ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಪಾಡೆಲೆ ಸಕಲಾಪಧ್ಹಾರಿಣಿ ಕೊಲ್ಲಾಪುರಗತ ಕಮಲೆ ಪ. ಪರಿ ಹರಿಯ ದಯಾಪಾತ್ರಳೆ ಶುಭನೂಪುರಾದಿ ಸುಕಲಾಪೆ ಶೋಭಿತೆ ಭ್ರೂ-ಚಾಪ ಚಲನದಿಂದ ಪವಮಾನನಿ-ಗೆ ಪದದೇ ಭವತಾಪಗಳಳಿದು ಅ.ಪ. ಇಂದೀವರವರಮಂದಿರನಂದಿನಿ ಚಂದ್ರಜಯಿಪ ವದನೆಬೃಂದಾರಕ ಮುನಿವಂದಿತ ಪದಯುಗೆ ಕುಂದಕುಟ್ಮಲರದನೆ ಮದನೆ ಮುಕುಂದ ಹೃದಯಸದನೆಇಂದ್ರನೀಲನಭ ಸುಂದರತನು ಗುಣ-ಸಾಂದ್ರ ಇಂದುಮುಖಿ ಮಂದರಧರಗೋ-ವಿಂದ ಬಂಧುನುತೆ ಬೃಂದಾವನಪತಿನಂದನಂದನನಾನಂದಿನಿ ವಂದಿತೆ 1 ಕನ್ಯಾಮಣಿ ಜಗನ್ಮಾನ್ಯಾಮೃತ ಪಾವನ್ನಾಧರ ಬಿಂಬೆಘನ ಕಲಶ ಕುಚವನ್ನು ಧರಿಪ ಕಟಿಸಣ್ಣ ಘನನಿತಂಬೆ ಅಂಬೆ ಚಿನ್ನಪುತ್ಥಳಿ ಬೊಂಬೆಅನ್ನವಸನ ಧನಧಾನ್ಯಕಾಗಿ ಪರ-ರನ್ನ ಯಾಚಿಸಿ ಬಲು ಖಿನ್ನನಾಗುತಲಿನಿನ್ನನು ಮರೆದೆನು ಎನ್ನವಗುಣಗ-ಳನ್ನು ಎಣಿಸದಿರು ಮನ್ನಿಸು ಬಿನ್ನಪ 2 ಕಪೋಲ ಶೋಭಿತ ಕೀಲಾಲಜಾತಪಾಣಿಕೇಳಿಲಿ ಯಮುನಾಕೂಲದಿ ಹರಿ ದು-ಕೂಲಚೋರನ ರಾಣಿ ಜಾಣೆ ಶುಶ್ರೋಣೆ ಜಗತ್ರಾಣೆಕಾಳಕೂಟಸಮ ಕೀಳು ವಿಷಯದಲಿಬೀಳುವುದೆನ್ನ ಮನ ಕೀಳಿಸಿ ಶ್ರೀಗೋ-ಪಾಲವಿಠಲನನುಗಾಲ ಸೇವಿಪಂತೆಶೀಲವೀಯೆಯೆಂದು ಕೇಳುವೆ ಲಾಲಿಸೆ 3
--------------
ಗೋಪಾಲದಾಸರು
ಕೊಲ್ಹಾಪುರದ - ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ. ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ - ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು - ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ 1 ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ - ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ 2 ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ 3
--------------
ಗುರುಗೋವಿಂದವಿಠಲರು
ದುರಿತಾರಿಯೊಳು ಮನವಿರಿಸಿ ಸೌಖ್ಯವತಾಳು ನರಕವು ಬರದೊ ಮಾನವಾ ಪ ಪರಿಪರಿ ಜನ್ಮದೆ ಕೊರಗಿ ಕಂಗೆಡಬೇಡ ಸ್ಥಿರವಲ್ಲವೀ ದೇಹವೂ ಭರವಸದಿಂದ ಅ.ಪ ಮಂದಮತಿಯನಾಂತು ನೊಂದು ಸಾಯಲಿಬೇಡ ಕುಂದುಕೊರತೆಗಳಿಲ್ಲವೋ ವಂದಿಸಲು ಹರಿಯ 1 ಎರಡು ಕಂಬದ ಮೇಲೆ ಮೆರೆವ ಗೋಪುರವಿದು ಬಿರುಗಾಳಿಯಿಂದಲೋ ಉರುತರ ಮಳೆಯೊಳೊ ಉರುಳಿ ಬೀಳುವುದೆಂಬುದು ಬರೆದಿಡೊ ಮೂಢಾ 2 ನೀರ ಬೊಬ್ಬುಳಿಯಂತೆ ಆರಿಹೋಗುವುದಿದು ಸೇರದು ಪದುಮಾಕ್ಷನಾ ಆರುದಿನ ಬಾಳಿಗಾರು ಸಮರೆನಬೇಡ ಆರಡಿ ಕಮಲವುತಾ ಸೇರುವವೊಲು 3 ಎನಗೆ ಮುಂದೊದಗುವ ಜನ್ಮಕೋಟಿಗಳೊಳು ಅನುಗಾಲ ದೇಶವಸ್ಥೆಗಳೊಳಗೂ ವನಜನಾಭನೆ ನಿನ್ನ ಘನಪಾದಕಮಲವ ನೆನೆವ ನೆಲೆಸುವಂದದೆ ಅನವರತ ಬೇಡೋ 4 ಜೀವಾತ್ಮ ಪೋಪಾಗ ದೇವದೇವನ ಮರೆವ ಭಾವಗಳೊಳುದಯಿಪವು ಸಾವಕಾಶವ ತೊರೆದು ಮಾಂಗಿರಿರಂಗನ ದಿವ್ಯನಾಮವ ನೆನೆದು ಭಾವುಕನಾಗು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏನಾಯಿತೀ ಜನಕೆ ಮೌನವದು ಕವಿದಂತೆ |ಮಾನುಷ್ಯರಾಗಿ ಮರೆತರು ಹರಿಯನು ಪ.ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3
--------------
ಪುರಂದರದಾಸರು