 ಮಾತೆನ್ನ್ಯಾಕ ಪಡೆದಳೊ ಕುಹಕ ಮೂರುಲೋಕ ಪ್ರಸಿದ್ಧ ಓಡಿ ತನಗ್ಯಾಕಿದು ಬ್ಯಾಡಿ 4 ಶ್ಲೋಕ : ಬಿಸಜಾಕ್ಷನ ಬಹಳ ನಂಬಿದ್ದೆ ನಾನು ವಶವಾದನೆ ಒಲಿದು ರುಕ್ಮಿಣಿಗೆ ತಾನು ಅಟ್ಟುಳಿ ಇದೇನು ಆಸೆಬಟ್ಟೆನೆ ಬಹಳ ವಸುದೇವ ಸುತಗೆ 5 ಎಲ್ಲರೊಡನೆ ಕೋಪಿಸುತ ಮನದೊಳು ಮರುಗುತ ಸುರಪಾರಿಜಾತವೆ 5 ಶ್ಲೋಕ :ದೇವಲೋಕದ ಹೂವ ತನಗಿಲ್ಲವಲ್ಲ ಭಾವೆ ಎನ್ನೊಳು ಮುನಿಯದೆ ಬಿಡುವಳಲ್ಲ ಆವ ಪರಿಯಲಿ ತಿಳಿದು ಹೇಳುವೆನು ಸೊಲ್ಲ ಜೀವದೊಲ್ಲಭೆಯೊಡನೆ ಪಂಥವು ಸಲ್ಲ 6 ಎನ್ನೊಡನೆ ನುಡಿಯಳೊ ಇಂದು ಅಪ್ರಬುದ್ಧನಾದರೆ ಕೋಪವನು ತಾಳುವಳೊ ಇಂ ಬಾಗಿಲೊಳು ನಿಂದನು 6 ಶ್ಲೋಕ :ಚಿತ್ತದೊಲ್ಲಭೆ ಚದÀುರೆ ಮೋಹನಾಕಾರೆ ಮುತ್ತುರತ್ನವ ಮನೆಯೊಳಗೆಲ್ಲ ಬೀರಿ ಎತ್ತ ಹೋದಳೊ ಎನ್ನ ಪ್ರಾಣದ ನಾರಿ ಸತ್ಯಭಾಮೆಯ ಸುಳುಹು ಕಾಣೆನು ತೋರಿ 7 ಕೋಕಿಲವಾಣಿಯ ಇನ್ನೆಲ್ಲಿ ಹೋದಳು ತೋರಿಸೆ ಹತ್ರ ಸೇರಿಸೆ ಬಂದೆನು ಹಾರೈಸಿ ನಿಂತವರು ಕಣ್ಣು ಮಾ[ತಾ]ಡಿ 7 ಶ್ಲೋಕ :ಹಾಸಿ ಮಲಗಿದ್ದ ಸತಿಯ ಕಂಡು ಬೀಸಣಿಕೆಯಲಿ ಬೀಸಿದ ಕೃಷ್ಣ ತಾನು ಸೂಸು ಪರಿಮಳ[ದ] ಪಾರಿಜಾತದ ಹೂವ ಹಾ- ರÉೈಸಿ ಕಂಗಳು ತೀರ[ವು] ನೋಡಿದಳು ಕಾಂತೆ 8 ಫಲ್ಗುಣನ ಸಾರಥಿಯ ಇದು ಏನು ಸೋಗೆಂದು ಹಿಂಡು ಸ್ತ್ರೀಯರ ಶಿರೋರನ್ನಳೆ ಮೋಹನ್ನಳೆ ಮುನಿಸ್ಯಾತಕೆನ್ನೊಡನೆ ಅಪರಾಧವ ಕ್ಷಮಿಸೆ 8 ಶ್ಲೋಕ :ಅಕ್ಕರಿಂದಲೆ ರುಕ್ಮಿಣಿಗೆ ಇತ್ತ ಹೂವ ಮಿಕ್ಕ ಸತಿಯರಿಗ್ಯಾತಕೆಂಬ ಭಾವ ಕಕ್ಕುಲಾತಿಯ ಕಂಡೆ ನಿನ್ನಲ್ಲಿ ಜೀವ ಸೊಕ್ಕಬ್ಯಾಡವೊ ಸಾಕು ಹೋಗೆಲೊ ಗೋವ 9 ಮನ್ನಿಸೆ ಕೃಪಾಸಿಂಧು ಕೋಕಿಲಸ್ವರಗಾನೆ ಕುಳ್ಳಿರಿಸಿದ ಹೆಳವನಕಟ್ಟೆಯ ರಂಗನು ಕೃಪಾಂಗನು ದೇವೋತ್ತುಂಗ ವಿಕ್ರಮನು 9
--------------
ಹೆಳವನಕಟ್ಟೆ ಗಿರಿಯಮ್ಮ
ಚಿಹಿಹಳಿ- ಥೂಖೋಡಿಪಾಪಿ ಮನವೇ ಇಂಥ-|ಕುಹಕಬುದ್ಧಿಯ ನೀ ಬಿಡು ಕಾಣೋ ಮನವೇಪಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ 1ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||ಜಗದೀಶ್ವರನ ದಿನದಿ ಜಾಗರಕೆ ಕರೆದರೆ |ಮುಗಿಲ ಹರಿದು ಧರೆಗಿಳಿದಂತೆ ಮನವೇ 2ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||ಆ ಸಮಯದಲೊಬ್ಬ ಕಾಸು ಕೊಡಲು ಅವನ |ದಾಸಿಯ ಮಗನಂತೆ ಬೆಂಬಿಡದೆ ಮನವೇ 3ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |ಕರೆಯದ ಮುನ್ನವೆ ಹೊರೆಹೊರಟೆ ||ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ||ಎಂದೆಂದಿಗೂ ನಮ್ಮ ಪುರಂದರವಿಠಲನ |ಹೊಂದಿಹೊಂದಿ ನೀ ಸುಖಬಾಳೊ ಮನವೆ 5
--------------
ಪುರಂದರದಾಸರು
ಹೇಗೆ ಅರ್ಚಿಸಲಿ ಮೆಚ್ಚಿಸಲಿ ನಿನ್ನನಾಗಶಯನ ನಾರದವಂದಿತನೆ ದೇವಾ ಪಮಂಗಳಾಭಿಷೇಕಕೆಉದಕತರುವೆನೆನೆಗಂಗೆಯ ಅಂಗುಟದಿ ಪಡೆದಿಹೆಯೊ ||ಸಂಗೀತ ಕೀರ್ತನೆ ಪಾಡುವೆನೆಂದರೆಹಿಂಗದೆ ತುಂಬುರ ನಾರದರು ಪಾಡುವರೊ 1ಪುಷ್ಪವ ತಂದು ನಿನಗರ್ಪಿಸುವೆನೆಂದರೆಪುಷ್ಪ ಫುಲ್ಲಯಿಸಿದೆ ಹೊಕ್ಕುಳಲಿ ||ಮುಪ್ಪತ್ತು ಮೂರ್ಕೋಟಿ ದೇವತೆಗಳು ನಿನಗೊಪ್ಪಯಿಸೆ ನೈವೇದ್ಯ ನಿತ್ಯತೃಪ್ತನು ನೀನು 2ಕೋಟಿಸೂರ್ಯರ ಕಾಂತಿ ಮಿಗಿಲಾದವನಿಗೊಂದುಮೋಟು ದೀವಿಗೆ ಬೆಳಗೆ ಬೆಳಕಹುದೆ? ||ಸಾಟಿಗಾಣದಸಿರಿಉರದೊಳು ನೆಲಸಿರೆಪೋಟುಗಾಸನು ಎಂತು ಕಾಣಿಕೆಯಿಡಲಯ್ಯ 3ಹಾಸಿಗೆಯನು ನಿನಗೆ ಹಾಸುವೆನೆಂದರೆಶೇಷನ ಮೈಮೇಲೆ ಪವಡಿಸಿಹೆ ||ಬೀಸಣಿಕೆಯ ತಂದು ಬೀಸುವೆನೆಂದರೆಆಸಮೀರಣ ಚಾಮರವ ಬೀಸುತಿಹನೋ4ನಿತ್ಯಗುಣಾರ್ಣವ ನಿಜಸುಖ ಪರಿಪೂರ್ಣಸತ್ತು ಚಿತ್ತಾನಂದ ಸನಕಾದಿ ವಂದ್ಯ ||ಮುಕ್ತಿದಾಯಕ ನಮ್ಮಪುರಂದರವಿಠಲನುಭಕ್ತಿಪ್ರಿಯನು ಎಂದು ಭಜಿಸಿ ಕೊಂಡಾಡುವೆ 5
--------------
ಪುರಂದರದಾಸರು