ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ | ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ ಆಡದಿರಪವಾದಗಳನು ಕೊಂ | ಡಾಡದಿರಿನ್ನು ಚಿಲ್ಲರೆ ದೈವತಗಳನು || ಬೇಡದಿರು ಭಯ ಸೌಖ್ಯವನು ನೀ | ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1 ನರಜನ್ಮ ಬರುವದೆ ಕಷ್ಟ ಇದ- | ನರಿದು ನೋಡು ವಿಪ್ರಾದಿ ಶ್ರೇಷ್ಠ || ಮರಳಿಬಾಹುದು ಉತೃಷ್ಟ | ಕೇಳೆಲವೊ ಮರ್ಕಟ 2 ಹಾಳು ಹರಟೆಗೆ ಹೋಗಬೇಡ ನೀ ಕಂಡ | ಕೂಳನು ತಿಂದು ಒಡಲ್ಹೊರಿಯಬೇಡ || ಕಾಲ ವ್ಯರ್ಥ ಕಳಿಯ ಬೇಡ ನಮ್ಮ | ಶ್ರೀ ಹರಿಯ ದಯಮಾಡ 3 ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ | ಮಣ್ಣುಕೂಡಿದವರ ನೀ ನೋಡಾ || ಅನ್ಯ ಶಾಸ್ತ್ರವನೋದಬೇಡಾ ನಮ್ಮ | ಬೋಧ ಮೈ ಮರೆತಿರಬೇಡಾ 4 ಗೋ ವಿಪ್ರರ ಸೇವೆ ಮಾಡು ಸೋಹಂ | ಭಾವಗಳನು ಬಿಟ್ಟು ದಾಸತ್ವ ಕೊಡು || ಕೇವಲ ವೈರಾಗ್ಯ ಮಾಡು ವಿಜಯ || ಲಜ್ಜೆಯ ಈಡ್ಯಾಡೊ5 ನಾನು ಎಂಬುದು ಬಿಡು ಕಂಡ್ಯ ಎನ್ನ | ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ || ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ | ಬೀಳುವಿ ಯಮಗೊಂಡಾ 6 ಕಷ್ಟ ಪಡದೆ ಸುಖಬರದು ಕಂ- | ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು || ದುಷ್ಟ ವಿಷಯ ಆಶೆ ಜರಿದು ವಿಜಯ- | ಕೂಗೆಲವೊ ಬಾಯಿ ತೆರೆದು 7
--------------
ವಿಜಯದಾಸ
ನರನಾಗ್ಹುಟ್ಟಿದ್ದೀ ಮರುಳೆ ಅರಿವು ಎಲ್ಲಿಟ್ಟಿದ್ದೀ ಪ ವರವೇದಸ್ಮøತಿಶಾಸ್ತ್ರರಿದುನೋಡದೆ ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು ಘನತರ ನೋಯ್ವುವ ನೆನೆಸಿಕೊಳ್ಳದೆ 1 ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ 2 ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು 3
--------------
ರಾಮದಾಸರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ ಆಡದಿರಪವಾದಗಳನು ನೀನು ಕೊಂಡಾಡದಿರು ಚಿಲ್ಲರೆ ದೈವಗಳನು ಬೇಡಾಡದಿರುಭಯ ಸೌಖ್ಯಗಳನು ನೀ ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು 1 ಹಾಳು ಹರಟಿಗ್ಹೋಗ ಬ್ಯಾಡ ಕಂಡ ಕೂಳುಗಳನು ತಿಂದು ವಡಲ್ಹೊರಿಯ ಬೇಡ ಕಾಲ ವೃಥಾ ಕಳಿಯ ಬ್ಯಾಡ ನಮ್ಮ | ಶ್ರೀ ಹರಿ ದಯಮಾಡಾ 2 ನಾನು ಯೆಂಬುದು ಬಿಡು ಕಂಡ್ಯಾ ಎನ್ನ ಮಾನಾಭಿಮಾನದ ಹರಿಯನ್ನು ಕಂಡ್ಯಾ ಜ್ಞಾನಿಗಳೊಡನಾಡು ಕಂಡ್ಯಾ ವಿಷಯ ಬೀಳುವಿ ಯಮಕೊಂಡಾ 3 ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ ಮಣ್ಣು ಕೂಡಿರುವರೆಗೊ ಕೇಳೊ ಮೂಢಾ ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ ಮೈಮರೆದಿರ ಬ್ಯಾಡಾ4 ನರಜನ್ಮ ಬರುವೋದು ಕಷ್ಟ ಅಮ್ಮ ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ ಮರಳಿ ಬಾರದು ಉತ್ಕøಷ್ಟ ನಮ್ಮ ಕೇಳೆಲವೋ ಮರ್ಕಟ 5 ಗೋವಿಪ್ರರ ಸೇವೆ ಮಾಡೋ ಸೋಹಂ ಭಾವಗಳನು ಬಿಟ್ಟು ದಾಸತ್ವ ಕೂಡೋ ಕೇವಲ ವೈರಾಗ್ಯ ಮಾಡೋ ಎಂಟು ಲಜ್ಜೆಯನೀಡ್ಯಾಡೋ6 ಕಷ್ಟ ಪಡದೆ ಸುಖ ಬರದು ಕಂ ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು ದುಷ್ಟ ವಿಷಯದಾಶೆ ಜರಿದು ವಿಜಯ ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು 7
--------------
ವಿಜಯದಾಸ
ಎಲ್ಲವನು ಬಲ್ಲೆನೆನ್ನುವಿರಲ್ಲಸಲ್ಲದಗುಣಬಿಡಲಿಲ್ಲಪ.ಸೊಲ್ಲಿಗೆ ಶರಣರ ಕಥೆಗಳ ಪೇಳುತಅಲ್ಲದನುಡಿಗಳ ನುಡಿಯುವಿರಲ್ಲಅಪಕಾವಿಯನುಟ್ಟು ತಿರುಗುವಿರಲ್ಲಕಾಮವ ಬಿಡಲಿಲ್ಲನೇಮ - ನಿಷ್ಠೆಗಳ ಮಾಡವಿರಲ್ಲತಾಮಸ ಬಿಡಲಿಲ್ಲತಾವೊಂದರಿಯದೆ ಪರರಲಿ ತಿಳಿಯದೆಕೀವದ ಕುಳಿಯಲಿ ಬೀಳುವಿರಲ್ಲ 1ಗುರುಗಳ ಸೇವೆಯ ಮಾಡಿದಿರಲ್ಲಗುರುತಾಗಲೆ ಇಲ್ಲಪರಿಪರಿ ದೇಶವ ತಿರಿಗಿದಿರಲ್ಲಪೊರೆಯುವರಿನ್ನಿಲ್ಲಅರಿವೊಂದರಿಯದೆಆಗಮ ತಿಳಿಯದೆನರಕಕೂಪದಲಿ ಬೀಳುವಿರಲ್ಲ 2ಬ್ರಹ್ಮಜ್ಞಾನಿಗಳೆನಿಸುವಿರಲ್ಲಹಮ್ಮನು ಬಿಡಲಿಲ್ಲಸುಮ್ಮನೆ ಯಾಗವ ಮಾಡುವಿರಲ್ಲಹೆಮ್ಮೆಯ ಬಿಡಲಿಲ್ಲಗಮ್ಮನೆ ಪುರಂದರವಿಠಲನ ಪಾದಕೆಒಮ್ಮೆಯಾದರು ನೀವೆರಗಲೆ ಇಲ್ಲ 3
--------------
ಪುರಂದರದಾಸರು